ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

0
127

ಉಡುಪಿ :ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಲಕ್ಷ ದೀಪೋತ್ಸವ ಜರುಗಿತು. ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸೋಮವಾರ ಕ್ಷೀರಾಬ್ದಿ ತುಳಸಿ ಪೂಜೆ ನಡೆಯಿತು.
ಬೆಳಿಗ್ಗೆ ಪ್ರಬೋಧೋತ್ಸವ ನಡೆದಿದ್ದು, ಸಂಜೆ ಮಧ್ವಸರೋವರ ಬಳಿ ತುಳಸಿ ವಿವಾಹ ನಡೆಸುವ ಮೂಲಕ ಕ್ಷೀರಾಬ್ದಿಪೂಜೆ, ಸಂಸ್ಥಾನ ದೇವರ ಪೂಜೆ ನಡೆಸಲಾಯಿತು.
ಸಂಜೆ ರಥೋತ್ಸವ ಸಹಿತ ವಿಶೇಷ ಉತ್ಸವಾದಿಗಳಿ ಹಾಗೂ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಕೃಷ್ಣ- ಮುಖ್ಯಪ್ರಾಣರ ರಥಾರೋಹಣ ನಡೆದು ರಥೋತ್ಸವ ಜರುಗಿತು.

LEAVE A REPLY

Please enter your comment!
Please enter your name here