ಗ್ರಂಥಾಲಯ ಗ್ರಂಥಗಳ ದೇವಾಲಯ-ಸಾಲಿಗ್ರಾಮ ಗಣೇಶ್ ಶೆಣೈ

0
1


ದಾವಣಗೆರೆ: ಪುಸ್ತಕಗಳನ್ನು ಓದುವವರ ಮಕ್ಕಳ ಜ್ಞಾನ ಶಕ್ತಿ ಹೆಚ್ಚುತ್ತದೆ, ಶಿಕ್ಷಣಕ್ಕೆ ನಾಂದಿಯಾಗುತ್ತದೆ. ಸಾರ್ವಜನಿಕರು ಈ ಗ್ರಂಥಾಲಯಕ್ಕೆ ಆಗಮಿಸಿ ಗ್ರಂಥಗಳ ಪುಸ್ತಕಗಳನ್ನು ಓದುತ್ತಿದ್ದರೆ ಸಾಮಾನ್ಯ ಜ್ಞಾನ, ಪರಿಜ್ಞಾನಕ್ಕೆ ಪೂರಕವಾಗುತ್ತದೆ. ಈ ಗ್ರಂಥಾಲಯ ಗ್ರಂಥಗಳು ದೇವಾಲಯ ಆಗುತ್ತದೆ ಎಂದು ದಾವಣಗೆರೆಯ ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ತಮ್ಮ ಅಂತರಾಳದ ಅನಿಸಿಕೆಗಳನ್ನು ಹಂಚಿಕೊಂಡರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಭಾರತೀಯ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಇತ್ತೀಚಿಗೆ ಗ್ರಂಥಾಲಯ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಮಾಡಿ ಹಾಗೂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ರೂಪಾ ಶ್ರೀನಿವಾಸ್ ಮಾತನಾಡಿ, ಯಾವುದೇ ವಿದ್ಯಾ ಸಂಸ್ಥೆಗಳು ಮಾಡದೇ ಇರುವುದು ಈ ಗ್ರಂಥಾಲಯವನ್ನು ಭಾರತೀಯ ವಿದ್ಯಾ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಲಾಕುAಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ,ಕಲಾಕುಂಚ ಮಹಿಳಾ ವಿಭಾಗದ ಸಮಿತಿ ಸದಸ್ಯರಾದ ಶಿಲ್ಪಾ ಉಮೇಶ್, ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಭಾರತೀಯ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅರ್ಚನಾ ಮಠ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶಿಕ್ಷಕಿ ನಂದಿನಿ ಎಚ್. ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉದ್ಘಾಟಕರ, ಅತಿಥಿಗಳ ಪರಿಚಯ ಜಯಶ್ರೀ ಕೆ. ಮಾಡಿಕೊಟ್ಟರು, ಪ್ರಾಸ್ತಾವನೆಯನ್ನು ಶ್ರೀದೇವಿ ಕೆ.ನಡೆಸಿಕೊಟ್ಟರು. ಕೊನೆಯಲ್ಲಿ ಶ್ರೀಮತಿ ಸುಜಾತ ಬಿ. ವಂದರ್ನಾಪನೆ ಮಾಡಿದರು.

LEAVE A REPLY

Please enter your comment!
Please enter your name here