ಉಡುಪಿ: ಭಾರತೀಯರ ವಿಮಾ ರಕ್ಷಣೆ ಜೊತೆಗೆ ಮೂಲಭೂತ ಸೌಕರ್ಯ ವೃದ್ಧಿಯಲ್ಲಿ ಭಾರತೀಯ ಜೀವವಿಮಾ ನಿಗಮ ಕೊಡುಗೆ ಅಪಾರವಾಗಿದೆ ಎಂದು ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್. ಭಟ್ ಹೇಳಿದರು.
ಸೋಮವಾರ ಅಜ್ಜರಕಾಡು ಎಲ್ಐಸಿ ಕಚೇರಿಯಲ್ಲಿ 69ನೇ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಕಳೆದ ಏಳು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಐಸಿ ದೇಶದ ನಂ.1 ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕರ್ಣಾಟಕ ಬ್ಯಾಂಕ್ ಎಜಿಎಂ ವಾದಿರಾಜ ಭಟ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ಲಸ್ಟರ್ ಹೆಡ್ ಸುರೇಶ್ ಶುಭ ಹಾರೈಸಿದರು. ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್ ಸ್ವಾಗತಿಸಿದರು. ಉಪಪ್ರಬಂಧಕ ಶ್ಯಾಮಸುಂದರ್ ವಂದಿಸಿದರು. ಶರತ್ ಕುಮಾರ್ ನಿರೂಪಿಸಿದರು. ವಿಮಾ ಸಪ್ತಾಹ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಗಳು ನಡೆಯಲಿದೆ.

