ಎಲ್.ಜಿ. ಸಾಫ್ಟ್ ಇಂಡಿಯಾ ಭವಿಷ್ಯದ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜನಕ್ಕೆ ಮುಂಚೂಣಿಯ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಯೋಗ

0
6

ಎಲ್.ಜಿ. ಸಾಫ್ಟ್ ಇಂಡಿಯಾ ಐಐಟಿ ಮದ್ರಾಸ್, ಐಐಐಟಿ ಬೆಂಗಳೂರು ಮತ್ತಿತರೆ ಮುಂಚೂಣಿಯ ವಿಶ್ವವಿದ್ಯಾಲಯಗಳೊಂದಿಗೆ ಭವಿಷ್ಯದ ತಂತ್ರಜ್ಞಾನ ಆರ್ ಅಂಡ್ ಡಿ ಪಾಲುದಾರಿಕೆ

ಬೆಂಗಳೂರು, ಆಗಸ್ಟ್ 28, 2025: ಸಾಮಾಜಿಕ ಜವಾಬ್ದಾರಿಗೆ ತನ್ನ ದೀರ್ಘಾವಧಿ ಧ್ಯೇಯ ಮತ್ತು ಬದ್ಧತೆಯ ಭಾಗವಾಗಿ ಎಲ್.ಜಿ. ಎಲೆಕ್ಟ್ರಾನಿಕ್ಸ್ (ಎಲ್.ಜಿ.)ಯ ಆವಿಷ್ಕಾರದ ಅಂಗವಾದ ಎಲ್.ಜಿ. ಸಾಫ್ಟ್ ಇಂಡಿಯಾ (ಎಲ್.ಜಿ.ಎಸ್.ಐ) ಇಂದು ತನ್ನ ಸಿ.ಎಸ್.ಆರ್. ಕಾರ್ಯಕ್ರಮದ ಅಡಿಯಲ್ಲಿ ಕಾರ್ಯತಂತ್ರೀಯ ಸಹಯೋಗ ಮತ್ತು ಪ್ರಾಜೆಕ್ಟ್ ಗಳ ಪ್ರಾಯೋಜಕತ್ವವನ್ನು ನಾಲ್ಕು ಮುಂಚೂಣಿಯ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಕಟಿಸಿದ್ದು ಅದು ತಂತ್ರಜ್ಞಾನಕ್ಕೆ ಆದ್ಯತೆ ನೀಡಿದ್ದು ಸೈಬರ್ ಭದ್ರತೆ, ಇಂಡಿಕ್ ಭಾಷೆಯ ಎಐ ಮತ್ತು ಸ್ಮಾರ್ಟ್ ಹೋಮ್ ಕನೆಕ್ಟಿವಿಟಿ ಒಳಗೊಂಡಿದೆ.

ಶಿಕ್ಷಣ ಸಂಸ್ಥೆಗಳು ಈ ಸಂಶೋಧನಾ ಪ್ರಾಯೋಜಕತ್ವವನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮದ್ರಾಸ್(ಐಐಟಿ-ಎಂ), ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ), ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು ಮತ್ತು ಕೊಚ್ಚಿ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಸಿ.ಯು.ಎಸ್.ಎ.ಟಿ.) ಗಳಲ್ಲಿ ನೀಡಲಿದೆ.

ಈ ಸಂಶೋಧನಾ ಅನುದಾನದ ಮೂಲಕ ಎಲ್.ಜಿ.ಎಸ್.ಐ. ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಅಂತರ ತುಂಬಲು ಸ್ಥಳೀಯ ಆವಿಷ್ಕಾರಕ್ಕೆ ವೇಗ ತುಂಬುವ ಗುರಿ ಹೊಂದಿದೆ. ಈ ಉಪಕ್ರಮವು ಸೈಬರ್ ಸೆಕ್ಯುರಿಟಿ, ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ ಕ್ಷೇತ್ರಗಳಲ್ಲಿ ಅನ್ವಯಿಕ ಸಂಶೋಧನೆ ಉತ್ತೇಜಿಸುವ ಉದ್ದೇಶ ಹೊಂದದ್ದು ಈ ಕ್ಷೇತ್ರಗಳು 2030ರ ವೇಳೆಗೆ ಮಲ್ಟಿ-ಬಿಲಿಯನ್ ಡಾಲರ್ ವಲಯಗಳಾಗಿ ಬೆಳೆಯುವ ಸಾಧ್ಯತೆ ಹೊಂದಿವೆ.ಈ ಸಹಯೋಗವು ಎಫ್.ವೈ.2025-26ರವರೆಗೆ ಲಭ್ಯವಿರುತ್ತದೆ ಮತ್ತು ಈ ಹೂಡಿಕೆಯು ಸ್ಥಳೀಯ ಪ್ರತಿಭಯನ್ನು ಪೋಷಿಸಲು ಮತ್ತು ದೇಶಾದ್ಯಂತ ಸದೃಢ ಆರ್ ಅಂಡ್ ಡಿ ಇಕೊಸಿಸ್ಟಂ ನಿರ್ಮಿಸಲು ಎಲ್.ಜಿ.ಎಸ್.ಐ.ನ ಬದ್ಧತೆಯನ್ನು ತೋರುತ್ತದೆ.

ಈ ಬೆಂಬಲಿತ ಸಂಶೋಧನಾ ಉಪಕ್ರಮಗಳನ್ನು ಸೂಕ್ಷ್ಮ, ಭಾರತ-ಕೇಂದ್ರಿತ ತಂತ್ರಜ್ಞಾನದ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಶಿಕ್ಷಣ ಸಂಸ್ಥೆಗಳು ಈ ಕೆಳಕಂಡಂತೆ ನೆರವಾಗುತ್ತವೆ-
• ಐಐಟಿ ಮದ್ರಾಸ್: ದೇಶದ ಸುರಕ್ಷಿತ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಸದೃಢಗೊಳಿಸುವ ಹಾರ್ಡ್ ವೇರ್ ಸೆಕ್ಯುರಿಟಿ ಮಾಡ್ಯೂಲ್ (ಎಚ್.ಎಸ್.ಎಂ.) ಅಭಿವೃದ್ಧಿಪಡಿಸುವ ಮೂಲಕ ಸೈಬರ್ ಭದ್ರತೆಯ ಸುಧಾರಣೆ.
• ಐಐಐಟಿ ಬೆಂಗಳೂರು: ಗ್ರಾಹಕರ ಅನುಭವ(ಸಿ.ಎಕ್ಸ್.) ಅನ್ನು ಸ್ಥಳೀಯ ಭಾಷೆಯ ಬೆಂಬಲದೊಂದಿಗೆ ಉನ್ನತೀಕರಿಸುವ ಸ್ಥಳೀಯ ಭಾಷೆಯ ಸಂವಹನೀಯ ಎಐ ಸಿಸ್ಟಮ್ಸ್ ನಿರ್ಮಾಣ, ಭಾರತದ ಬಹುಭಾಷಿಕ ಜನಸಂಖ್ಯೆಗೆ ಡಿಜಿಟಲ್ ಲಭ್ಯತೆ ಹೆಚ್ಚಳ
• ಅಮೃತ ವಿಶ್ವ ವಿದ್ಯಾಪೀಠಂ: ಡಿವೈಸ್ ಕಮ್ಯುನಿಏಷನ್ ಜಾಲಗಳನ್ನು ಸುರಕ್ಷಿತಗೊಳಿಸಲು ಮತ್ತು ಹೆಚ್ಚಾಗುತ್ತಿರುವ ಸಂಪರ್ಕಿತ ಸ್ಥಳೀಯ ಪರಿಸರಗಳಲ್ಲಿ ಬಳಕೆದಾರರ ಡೇಟಾ ರಕ್ಷಿಸಲು ಸ್ಮಾರ್ಟ್ ಹೋಮ್ ಸೈಬರ್ ಸೆಕ್ಯುರಿಟಿಯನ್ನು ಉನ್ನತೀಕರಿಸುವುದು
• ಸಿಯುಎಸ್ಎಟಿ (ಕೊಚ್ಚಿ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ): ಮ್ಯಾಟರ್ ನಂತಹ ಪರಸ್ಪರ ನಿರ್ವಹಿಸಬಲ್ಲ ಸಂವಹನ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿವಿಧ ಉತ್ಪಾದಕರ ಸ್ಮಾರ್ಟ್ ಹೋಮ್ ಡಿವೈಸ್ ಗಳು ಮತ್ತು ಪ್ಲಾಟ್ ಫಾರಂಗಳು ತಡೆರಹಿತವಾಗಿ ಮತ್ತು ಸುರಕ್ಷಿತವಾಗಿ ಕೆಲಸ ಮಾಡುವಂತೆ ಮಾಡುವುದು.

“ಭಾರತದ ಶೈಕ್ಷಣಿಕ ಸಂಸ್ಥೆಗಳು ಪ್ರತಿಭೆ ಮತ್ತು ದಕ್ಷತೆಯ ಶಕ್ತಿಕೇಂದ್ರಗಳಾಗಿವೆ. ಈ ಮುಂಚೂಣಿಯ ಶಿಕ್ಷಣ ಸಂಸ್ಥೆಗಳನ್ನು ಸಬಲೀಕರಿಸುವಮೂಲಕ ನಾವು ಭಾರತದ ಭವಿಷ್ಯವನ್ನು ವ್ಯಾಖ್ಯಾನಿಸುವ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಮತ್ತು ದೇಶದ ಡಿಜಿಟಲ್ ಮೂಲಸೌಕರ್ಯ ಸದೃಢಗೊಳಿಸಲಿದ್ದೇವೆ. ಈ ಸಹಯೋಗವು ಉಜ್ವಲ, ಸ್ಥಳೀಕರಿಸಿದ ಆವಿಷ್ಕಾರಕ ಇಕೊಸಿಸ್ಟಂ ನಿರ್ಮಿಸಲು ಮತ್ತು “ಮೇಡ್-ಇನ್-ಇಂಡಿಯಾ” ತಂತ್ರಜ್ಞಾನವು ಜಾಗತಿಕ ಮೈಲಿಗಲ್ಲಾಗುವಲ್ಲಿ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ಸಹಯೋಗವು ಭಾರತದ ಅತ್ಯಂತ ಜಾಣ್ಮೆಯ ಮನಸ್ಸುಗಳನ್ನು ಭಾರತದ ನಿರ್ದಿಷ್ಟ ಸವಾಲುಗಳನ್ನು ಎದುರಿಸಲು ಆವಿಷ್ಕಾರಕ ಪರಿಹಾರಗಳನ್ನು ಜೊತೆಯಲ್ಲಿ ಅಭಿವೃದ್ಧಿಪಡಿಸಲು ನೆರವಾಗುತ್ತದೆ” ಎಂದು ಎಲ್.ಜಿ. ಸಾಫ್ಟ್ ಇಂಡಿಯಾ(ಎಲ್.ಜಿ.ಎಸ್.ಐ.)ನ ಅಧ್ಯಕ್ಷ ಶ್ರೀ ಸನ್ ಘ್ಯುನ್ ಚೊ ಹೇಳಿದರು.

ಜಾಗತಿಕವಾಗಿ ವಿಶ್ವವಿದ್ಯಾಲಯಗಳು ಸಕ್ರಿಯವಾಗಿ ಕೈಗಾರಿಕೆಯೊಂದಿಗೆ ಎಐ ಸಂಶೋಧನೆ ಮತ್ತು ಅಪ್ಲಿಕೇಷನ್ ಗಳ ಸುಧಾರಣೆಗೆ ಸಹಯೋಗ ಹೊಂದುತ್ತಿದ್ದು ಜವಾಬ್ದಾರಿಯುತ ಎಐ, ನೈತಿಕ ಪರಿಗಣನೆಗಳು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಎಐ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿವೆ. ಉನ್ನತ ಶಿಕ್ಷಣ ಸಂಸ್ಥೆಗಳು ಸುಧಾರಿತ ಜೆನರೇಟಿವ್ ಎಐ ನಿರ್ವಹಿಸಲು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಜ್ಞಾನನ ಮತ್ತು ಪರಿಣಿತಿಯನ್ನು ಒಗ್ಗೂಡಿಸಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಜಾಲಗಳನ್ನು ರೂಪಿಸುತ್ತಿವೆ.

ಈ ಎಐ ಕ್ರಾಂತಿಯು ವಿಶ್ವದಾದ್ಯಂತ ಅರ್ಥವ್ಯವಸ್ಥೆಗಳು ಮತ್ತು ಸಮಾಜಗಳನ್ನು ಮರು ರೂಪಿಸುತ್ತಿವೆ ಮತ್ತು ಭಾರತವು ಈ ಪರಿವರ್ತನೆಯಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ. ಅದೇ ರೀತಿಯಲ್ಲಿ ಸ್ಮಾರ್ಟ್ ಕನೆಕ್ಟಿವಿಟಿಯು ಎಐ ಹಾಗೂ 5ಜಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಅಳವಡಿಸಿಕೊಳ್ಳುವ ಮೂಲಕ ನೆಟ್ವರ್ಕ್ ದಕ್ಷತೆ ಹೆಚ್ಚಿಸುವ, ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವ ಮತ್ತು ಒಟ್ಟಾರೆ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸುತ್ತಿವೆ. ಸೈಬರ್ ಭದ್ರತೆಯ ಕಾಳಜಿಗಳು ಹೆಚ್ಚಾಗಿ ಎಐನೊಂದಿಗೆ ಸಂಪರ್ಕ ಪಡೆದಿದೆ ಮತ್ತು ಸಂಸ್ಥೆಗಳು ಎಐನ ಅಡ್ಡ ಪರಿಣಾಮಗಳನ್ನು ನಿವಾರಿಸಲು ಮತ್ತು ಎಐ ಪ್ರೇರಿತ ಅವಕಾಶಗಳನ್ನು ಹೆಚ್ಚಿಸಲು ಶ್ರಮಿಸುತ್ತಿವೆ. ವೇಗದಲ್ಲಿ ಬೆದರಿಕೆ ಪತ್ತೆ, ರಿಯಲ್-ಟೈಮ್ ಪ್ರತಿಕ್ರಿಯೆ ಮತ್ತು ಸ್ಮಾರ್ಟ್ ನಿರ್ಧಾರ ಕೈಗೊಳ್ಳುವಿಕೆ ಮೂಲಕ ಎಐ ಸೈಬರ್ ಭದ್ರತೆಯನ್ನು ಪರಿವರ್ತಿಸಲು ನೆರವಾಗುತ್ತಿದೆ.

ವೃದ್ಧಿಸುತ್ತಿರುವ ಪ್ರತಿಭೆ, ಚಲನಶೀಲ ಸ್ಟಾರ್ಟಪ್ ಗಳು ಮತ್ತು ಸರ್ಕಾರದ ಬೆಂಬಲದ ಉಪಕ್ರಮಗಳಿಂದ ಭಾರತವು ಜಾಗತಿಕ ಮಟ್ಟದಲ್ಲಿ ಎಐ ಭವಿಷ್ಯವನ್ನು ಪ್ರಭಾವಿಸಲು ಸಜ್ಜಾಗಿದೆ. ಭಾರತದ ಎಐ ಮಾರುಕಟ್ಟೆ ಮುನ್ನೋಟದ ಪ್ರಕಾರ 2023ರಲ್ಲಿ 10.3 ಬಿಲಿಯನ್ ಯು.ಎಸ್. ಡಾಲರ್ ನಿಂದ 2030ಕ್ಕೆ 184.5 ಬಿಲಿಯನ್ ಯು.ಎಸ್. ಡಾಲರ್ ಮುಟ್ಟಲಿದೆ. ಅದೇ ರೀತಿಯಲ್ಲಿ ಎಐ ಪ್ರೇರಿತ ಸೈಬರ್ ಭದ್ರತೆಯು 7.7 ಬಿಲಿಯನ್ ಯು.ಎಸ್. ಡಾಲರ್ ಮುಟ್ಟಲಿದೆ ಮತ್ತು ಕನೆಕ್ಟಿವಿಟಿ ಮತ್ತು ಪ್ಲಾಟ್ ಫಾರಂ ಫ್ರೇಮ್ವರ್ಕ್ ಗಳಿಂದ ಪ್ರೇರಿತವಾದ ಸ್ಮಾರ್ಟ್ ಹೋಮ್ ವಲಯವು ಅದೇ ಅವಧಿಯಲ್ಲಿ 30 ಬಿಲಿಯನ್ ಯು.ಎಸ್. ಡಾಲರ್ ಮುಟ್ಟುವ ನಿರೀಕ್ಷೆ ಇದೆ. 

LEAVE A REPLY

Please enter your comment!
Please enter your name here