ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಹಾಗೂ ಹರಿತಕರ್ಮ ಕಾರ್ಯಕರ್ತೆಯಾದ ಮುಂಡಿತ್ತಡ್ಕ ನೂಜಿಲ ನಿವಾಸಿ ಸಿಸಿಲಿಯಾ ಡಿಸೋಜ (58) ಹೃದಯಾಘಾತದಿಂದ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಮನೆಯಲ್ಲಿ ತೀವ್ರ ನೋವಿನಿಂದ ಕುಸಿತಕ್ಕೊಳಗಾದ ಇವರನ್ನು ಕುಂಬಳೆಯ ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಿಲ್ಲ. ಪಂಚಾಯತಿನ ಕುಟುಂಬಶ್ರೀ ಕಾರ್ಯ ಚಟುವಟಿಕೆಗಳಲ್ಲಿ ಉತ್ಸಾಹಿತರಾಗಿದ್ದ ಇವರು ಜನಾನುರಾಗಿಯಾಗಿದ್ದರು. ಕಳೆದ ಬಾರಿ ಪಂಚಾಯತ್ ಚುನಾವಣೆಯಲ್ಲಿ ಸಿಪಿಐಎಂ ಪ್ರತಿನಿಧಿಕರಿಸಿ ಕಣಕ್ಕಿಳಿದಿದ್ದರು. ಬಳಿಕ ಕಾಂಗ್ರೆಸ್ ಗೆ ಪಕ್ಷಾಂತರಗೊಂಡು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಮೃತರು ಪತಿ ಫಿಲಿಪ್ಸ್ ಡಿಸೋಜ, ಮಕ್ಕಳಾದ ಲವಿಟ(ದುಬೈ), ಅಕ್ಷತ್ ಮೆಲ್ವಿನ್,ಅಕ್ಷತ್ ಸಂದೀಪ್ ಅಳಿಯ, ಕಿರಣ್ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ. ಇವರ ನಿಧನಕ್ಕೆ ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಹಾಗೂ ಆಡಳಿತ ಸಮಿತಿ,ಸಿಬ್ಬಂದಿ ವರ್ಗ, ಕುಟುಂಬಶ್ರೀ ಅಧ್ಯಕ್ಷೆ ಜಲಜಾಕ್ಷಿ, ಸದಸ್ಯರು, ಹರಿತಕರ್ಮ ಕಾರ್ಯಕರ್ತೆಯರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

