ಮಂಗಳೂರು: ಲಯನ್ಸ್ ಇಂಟರ್‌ನ್ಯಾಶನಲ್ ಲಿಯೋ ಡಿಸ್ಟ್ರಿಕ್ಟ್ 317D ವತಿಯಿಂದ “ಪಾಟಶಾಲಾ ಪ್ರಾಜೆಕ್ಟ್” ಬೈಕಂಪಾಡಿ ಬರ್‌ಟ್ರಾಂಡ್ ರಸ್ಸೆಲ್ ಶಾಲೆಯಲ್ಲಿ ಭವ್ಯವಾಗಿ ಆರಂಭವಾಯಿತು. “ಜ್ಞಾನ – ಚಿತ್ರಕಲೆ – ಸಂಗೀತ” ಎಂಬ ಮೂರ್ನೆಯ ಶಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ವಿದ್ಯಾರ್ಥಿಗಳ ಕನಸುಗಳಿಗೆ ಬಣ್ಣ ತುಂಬುವ ಕೆಲಸವನ್ನು ಲಿಯೋಗಳು ತಮ್ಮ ಉತ್ಸಾಹದಿಂದ ನಿಭಾಯಿಸಿದರು.
ಉದ್ಘಾಟನೆಯನ್ನು ರೇಡಿಯೋ ಸಾರಂಗದ ಮುಖ್ಯ ಕಾರ್ಯಕ್ರಮ ನಿರ್ಮಾಪಕರಾದ ಆರ್‌ಜೆ ಅಭಿಷೇಕ್ ಶೆಟ್ಟಿ ನೆರವೇರಿಸಿದರು.
“ಲಿಯೋಗಳ ಉತ್ಸಾಹ, ಶಿಸ್ತಿನೊಂದಿಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಶಕ್ತಿ ಲಯನ್ ಚಳವಳಿಗೆ ಹೊಸ ಪ್ರೇರಣೆಯಾಗಿದೆ,” ಎಂದು ಹೊಗಳಿದರು. ಅವರು ಈ ಪ್ರಾಜೆಕ್ಟ್‌ನ ಸಾಮಾಜಿಕ ಪ್ರಭಾವವನ್ನು ಗುರುತಿಸಿ, ಇಂತಹ ಚಟುವಟಿಕೆಗಳು ಶಾಲಾ ಮಕ್ಕಳಿಗೆ ಆತ್ಮವಿಶ್ವಾಸ ಹಾಗೂ ಸೃಜನಾತ್ಮಕತೆಯನ್ನು ನೀಡುವುದೆಂದು ಹೇಳಿದರು.

ಈ ಸಂಪೂರ್ಣ ಯೋಜನೆಗೆ ದೃಷ್ಟಿಕೋನ ನೀಡಿದವರು ಜಿಲ್ಲಾ ಲಿಯೋ ಅಧ್ಯಕ್ಷೆ ಲಿಯೋ ಲಯನ್ ಶ್ರಿನಿಧಿ ಶೆಟ್ಟಿ. ಅವರ “ಧ್ವನಿ – ಬದಲಾವಣೆಯ ಧ್ವನಿ” ಎಂಬ ವರ್ಷದ ಥೀಮ್ ನಿಜಕ್ಕೂ ಸೇವಾ ಚಟುವಟಿಕೆಗೆ ಹೊಸ ಶಕ್ತಿಯನ್ನೆತ್ತಿದೆ. ಯುವ ಶಕ್ತಿಯನ್ನು ಒಗ್ಗೂಡಿಸಿ, ಲಿಯೋ ಕುಟುಂಬವನ್ನು ಕೇವಲ ಸೇವೆಗೆ ಮಾತ್ರವಲ್ಲದೆ, ಕಲೆ ಮತ್ತು ಶಿಕ್ಷಣದತ್ತ ಸೆಳೆಯುವಲ್ಲಿ ಅವರ ನಾಯಕತ್ವವನ್ನು ಎಲ್ಲರೂ ಪ್ರಶಂಸಿದರು.
ಪಾಟಶಾಲಾ ಪ್ರಾಜೆಕ್ಟ್ ಮೂಲಕ ಲಿಯೋಗಳು ಬರೆದು ಕೊಟ್ಟ ಪ್ರತಿಯೊಂದು ಬಣ್ಣದ ಗೀರು, ಹಾಡಿದ ಪ್ರತಿಯೊಂದು ರಾಗ, ಹಂಚಿದ ಪ್ರತಿಯೊಂದು ಜ್ಞಾನ – ಎಲ್ಲವೂ ಸಮಾಜಸೇವೆಯ ಕಲರವವಾಗಿ ಮೂಡಿಬಂದವು.
ಈ ಸಂದರ್ಭದಲ್ಲಿ ಜಿಲ್ಲಾ ತಂಡದ ಚೇರ್ ಪರ್ಸನ್ ರಶ್ಮಿ ಕರ್ಕೇರ , ಪವನ್ ಕುಮಾರ್, ಶಿಖಾ ಸುಶಿಲ್, ಹಾಗೂ ಅನೇಕ ಲಿಯೋ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸೇವೆ, ಕಲೆ ಮತ್ತು ಒಗ್ಗಟ್ಟು – ಇವುಗಳ ಮೂಲಕ ಲಿಯೋಗಳು ಸಮಾಜಕ್ಕೆ ಬೆಳಕಾಗುತ್ತಿದ್ದಾರೆ ಎಂಬುದನ್ನು ಪಾಟಶಾಲಾ ಪ್ರಾಜೆಕ್ಟ್ ಮತ್ತೊಮ್ಮೆ ಸಾಬೀತುಪಡಿಸಿದೆ.