ಬೆಂಗಳೂರು: ಭಾರತದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೊಲ್ಯೂಷನ್ಸ್ ಲಿಮಿಟೆಡ್ ಮತ್ತು ಇಟಲಿಯ ಟೊನಿನೊ ಲ್ಯಾಂಬೋರ್ಗಿನಿ ಸಂಸ್ಥೆಗಳು ಜಂಟಿಯಾಗಿ ಇಂದು ಜಾಗತಿಕ ಮಾರುಕಟ್ಟೆಗೆ ತಮ್ಮ ವಿಶೇಷವಾದ, ಸೊಗಸಾದ ಮತ್ತು ಅತ್ಯಾಧುನಿಕ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ಗಳ ಸರಣಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ.
ಸೊಗಸಾಗಿ ವಿನ್ಯಾಸಗೊಳಿಸಿರುವ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ಗಳು ಐಷಾರಾಮಿ ಸಾರಿಗೆ ವಿಭಾಗದಲ್ಲಿ ಹೊಸ ಮಾನದಂಡ ಹಾಕಿಕೊಡಲಿವೆ. ಈ ಮೂಲಕ ಕೈನೆಟಿಕ್ ಗ್ರೀನ್ ಸಂಸ್ಥೆಯು ಈ ವಿಶಿಷ್ಟ 4 ವೀಲರ್ ಸಾರಿಗೆ ವಿಭಾಗಕ್ಕೆ ಪ್ರವೇಶ ಮಾಡಿದೆ ಮತ್ತು ಈ ಮೂಲಕ ಭಾರತದ ವಿದ್ಯುತ್ ವಾಹನ ತಯಾರಕರೊಬ್ಬರು ಜಾಗತಿಕ ಮಟ್ಟಕ್ಕೆ ವಿಸ್ತರಣೆ ಹೊಂದಿದಂತಾಗಿದೆ. ಟೊನಿನೊ ಲ್ಯಾಂಬೋರ್ಗಿನಿಯ ಇಟಾಲಿಯನ್ ವಿನ್ಯಾಸ ಮತ್ತು ಕೈನೆಟಿಕ್ ಗ್ರೀನ್ ನ ಎಲೆಕ್ಟ್ರಿಕ್ ವಾಹನ ಪರಿಣತಿಯ ಸಮ್ಮಿಲನದೊಂದಿಗೆ ಈ ಕಾರ್ಟ್ ಗಳು ತಯಾರಾಗಿವೆ.
ಕಾರ್ಟ್ ಬಿಡುಗಡೆ ಸಮಾರಂಭದಲ್ಲಿ ಭಾರತದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾದ ಶ್ರೀ. ಪೀಯೂಷ್ ಗೋಯಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತದಲ್ಲಿನ ಇಟಲಿಯ ರಾಯಭಾರಿ ಡಾ. ಆಂಟೋನಿಯೊ ಬಾರ್ಟೊಲಿ ಅವರು ಉಪಸ್ಥಿತರಿದ್ದರು. ಕೈನೆಟಿಕ್ ಗ್ರೂಪ್ ನ ಅಧ್ಯಕ್ಷ ಡಾ. ಅರುಣ್ ಫಿರೋಡಿಯಾ ಮತ್ತು ಟೊನಿನೊ ಲ್ಯಾಂಬೋರ್ಗಿನಿ ಸಂಸ್ಥಾಪಕ ಡಾ. ಟೊನಿನೊ ಲ್ಯಾಂಬೋರ್ಗಿನಿ ಅವರು ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳು, ಪ್ರಮುಖ ಗಾಲ್ಫ್ ಕ್ರೀಡಾಸಕ್ತರು, ಪ್ರಮುಖ ಉದ್ಯಮಿಗಳು, ಆತಿಥ್ಯ ಕ್ಷೇತ್ರದ ದಿಗ್ಗಜರು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಭಾಗವಹಿಸಿದ್ದರು.
ಇಟಾಲಿಯನ್ ವಿನ್ಯಾಸ ಮತ್ತು ಭಾರತೀಯ ತಂತ್ರಜ್ಞಾನದ ಸಮ್ಮಿಲನ
ಇಟಾಲಿಯನ್ ವಿನ್ಯಾಸ ಮತ್ತು ಭಾರತೀಯ ಎಂಜಿನಿಯರಿಂಗ್ ನ ಸಮ್ಮಿಲನದಲ್ಲಿ ಬಿಡುಗಡೆಯಾಗಿರುವ ಟೊನಿನೊ ಲ್ಯಾಂಬೋರ್ಗಿನಿ ಗಾಲ್ಫ್ ಕಾರ್ಟ್ ಒಂದು ಐಷಾರಾಮಿ ಕಾರ್ಟ್ ಆಗಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಇಟಲಿಯಲ್ಲಿ ವಿನ್ಯಾಸಗೊಳಿಸಲಾದ ಈ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಟೊನಿನೊ ಲ್ಯಾಂಬೋರ್ಗಿನಿಯ ಬುಲ್ ಹೊಂದಿರುವ ಕೆಂಪು ಲೋಗೋ ಹಾಕಿಕೊಂಡು ಜಾಗತಿಕವಾಗಿ ಮಾರಾಟ ಮಾಡಲಾಗುತ್ತದೆ. ಟೊನಿನೊ ಲ್ಯಾಂಬೋರ್ಗಿನಿ 45 ವರ್ಷಗಳ ಹಿಂದೆ ಡಾ. ಟೊನಿನೊ ಲ್ಯಾಂಬೋರ್ಗಿನಿಯವರಿಂದ ಸ್ಥಾಪಿತವಾದ ವಿಶ್ವದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ಬ್ರಾಂಡ್ ಗಳಲ್ಲಿ ಒಂದಾಗಿದೆ. ಈ ಪ್ರತಿಷ್ಠಿತ ಬ್ರಾಂಡ್ ಕಸ್ಟಮ್ ಫರ್ನಿಚರ್, ಲೈಫ್ ಸ್ಟೈಲ್ ಸಾಮಗ್ರಿಗಳು, ಗಡಿಯಾರಗಳು, ಟಿಎಲ್ ರೊಸ್ಸೊ ಕೆಫೆ, ಬ್ರಾಂಡೆಡ್ ರಿಯಲ್ ಎಸ್ಟೇಟ್ ಕ್ಷೇತ್ರದಿಂದ ಹಿಡಿದು ಆತಿಥ್ಯ ಕ್ಷೇತ್ರದವರೆಗೆ ಉದ್ದಿಮೆಯನ್ನು ಹೊಂದಿದೆ.
ಈ ವಿಶಿಷ್ಟ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್ ಗಳು ಸೊಗಸಾಗಿವೆ ಮತ್ತು ಆಕರ್ಷಕವಾಗಿವೆ. ಅವುಗಳ ವಿನ್ಯಾಸವೂ ಭಿನ್ನವಾಗಿದ್ದು, ಸೊಗಸಾಗಿವೆ ಮತ್ತು ಇಟಾಲಿಯನ್ ಶೈಲಿ ಹೊಂದಿದೆ. ಟೊನಿನೊ ಲ್ಯಾಂಬೋರ್ಗಿನಿ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ಗಳು 2-ಆಸನ, 4-ಆಸನ, 6-ಆಸನ ಮತ್ತು 8-ಆಸನ ಸಂರಚನೆಗಳಲ್ಲಿ ಲಭ್ಯವಿರುತ್ತವೆ. ಈ ಕಾರ್ಟ್ ಗಳನ್ನು ಗಾಲ್ಫ್ ಕೋರ್ಸ್‌ಗಳಿಂದ ಹಿಡಿದು ವಿಶಾಲವಾದ ಐಷಾರಾಮಿ ರೆಸಾರ್ಟ್ ಗಳು, ಹೋಟೆಲ್ ಗಳು, ದೊಡ್ಡ ಖಾಸಗಿ ಎಸ್ಟೇಟ್ ಗಳು, ವಿಶೇಷ ಗೇಟೆಡ್ ಕಮ್ಯುನಿಟಿಗಳು, ವಿಮಾನ ನಿಲ್ದಾಣಗಳು, ಕಾರ್ಪೊರೇಟ್ ಕ್ಯಾಂಪಸ್ ಗಳು, ದೊಡ್ಡ ಮನರಂಜನಾ ಘಟಕಗಳು ಮತ್ತು ಕೈಗಾರಿಕಾ ಸೌಲಭ್ಯಗಳಲ್ಲಿ ಬಳಸಲು ಸೂಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೈನೆಟಿಕ್ ಗ್ರೀನ್‌ನ ಸಂಸ್ಥಾಪಕಿ ಮತ್ತು ಸಿಇಓ ಡಾ. ಸುಲಜ್ಜಾ ಫಿರೋಡಿಯಾ ಮೋಟ್ವಾನಿ ಅವರು, ” ಗಾಲ್ಫ್ ಕಾರ್ಟ್ ವಿಭಾಗವು ಬಹಳ ಸಮಯದಿಂದ ಒಂದು ಹೊಸ ಸಂಚಲನಕ್ಕಾಗಿ ಕಾಯುತ್ತಿತ್ತು. ಅಲ್ಲದೇ ವರ್ಷಗಳಿಂದ, ಗಾಲ್ಫ್ ಕಾರ್ಟ್ ಗಳ ಬಳಕೆಯು ಗಾಲ್ಫ್ ಗಿಂತಲೂ ಮೀರಿ, ಐಷಾರಾಮಿ ರೆಸಾರ್ಟ್ ಗಳು, ವಿಶ್ವದರ್ಜೆಯ ವಿಮಾನ ನಿಲ್ದಾಣಗಳು, ವಿಶಾಲವಾದ ಟೌನ್ ಶಿಪ್ ಗಳು, ಕಾರ್ಪೊರೇಟ್ ಕ್ಯಾಂಪಸ್ ಗಳು ಮತ್ತು ವೈಯಕ್ತಿಕ ಬಳಕೆಗೆ ಬಳಸಲ್ಪಟ್ಟಿವೆ. ಜೊತೆಗೆ ಜನಪ್ರಿಯ ಗಾಲ್ಫ್ ಕಾರ್ಟ್‌ಗಳ ವಿನ್ಯಾಸ ಮತ್ತು ಸ್ಪೆಸಿಫಿಕೇಷನ್ ಗಳು ಹೆಚ್ಚಾಗಿ ಒಂದೇ ಆಗಿವೆ. ಹಾಗಾಗಿ ಜಾಗತಿಕ ಮಾರುಕಟ್ಟೆಯು ಹೊಸ ಉತ್ಪನ್ನಕ್ಕೆ ಕಾಯುತ್ತಿರುವುದು ಖಚಿತವಾಗಿದೆ.
ನಾವು ಈಗ ಸಹಯೋಗ ಮಾಡಿಕೊಂಡಿದ್ದು, ಕೈನೆಟಿಕ್ ಗ್ರೂಪ್‌ನ ಆಟೋಮೋಟಿವ್ ಎಂಜಿನಿಯರಿಂಗ್ ನ ಸುದೀರ್ಘ ಪರಂಪರೆ, ಕೈನೆಟಿಕ್ ಗ್ರೀನ್ ನ ವಿದ್ಯುತ್ ವಾಹನ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಅಗ್ರಗಣ್ಯ ಪರಿಣತಿಯನ್ನು, ನಮ್ಮ ಸಹಭಾಗಿ ಟೊನಿನೊ ಲ್ಯಾಂಬೋರ್ಗಿನಿಯ ವಿನ್ಯಾಸ ಮತ್ತು ಜೀವನಶೈಲಿ ಅನುಭವಗಳಿಗೆ ಜೊತೆಗೂಡಿಸುವ ಮೂಲಕ ಅತ್ಯುತ್ಕೃಷ್ಟ ಉತ್ಪನ್ನವನ್ನು ಒದಗಿಸಲಿದ್ದೇವೆ. ಐತಿಹಾಸಿಕ ಕೆಂಪು ಗುರಾಣಿಯ ಲೋಗೋ ಹೊಂದಿರುವ ನಮ್ಮ ಉತ್ಪನ್ನಗಳನ್ನು ಜಾಗತಿಕವಾಗಿ ಮಾರಾಟ ಮಾಡುವ ಅವಕಾಶವನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದೇವೆ. ಈ ಭಾರತೀಯ ಎಂಜಿನಿಯರಿಂಗ್ ಮತ್ತು ವಿದ್ಯುತ್ ವಾಹನ ಪರಿಣತಿ ಜೊತೆಗೆ ಟೊನಿನೊ ಲ್ಯಾಂಬೋರ್ಗಿನಿಯ ಅಪೂರ್ವ ವಿನ್ಯಾಸ ಸಾಮರ್ಥ್ಯ ಮತ್ತು ಜಾಗತಿಕ ಐಷಾರಾಮಿ ದೃಷ್ಟಿಯ ಸಮ್ಮಿಲನವು ಕೇವಲ ಸಹಭಾಗಿತ್ವ ಮಾತ್ರವೇ ಅಲ್ಲ; ಬದಲಿಗೆ ಇದೊಂದು ಆತ್ಮವಿಶ್ವಾಸದ ಘೋಷಣೆಯಾಗಿದೆ. ನಾವು ಈ ವಿಭಾಗದಲ್ಲಿ ಒಂದು ಸಂಚಲನವನ್ನು ಉಂಟು ಮಾಡಲು ಮತ್ತು ಜಾಗತಿಕವಾಗಿ ನಾಯಕತ್ವವನ್ನು ವಶಪಡಿಸಿಕೊಳ್ಳಲು ಕೆಲಸ ಮಾಡಲು ಸಿದ್ಧರಿದ್ದೇವೆ. ಕೈನೆಟಿಕ್ ಗ್ರೀನ್ ವಿಚಾರದಲ್ಲಿ ಇದು ಭಾರತದಲ್ಲಿ ತಯಾರಾದ ವಿದ್ಯುತ್ ವಾಹನಗಳನ್ನು ವಿಶ್ವಕ್ಕೆ ತೆಗೆದುಕೊಂಡು ಹೋಗುವ ನಮ್ಮ ಜಾಗತಿಕ ಪಯಣದ ಆರಂಭವನ್ನು ಸೂಚಿಸುತ್ತದೆ. ಕೈನೆಟಿಕ್ ಗ್ರೀನ್ ಸಂಸ್ಥೆಯು 2030 ರ ವೇಳೆಗೆ 1 ಬಿಲಿಯನ್ ಡಾಲರ್ ನ ವಿದ್ಯುತ್ ವಾಹನ ವ್ಯವಹಾರವನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದೆ ಮತ್ತು ಈ ಜಂಟಿ ಉದ್ಯಮವು ನಮ್ಮ ಜಾಗತಿಕ ಪ್ರಯಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಹೇಳಿದರು.
ಟೊನಿನೊ ಲ್ಯಾಂಬೋರ್ಗಿನಿ ಸ್ಪಾ ಕಂಪನಿಯ ಉಪಾಧ್ಯಕ್ಷರಾದ ಶ್ರೀ. ಫೆರುಕ್ಸಿಯೋ ಲ್ಯಾಂಬೋರ್ಗಿನಿ ಅವರು ಮಾತನಾಡಿ, “ಕೈನೆಟಿಕ್ ಗ್ರೀನ್ ಜೊತೆಗಿನ ಈ ಸಹಯೋಗವು ನನ್ನ ತಂದೆಯವರು 45 ವರ್ಷಗಳ ಹಿಂದೆ ಸ್ಥಾಪಿಸಿದ ಈ ಬ್ರಾಂಡ್ ನ ಇತಿಹಾಸದಲ್ಲಿ ಒಂದು ಸೊಗಸಾದ ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಒಟ್ಟಿಗೆ, ನಾವು ಎರಡು ಜಗತ್ತಿನ ಅತ್ಯುತ್ತಮವಾದದ್ದನ್ನು ಸಂಯೋಜಿಸುವ ಒಂದು ಯೋಜನೆಯನ್ನು ರೂಪಿಸಿದ್ದೇವೆ. ಇಟಾಲಿಯನ್ ವಿನ್ಯಾಸದ ಸೊಗಸು ಮತ್ತು ಭಾರತೀಯ ತಯಾರಿಕೆಯ ಶಕ್ತಿ, ದಕ್ಷತೆ ಮತ್ತು ಆವಿಷ್ಕಾರದೊಂದಿಗೆ ಉತ್ಪನ್ನ ಒದಗಿಸಲಿದ್ದೇವೆ. ಇದು ಕೇವಲ ಒಂದು ಕೈಗಾರಿಕಾ ಜಂಟಿ ಉದ್ಯಮವಷ್ಟೇ ಆಗಿರದೆ, ಎರಡು ಉದ್ಯಮಗಳ ಸಂಸ್ಕೃತಿಗಳ ನಡುವಿನ ಸೇತುವೆಯಾಗಿದೆ. ಟೊನಿನೊ ಲ್ಯಾಂಬೋರ್ಗಿನಿಯಲ್ಲಿ, ಶೈಲಿ, ಕಾರ್ಯಕ್ಷಮತೆ ಮತ್ತು ಅಸ್ಮಿತೆಯು ದೈನಂದಿನ ಅನುಭವಗಳನ್ನು ಬದಲಿಸುತ್ತವೆ ಎಂದು ನಂಬಿದ್ದೇವೆ. ನಮ್ಮ ಬ್ರಾಂಡ್ ತತ್ವಶಾಸ್ತ್ರವು ನನ್ನ ಕುಟುಂಬದ ಪರಂಪರೆಯಲ್ಲಿ ಆಳವಾಗಿ ಬೇರೂರಿದೆ, ಆದರೆ ನಿರಂತರವಾಗಿ ಆವಿಷ್ಕಾರ ಮತ್ತು ಶ್ರೇಷ್ಠತೆ ಹೊಂದು ಹುಮ್ಮಸ್ಸಿನಿಂದ ಮುನ್ನಡೆಯುತ್ತಿದೆ. ಈ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್ ಗಳ ಮೂಲಕ ನಾವು ಆ ಸಿದ್ಧಾಂತವನ್ನು ಒಂದು ಹೊಸ ವಿಭಾಗಕ್ಕೆ ಪರಿಚಯಿಸುತ್ತಿದ್ದೇವೆ. ನಾವು ಭಾರತವನ್ನು ಕೇವಲ ಒಂದು ಕಾರ್ಯತಂತ್ರದ ಉತ್ಪಾದನಾ ಕೇಂದ್ರವಾಗಿ ಮಾತ್ರವಲ್ಲ, ಒಂದು ಅಭಿವೃದ್ಧಿಯ ಮತ್ತು ಜಾಗತಿಕ ಮಹತ್ವಾಕಾಂಕ್ಷೆಯ ಸಂಕೇತವಾಗಿಯೂ ಆಯ್ಕೆ ಮಾಡಿದ್ದೇವೆ. ಕೈನೆಟಿಕ್ ಗ್ರೀನ್ ಜೊತೆಗೆ ನಾವು ಮೂಲಭೂತ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ. ಗ್ರಾಹಕರ ಮೇಲೆ ಗಮನ, ನಿರಂತರ ಆವಿಷ್ಕಾರ ಮತ್ತು ವಿವರಗಳೆಡೆಗೆ ಸೂಕ್ಷ್ಮ ಗಮನ ನೀಡಲಿದ್ದೇವೆ. ಟೊನಿನೊ ಲ್ಯಾಂಬೋರ್ಗಿನಿ ಗಾಲ್ಫ್ ಕಾರ್ಟ್‌ಗಳು ನಮ್ಮ ಎಲೆಕ್ಟ್ರಿಕ್ ಲೈಫ್ ಸ್ಟೈಲ್ ಸಾರಿಗೆ ವ್ಯವಸ್ಥೆ ರೂಪಿಸುವ ದೃಷ್ಟಿಯನ್ನು ಸಾಕಾರಗೊಳಿಸುತ್ತವೆ. ಈ ಪಯಣವನ್ನು ಭಾರತದಂತಹ ಒಂದು ಚೈತನ್ಯಮಯ ಮಾರುಕಟ್ಟೆಯಲ್ಲಿ ಆರಂಭಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.
ವಿನ್ಯಾಸ ಮತ್ತು ತಾಂತ್ರಿಕ ವಿಶೇಷಣಗಳು
ಆಕರ್ಷಕ ಬಾಹ್ಯ ರೂಪದ ಜೊತೆಗೆ ಇವುಗಳು ಎಂಜಿನಿಯರಿಂಗ್ ಅದ್ಭುತವನ್ನು ಹೊಂದಿದ್ದು, ಅಪೂರ್ವ ಕಾರ್ಯಕ್ಷಮತೆಯನ್ನು ಮತ್ತು ಸಂಪೂರ್ಣ ಮನಸ್ಸಿನ ಶಾಂತಿಯನ್ನು ಒದಗಿಸುತ್ತವೆ. ಮ್ಯಾಕ್‌ಫರ್ಸನ್ ಸಸ್ಪೆನ್ಷನ್ ಫೀಚರ್ ಅನ್ನು ಹೊಂದಿದ್ದು, ಸರಳ ಕಾರ್ಯನಿರ್ವಹಣೆಗೆ ಮತ್ತು ದೃಢ ಸ್ಥಿರತೆ ಒದಗಿಸುತ್ತದೆ ಮತ್ತು ಅತ್ಯಾಧುನಿಕ ನಾಲ್ಕು-ಚಕ್ರ ಬ್ರೇಕ್ ಗಳೊಂದಿಗೆ ಹೈಡ್ರಾಲಿಕ್ ಸೌಲಭ್ಯ ಲಭ್ಯವಿದೆ. 45 ಎನ್ಎಂ ಟಾರ್ಕ್ ಮತ್ತು ಶೇ.30ರಷ್ಟು ಗ್ರೇಡೇಬಿಲಿಟಿಯೊಂದಿಗೆ ಅಪೂರ್ವ ಶಕ್ತಿ ಹೊಂದಿದೆ. ಟೊನಿನೊ ಲ್ಯಾಂಬೋರ್ಗಿನಿ ಗಾಲ್ಫ್ ಕಾರ್ಟ್ ಗಳು ಶಾಂತವಾದ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ. ಇದು ಅತ್ಯಾಧುನಿಕ ಲಿ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದ್ದು, ವೈರ್‌ಲೆಸ್ ಬ್ಯಾಟರಿ ಚಾರ್ಜಿಂಗ್ ವ್ಯವಸ್ಥೆ ಲಭ್ಯವಿದೆ. ಇದರಿಂದ ನಿರ್ವಹಣೆ-ಮುಕ್ತ ಕಾರ್ಯಾಚರಣೆ ಮಾಡಬಹುದಾಗಿದ್ದು, 10 ವರ್ಷಗಳ ಜೀವಿತಾವಧಿ ಮತ್ತು 150 ಕಿಮೀ ವರೆಗಿನ ರೇಂಜ್ ಅನ್ನು ಹೊಂದಿವೆ. 5 ವರ್ಷಗಳ ವಾರಂಟಿಯೊಂದಿಗೆ ಮನಸ್ಸಿನ ಶಾಂತಿ ಒದಗಿಸಲಾಗುತ್ತದೆ.
ಈ ವಿಶೇಷ ಗಾಲ್ಫ್ ಕಾರ್ಟ್‌ಗಳಲ್ಲಿ ಉನ್ನತ ಎರ್ಗಾನಾಮಿಕ್ಸ್, ಐಷಾರಾಮಿ ಆಸನಗಳು, ವಿಶಾಲವಾದ ಲೆಗ್‌ರೂಮ್ ಮತ್ತು ಸುಲಭವಾದ ಚಾಲನಾ ಅನುಭವಕ್ಕಾಗಿ ಅತ್ಯುತ್ತಮ ಕಂಟ್ರೋಲ್ ಹೊಂದಿವೆ. ಆಕರ್ಷಕ ವಿನ್ಯಾಸ ಮತ್ತು ಎಂಜಿನಿಯರಿಂಗ್ ಹೊಂದಿದ್ದು, ಇದರ ಯೂನಿವರ್ಸಲ್ ಡ್ರೈವ್ ಸಾಮರ್ಥ್ಯವು ಟೊನಿನೊ ಲ್ಯಾಂಬೋರ್ಗಿನಿ ಗಾಲ್ಫ್ ಕಾರ್ಟ್‌ಗಳಿಗೆ ಎಡ ಮತ್ತು ಬಲಗೈ ಡ್ರೈವ್‌ಗೆ ಸರಾಗವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ವಿಶ್ವದ ಯಾವುದೇ ಭಾಗದಲ್ಲಿ ಸುಲಭವಾಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ.
ಟೊನಿನೊ ಲ್ಯಾಂಬೋರ್ಗಿನಿ ಗಾಲ್ಫ್ ಕಾರ್ಟ್ ಗಳು ಹೆಚ್ಚಿನ ದೈನಂದಿನ ಸೌಕರ್ಯವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಬುದ್ಧಿವಂತ ವೈಶಿಷ್ಟ್ಯಗಳಿಂದ ತುಂಬಿವೆ. ಸ್ಮಾರ್ಟ್ ಟಿ ಎಫ್ ಟಿ ಡ್ಯಾಶ್‌ಬೋರ್ಡ್ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಹಿಲ್ ಹೋಲ್ಡ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಗಳಂತಹ ಅಗತ್ಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಆಧುನಿಕ ಜೀವನಕ್ಕೆ ಸೂಕ್ತವಾಗುವ ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಸೌಲಭ್ಯವಿದೆ. ಜೊತೆಗೆ ಎಲ್ಇಡಿ ಹೆಡ್‌ಲೈಟ್‌ಗಳು ಸ್ಪಷ್ಟ ಗೋಚರತೆಯನ್ನು ಒದಗಿಸುತ್ತವೆ. ಹೆಚ್ಚುವರಿ ಸ್ಟೋರೇಜ್, ಗಾಲ್ಫ್ ಬ್ಯಾಗ್ ಹೋಲ್ಡರ್, ಆನ್-ಬೋರ್ಡ್ ಚಾರ್ಜರ್, ಕ್ಯಾಡಿ ಸ್ಟ್ಯಾಂಡ್ ಮತ್ತು ಮಡಚಬಹುದಾದ ವಿಂಡ್‌ಶೀಲ್ಡ್ ಇತ್ಯಾದಿ ಸೌಲಭ್ಯ ಒದಗಿಸಲಾಗಿದೆ.