ಇತ್ತೀಚೆಗೆ ಕುತ್ಲೂರು ಗ್ರಾಮದ “ಶ್ರೀ ಅನಘ” ನಿವಾಸಿ, ಶಿಕ್ಷಕರಾದ ಶ್ರೀ ಅವಿನಾಶ್ ರವರ ಮನೆಯಲ್ಲಿ, ಯಾರು ಇಲ್ಲದ ಸಂಧರ್ಭ ಲಕ್ಷಾಂತರ ರೂಪಾಯಿಯ ಚಿನ್ನಾಭರಣ ಕಳವು ಆಗಿತ್ತು.
ಸುದ್ದಿ ತಿಳಿದು ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಯವರು ಅವರ ಮನೆಗೆ ಭೇಟಿ ನೀಡಿ ಅವರಿಂದ ಮಾಹಿತಿ ಪಡೆದು, ಇದರ ತನಿಖಾ ಪ್ರಗತಿಯ ಬಗ್ಗೆ ಪೊಲೀಸ್ ಇಲಾಖೆಯ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.