ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ-ಪುತ್ತಿಗೆ ಚೌಟರ ಅರಮನೆಯ ಕುಡಿ, ಉಳ್ಳಾಲದ ರಾಣಿಯಾಗಿ ಮೆರೆದ ಅಬ್ಬಕ್ಕ ನಮ್ೈೆಲ್ಲರಿಗೂ ಪ್ರೇರಣಾದಾಯಿ. ಪರಕೀಯರನ್ನು ಸ್ವಾಭಿಮಾನದಿಂದ ಎದುರಿಸಿ, ಪ್ರಜೆಗಳಿಗೆ, ಅವರ ಕೃಷಿ ಬದುಕಿಗೆ ಪ್ರೇರಣೆಯನ್ನು ನೀಡಿ, ಎಲ್ಲ ಧರ್ಮಿಯರನ್ನು ಸಮನ್ವಯದಿಂದ ಆದರಿಸಿ , ಕಾಪಾಡಿದ ವೀರ ವನಿತೆ ಅಬ್ಬಕ್ಕಳ ನೈಜ ಚರಿತ್ರೆ, ಶೌ್ಯದ ಸಂಗತಿಗಳು , ಇನ್ನಷ್ಟು ಬೆಳಕಿಗೆ ಬರಬೇಕಾಗಿದೆ. ತನ್ಯೂಲಕ ಮಕ್ಕಳಲ್ಲಿ ದೇಶಪ್ರೇಮ , ಅನ್ಯಾಯದ ವಿರುದ್ದ ಹೋರಾಡುವ, ಸ್ವಾಭಿಮಾನದಿಂದ ಬದುಕುವ ಗುಣಗಳು ಒಡಮೂಡಬೇಕು ಎಂದು ಮೂಡುಬಿದಿರೆ ಜೈನಮರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ ಉದ್ಪಾಟನಾ ಭಾಷಣದಲ್ಲಿ ಆಶಿಸಿದರು .
ಅವರು ನವೆಂಬರ್ 27 ರಂದು ಮೂಡುಬಿದಿರೆಯ ಮಹಾವೀರ ಭವನದಲ್ಲಿ ನಡೆದ ಅಬ್ಬಕ್ಕ ಉಪನ್ಯಾಸ ಸರಣಿಯ 97ನೇ ಕಾರ್ಯಕ್ರಮವನ್ನು ಉದ್ವರಟಿಸಿ ಮಾತನಾಡುತ್ತಿದ್ದರು .
ಮೂಡುಬಿದಿರೆ ದವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ . ತುಕಾರಾಂ ಪೂಜಾರಿ ವೀರ ರಾಣಿ ಅಬ್ಬಕ್ಕಳ ಬಗ್ಗೆ ಉಪನ್ಯಾಸವನ್ನು ನೀಡಿದರು. ಅಬ್ಬಕ್ಕ ವಂಶಸ್ಥ ಕೇಸರಿ ರತ್ನ ರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಚೌಟರ ಅರಮನೆಯ ಕುಲದೀಪ್ ಎಂ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹಾಜರಿದ್ದರು .
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು. ಕಾಜಲ್ ಹಾಗೂ ಗೀತಾ ಪರಿಚಯ ಗೈದರು ಸೌಮ್ಯಶ್ರೀ ವಂದಿಸಿದರು .
.

