ಕರಾವಳಿ ಜನರ ಬಹು ದಿನದ ಬೇಡಿಕೆಯಾದ ಹೈಕೋಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಇಟ್ಟು ಅನೇಕ ಹೋರಾಟಗಳನ್ನು ನಡೆಸಿದ್ದು, ಜನಾಭಿಪ್ರಾಯ ಸಂಗ್ರಹವಾಗಿದ್ದು, ರಾಜ್ಯದ ವಿಧಾನ ಮಂಡಲಗಳಲ್ಲಿ ವಿಷಯವನ್ನು ಪ್ರಸ್ತಾಪಿಸಿ ಈ ಬಗ್ಗೆ ಸರಕಾರ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದು, ಈ ವಿಚಾರದಲ್ಲಿ ಮುಂದಿನ ಹೋರಾಟದ ಹಂತವಾಗಿ ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ನಿಂದ ಪಡೀಲ್ ಗೆ ಜಿಲ್ಲಾಧಿಕಾರಿ ಕಛೇರಿ ಸ್ಥಳಾಂತಗೊಂಡ ಹಿನ್ನೆಲೆಯಲ್ಲಿ ಇಂದಿನ ಜಿಲ್ಲಾಧಿಕಾರಿ ಕಛೇರಿ ಅವರಣದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ಸ್ಥಳ ಮೀಸಲಿಡಲು ಒತ್ತಾಯಿಸಿ ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್.ಕೆ.ಪಾಟೀಲ್ ಇವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿ ಮನವಿ ಸಲ್ಲಿಸಲಾಯಿತು.ಅಲ್ಲದೇ ಈ ವಿಚಾರದಲ್ಲಿ ರಾಜ್ಯದ ಮುಂಖ್ಯಮಂತ್ರಿಯವರಲ್ಲಿ ಹಾಗೂ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಇವರ ಜೊತೆಯಲ್ಲೂ ಚರ್ಚಿಸಲಾಗಿ ಈ ಬಗ್ಗೆ ಸಹಮತ ವ್ಯಕ್ತಪಡಿಸಿರುತ್ತಾರೆ. ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ತಿಳಿಸಿದ್ದಾರೆ.
Home Uncategorized ಕರಾವಳಿ ಮಂಗಳೂರಿನಲ್ಲಿ ಸರ್ಕ್ಯೂಟ್ ಬೆಂಚ್ ಸ್ಥಾಪನೆ ಬಗ್ಗೆ ಸಂಚಾರಿ ಬಗ್ಗೆ ಹಳೆ ಜಿಲ್ಲಾಧಿಕಾರಿಯ ಕಛೇರಿಯನ್ನು ಹೈಕೋರ್ಟ್...