‘ಮಕ್ಕಳನ್ನು ಮಾದಕ ದ್ರವ್ಯಗಳಿಂದ ದೂರವಿರಿಸೋಣ’; ಹಮೀದ್ ಹಾಜಿ ಕೊಡುಂಗಾಯ್

0
12

ಎಸ್.ಎಂ.ಎ ಮೋಂಟುಗೋಳಿ ರೀಜನಲ್ ವಾರ್ಷಿಕ ಕೌನ್ಸಿಲ್

ಮುಡಿಪು; ‘ ನಮ್ಮ ವಿದ್ಯಾರ್ಥಿಗಳು ಮಾದಕದ ದ್ರವ್ಯದ ಗುಲಾಮರಾಗುತ್ತಿದ್ದಾರೆ. ಅವುಗಳಿಂದ ವಿದ್ಯಾರ್ಥಿಗಳನ್ನು ಮುಕ್ತವಾಗಿಸಲು ಪೋಷಕರು ಹಾಗೂ ಆಡಳಿತ ಮಂಡಳಿಯು ಜಾಗೃತಿಯನ್ನು ನೀಡಬೇಕು’ ಎಂದು ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷರಾದ ಹಮೀದ್ ಹಾಜಿ ಕೊಡುಂಗಾಯಿ ಅವರು ಹೇಳಿದರು. ಅವರು ಎಸ್.ಎಂ.ಎ ಮೋಂಟುಗೋಳಿ ರೀಜನಲ್ ಇದರ ವಾರ್ಷಿಕ ಕೌನ್ಸಿಲ್ ನಲ್ಲಿ ಭಾಗವಹಿಸಿ ಮಾತನಾಡಿದರು. ನಾಸಿರ್ ಮದನಿ ಪಡಿಕ್ಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಎಂ.ಎ. ಮೋಂಟುಗೋಳಿ ರೀಜನಲ್ ಅಧ್ಯಕ್ಷ ಖಾಲಿದ್ ಹಾಜಿ ಭಟ್ಕಳ ಅಧ್ಯಕ್ಷತೆ ವಹಿಸಿದರು.

ಸಮಾರಂಭದಲ್ಲಿ ಎಸ್.ಎಂ.ಎ ಇದರ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ವೇದಿಕೆಯಲ್ಲಿ ಸಯ್ಯಿದ್ ಫತಹುದ್ದೀನ್ ತಂಙಳ್ ಲೆಕ್ಕಸಿರಿ, ಮುಹಿಯ್ಯದ್ದೀನ್ ಸಅದಿ ತೋಟಾಲ್, ಸ್ಥಳೀಯ ಖತೀಬ್ ರವೂಫ್ ಸಖಾಫಿ ಅಲ್ ಅಝ್ಹರಿ ಎಮ್ಮೆಮಾಡು, ಮರಿಕ್ಕಳ ಮುದರ್ರಿಸ್ ಇರ್ಫಾನ್ ಸಖಾಫಿ ವೇಣೂರು ಉಪಸ್ಥಿತರಿದ್ದರು. ಎಂ.ಎಂ.ಸಿದ್ದೀಕ್ ಸಅದಿ ಮಿತ್ತೂರ್ ಸ್ವಾಗತಿಸಿ, ವಂದಿಸಿದರು

LEAVE A REPLY

Please enter your comment!
Please enter your name here