ಬದಿಯಡ್ಕ: ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ನಡೆಯಲಿರುವ ದೀಪೋತ್ಸವದ ಪ್ರಯುಕ್ತ ತುಳುವೆರೆ ಆಯನ ಕೂಟ ಬದಿಯಡ್ಕ ಇವರ ವತಿಯಿಂದ ಬದಿಯಡ್ಕ ಶಬರಿಗಿರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮವು ಇಂದು(ಅ. 24) ಸಂಜೆ 6.30ಕ್ಕೆ ನಡೆಯಲಿದೆ.
ಈ ಸಂದರ್ಭದಲ್ಲಿ ಶಬರಿಗಿಯಲಲಿ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಈ ಕಾರ್ಯಕ್ರಮದಲಲಿ ಪಾಲ್ಗೊಂಡು ನಮ್ಮ ಮೂಲ ಪರಂಪರೆಯ ಶ್ರೀ ತುಳುವೇಶ್ವರ ಸಾನಿಧ್ಯ ಕ್ಷೇತ್ರದ ಚೈತನ್ಯ ವೃದ್ಧಿಯಾಗಲೆಂದು ಒಟ್ಟಾಗಿ ಪ್ರಾರ್ಥಿಸೋಣ ಎಂದು ತುಳುವೆರೆ ಆಯನ ಕೂಟವು ವಿನಂತಿಸಿದ್ದಾರೆ.

