ಸಾಣೂರು ಮುರತಂಗಡಿಯಲ್ಲಿ ಟ್ರಾನ್ಸ್ ಫಾರ್ಮರ್ ಗೆ ಹತ್ತಿದ ವಿದ್ಯುತ್ ಲೈನ್ ಮೆನ್ ಗೆ ಶಾಕ್ ತಗುಲಿದೆ ಎಂದು ತಿಳಿದು ಬಂದಿದೆ. ಇಂದು ಮುರತಂಗಡಿ ಬಳಿ ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಲೈನ್ ಮೆನ್ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಹತ್ತಿದ್ದರು. ಹತ್ತುವ ಮೊದಲು ವಿದ್ಯುತ್ ನ್ನು ನಿಲ್ಲಿಸುವಂತೆ ಅವರು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆನ್ನಲಾಗಿದೆ. ಆದರೆ ತಾಂತ್ರಿಕ ತೊಂದರೆಯಿಂದಾಗಿ ವಿದ್ಯುತ್ ಪ್ರವಹಿಸಿ ಅವರು ಕಂಬದಿಂದ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಮುಂದಿನ ವಿಚಾರ ತಿಳಿದು ಬಂದಿಲ್ಲ .