ಕುತ್ಲೂರು ಶ್ರೀ ಅನಘ ಮನೆಯ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಗ್ರಾಮದ ಮಹಿಳೆಯರಿಗೆ ನೆಮ್ಮದಿಯ ವಾತಾವರಣವನ್ನು ಕಲ್ಪಿಸಿ ಕೊಡುವಂತೆ ವೇಣೂರಿನ ಪೊಲೀಸ್ ಠಾಣಾಧಿಕಾರಿಯವರಿಗೆ ಗ್ರಾಮದ ಮಹಿಳೆಯರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ , ಗ್ರಾಮ ಪಂಚಾಯತ್ ಸದಸ್ಯೆಯರಾದ ಯಶೋಧಾ ನಿತ್ಯಾನಂದ ಪೂಜಾರಿ, ಆಶಾಲತಾ ಮಹಾಬಲ ಪೂಜಾರಿ,ಮಾಜಿ ಸದಸ್ಯೆಯರಾದ ಪ್ರಮೀಳಾ ರಾಮಚಂದ್ರ ಭಟ್, ಸೇವಾ ಪ್ರತಿನಿಧಿಯವರಾದ ಉಷಾ ಸಂತೋಷ್, ಸಾಮಾಜಿಕ ಕಾರ್ಯಕರ್ತೆ ಪ್ರಜಾತಾ ಪ್ರಭಾಕರ ಹೆಗ್ಡೆ,,ಕುತ್ಲೂರು ಶಾಲಾ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಶ್ವೇತಾ ಜಗದೀಶ್ ಉಪಸ್ಥಿತರಿದ್ದರು.

