ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆಯ ಕೋಲ್ಬೆಟ್ಟು ವನ್ಯ ಶಿಖರ ಲೇಔಟ್‌ನಲ್ಲಿ ಅಲೆದಾಡುತ್ತಿದ್ದ ಚಿರತೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸಿಕ್ಕಿಬಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.

ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮವಾಗಿ ಬೋನು ಅಳವಡಿಸಿದ್ದರು. ಶನಿವಾರ ರಾತ್ರಿ ಚಿರತೆ ಬೋನಿಗೆ ಬೀಳುತ್ತಿದ್ದಂತೆ ಅಧಿಕಾರಿಗಳು ಸುರಕ್ಷಿತವಾಗಿ ಅದನ್ನು ವಶಕ್ಕೆ ಪಡೆದರು.
ಚಿರತೆಯನ್ನು ವೈದ್ಯಕೀಯ ಪರಿಶೀಲನೆಗೆ ಒಳಪಡಿಸಿ ನಂತರ ಸೂಕ್ತ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಬೋನು ಅಳವಡಿಸುವಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ಪ್ರಣೀಕ್ ಕಿನ್ನಿಗೋಳಿ ಹಾಗೂ ಸ್ಥಳೀಯರಾದ ರಾಕೇಶ್ ಅಮೀನ್, ಸತೀಶ್ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಮೂಡಬಿದ್ರಿ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ಪ್ರಣೀಕ್ ಕಿನ್ನಿಗೋಳಿ, ರಾಕೇಶ್ ಅಮೀನ್, ಸ್ಟಾನಿ ಪಿಂಟೋ, ಸ್ಥಳೀಯರಾದ ಸತೀಶ್, ನವೀನ್ ಕುಕ್ಯಾನ್, ಸಳೀಯರು ಉಪಸ್ಥಿತರಿದ್ದರು .

