ಮುಂಬೈ:- ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ತುಳುವ ಮಹಾಸಭೆ ದೇಶದ ಮಹಾರಾಷ್ಟ್ರದಿಂದಲೂ ಅತ್ಯಧಿಕ ಸಂಖ್ಯೆಯಲ್ಲಿ ಸಂಚಾಲಕರು ಮತ್ತು ಸದಸ್ಯರು ಸೇರ್ಪಡೆಯಾಗುತ್ತಿದ್ದು , ಬೃಹತ್ ಮುಂಬೈ ಸಂಚಾಲಕರಾಗಿ ಆರ್ಯಭಟ ಪ್ರಶಸ್ತಿ ವಿಜೇತ, ನ್ಯಾಯವಾದಿ ರತ್ನಾಕರ್ ಶೆಟ್ಟಿ ಆಯ್ಕೆಯಾಗಿ, ತುಳುವ ಮಹಾಸಬೆಗಾಗಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದ್ದು,
ಇತ್ತೀಚೆಗೆ ರಾಯಗಡ ಜಿಲ್ಲೆಯ ಖಾರ್ ಘರ್ ಎಂಬಲ್ಲಿ ನೆಲೆಯಾಗಿರುವ ತುಳು ಕನ್ನಡಿಗರ ಅಭಿಮಾನಿ ಸಂಘಟನೆ “ತುಳುವೆರ್ ಖಾರ್ ಘರ್” ಇವರ ವತಿಯಿಂದ “ಆಟಿದ ಕೂಟ – ಒಂಜಿ ನೆನೆಪು” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೆಟ್ರು, ತುಳು ಭಾಷಾ ಸಂಸ್ಕೃತಿ, ಆಚಾರ ವಿಚಾರ ಗಳನ್ನು ಉಳಿಸಿ, ಬೆಳೆಸುವ ಮತ್ತು ತುಳುವರ ಹಾಗೂ ತುಳು ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ 1928 ರಲ್ಲಿ ಜನ್ಮ ತಳೆದ ತುಳುವ ಮಹಾ ಸಭೆ ಸಂಘಟನೆಗೆ ಪ್ರೋತ್ಸಾಹ, ಸಹಕಾರ ಕೊಡಬೇಕೆಂದು ನೆರೆದ ತುಳು ಬಾಂಧವರಲ್ಲಿ ವಿನಂತಿ ಮಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಕಾರ್ಪೊರೇಟರ್ ಸಂತೋಷ್ ಶೆಟ್ಟಿ, ಭಾಸ್ಕರ್ ಶೆಟ್ಟಿ ದಕ್ಷಿನ್, ಸಂಜೀವ ಶೆಟ್ಟಿ, ಇಸಾ ಲಾಜಿಸ್ಟಿಕ್ಸ್ ನ CEO , ಕುತ್ತೆತ್ತೂರು ಸಂತೋಷ್ ಶೆಟ್ಟಿ, ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ, ಅಣ್ಣಿ ಸಿ ಶೆಟ್ಟಿ, ಥಾಣೆ ಪರಿಸರದ ತುಳು ಸಾಹಿತಿ ಹಾಗೂ ತುಳು ಲಿಪಿ ಪರಿಣಿತ, ದೇಜು ಡಿ ಶೆಟ್ಟಿ, ಮುಂತಾದವರನ್ನು ಕಾರ್ಯಕ್ರಮ ಸಂಯೋಜಕ ಹಾಗೂ ಸಂಘಟಕ, ನವೀನ್ ಹೆಗ್ಡೆ, ಖಾರ್ ಘರ್, ಕರ್ನಾಟಕ ಸಂಘದ ಅಧ್ಯಕ್ಷ, ಯೋಗೇಂದ್ರ ಕೊಠಾರಿ ಮತ್ತಿತರರು ಫಲತಾಂಬೂಲ ಮತ್ತು ಶಾಲು ಹೊದಿಸಿ ಸತ್ಕರಿಸಿದರು.
ನವಿ ಮುಂಬಯಿಯ ಮಾಜಿ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ಯವರು ಸ್ಥಳೀಯ ತುಳುವರ ಸಂಘಟನೆಯನ್ನು ಅಭಿನಂದಿಸುತ್ತಾ,, ತುಳು ಸಂಸ್ಕೃತಿಯ ಪರಿಮಳವನ್ನು ಖಾರ್ ಘರ್ ಪ್ರದೇಶದಲ್ಲಿ ಪಸರಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಂಡಿರುವುದು ಸಂತೋಷಕರ. ಕಾರ್ಯಕ್ರಮಕ್ಕೆ ಸ್ಥಳ ಅಭಾವವನ್ನು ಮನಗಂಡ ಸಂತೋಷ್ ಶೆಟ್ಟಿ ಯವರು ಮುಂದೆ ಇಂತಹ ಕಾರ್ಯಕ್ರಮದ ಸ್ಥಳಾವಕಾಶಕ್ಕಾಗಿ ತಾನು ಪ್ರಾಧಾನ್ಯ ನೀಡುವುದಾಗಿ ಭರವಸೆಯಿತ್ತರು.
“ಸು ಫ್ರಂ ಸೊ” ಚಲನಚಿತ್ರದ ತಾರೆ, ಕುಮಾರಿ ತನಿಷ್ಕಾ ಶೆಟ್ಟಿ ಉಪಸ್ಥಿತರಿದ್ದು ಮಾನ್ಯ ಅಣ್ಣಿ ಸಿ ಶೆಟ್ಟಿಯವರು ಶಾಲು ಹೊದಿಸಿ ಗೌರವಿಸಿದರು. ವೇದಿಕೆಯಲ್ಲಿದ್ದ ಆಮಂತ್ರಿತರು ಸಮಯೋಚಿತವಾಗಿ ಮಾತನಾಡಿ ಸಭೆಯ ಗೌರವವನ್ನು ಹೆಚ್ಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಅತ್ಯುತ್ತಮವಾಗಿದ್ದು, ತುಳುವ ಮೂಲ ಸಂಸ್ಕೃತಿಯ ಅಡುಗೆ ಪದಾರ್ಥಗಳನ್ನು, ಭಕ್ಷ್ಯ ಭೋಜ್ಯಗಳನ್ನು ತುಳುನಾಡಿನ ಗೃಹಿಣಿಯರು ಮನೆಯಲ್ಲಿಯೇ ತಯಾರಿಸಿ ತಂದು, ಅವುಗಳ ಸವಿಯನ್ನು ತಾವೇ ನೆರೆದ ಅತಿಥಿಗಳಿಗೆ ಉಣಬಡಿಸಿ, ಸಭಿಕರ ಪ್ರೀತಿಗೆ ಪಾತ್ರರಾದರು. ಶೈಲೇಶ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು, ನವೀನ್ ಹೆಗ್ಡೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಜಾಗತಿಕ ಮಟ್ಟದಲ್ಲಿ ನೆಲೆಸಿರುವ ತುಳುವರ ಸಹಕಾರದೊಂದಿಗೆ ಮುಂದುವರೆಯುತ್ತಿರುವ ತುಳುವ ಮಹಾಸಭೆ, ತುಳು ಭಾಷೆ ಸಂಸ್ಕೃತಿ ಮತ್ತು ಪ್ರಾಚೀನ ತುಳು ಭಾಷೆಯ ಜ್ಞಾನವನ್ನು ಇಂದಿನ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ ನೀಡುವ ಉದ್ದೇಶದಿಂದ ಸಂಘಟಿತರಾಗುತ್ತಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಸಂಚಾಲಕರನ್ನು ನೇಮಿಸಲಾಗಿದ್ದು, ಸಂಚಾಲಕರ ಮತ್ತು ಸದಸ್ಯರ ಸೇರ್ಪಡೆ ನಿರಂತರವಾಗಿ ನಡೆಯಲಿದೆ ಎಂದು ತುಳುವ ಮಹಾಸಭೆ ಕಾರ್ಯಾಧ್ಯಕ್ಷ ಡಾ. ರಾಜೇಶ್ ಆಳ್ವ ಪತ್ರಿಕೆಯೊಂದಿಗೆ ಮೇಲಿನ ವರದಿ ಸಹಿತ ವಿವರಗಳನ್ನು ಹಂಚಿಕೊಂಡಿದ್ದಾರೆ.
.
ವರದಿ :-ಮಂದಾರ ರಾಜೇಶ್ ಭಟ್