ಬದಿಯಡ್ಕ: ಶ್ರೀ ತುಳುವೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಹಸ್ರ ದೀಪೋತ್ಸವದ ಪ್ರಯುಕ್ತ, ಕೊಡ್ಯಮೇ ಅಂತಲ ಶ್ರೀ ಧರ್ಮ ಚಾವಡಿಯಲ್ಲಿ ಒಂದು ವಿಶೇಷ ಧಾರ್ಮಿಕ ಕಾರ್ಯಕ್ರಮ ಅಕ್ಟೋಬರ್ 24 ಶುಕ್ರವಾರ (24/10/2025) ಸಂಜೆ 6:30ಕ್ಕೆ ಕೊಡ್ಯಮೇ ಅಂತಲ ಶ್ರೀ ಧರ್ಮ ಚಾವಡಿ ಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ದೀಪ ಪ್ರಜ್ವಲನ ಕಾರ್ಯಕ್ರಮ ನೆರವೇರಿಸಲಾಗುವುದು. ಭಕ್ತರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಮೂಲ ಪರಂಪರೆಯ ಆರಾಧನ ಶಕ್ತಿಗಳಾದ ಶ್ರೀ ತುಳುವೇಶ್ವರ, ಶ್ರೀ ತುಳುವೇಶ್ವರಿ ಹಾಗೂ ವರಾಹ ಪಂಜುರ್ಲಿ ಸಾನಿಧ್ಯಕ್ಕೆ ಚೈತನ್ಯ ವೃದ್ಧಿಯಾಗಲೆಂದು ಪ್ರಾರ್ಥನೆ ಸಲ್ಲಿಸಬೇಕೆಂದು ತುಳುವೆರೆ ಆಯನ ಕೂಟದ ವತಿಯಿಂದ ವಿನಂತಿಸಲಾಗಿದೆ.

