ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್, ಯುವಕ ಯುವತಿ ಮಂಡಲ (ರಿ.) ಚಿತ್ರಾಪು ಮತ್ತು ಮಹಿಳಾ ಮಂಡಲ (ರಿ.) ಚಿತ್ರಾಪು ಇವರ ಸಂಯುಕ್ತ ಆಶ್ರಯದಲ್ಲಿ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣೆ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ದಿನಾಂಕ 06.07.2025 ರಂದು ಕೆ.ಎಸ್. ರಾವ್ ಸ್ಮಾರಕ ಪ್ರೌಢಶಾಲೆ ಚಿತ್ರಾಪು ಇಲ್ಲಿ ನಡೆದ ಈ ಶಿಬಿರದಲ್ಲಿ ಸಾಮಾನ್ಯ ಕಾಯಿಲೆ, ಇಸಿಜಿ, ಕಿವಿ- ಮೂಗು- ಗಂಟಲು ತಪಾಸಣೆ, ಕಣ್ಣಿನ ತಪಾಸಣೆ, ಶ್ವಾಸಕೋಶ ಮತ್ತು ಚರ್ಮರೋಗ ತಪಾಸಣೆ, ಹೃದಯ ರೋಗ ತಪಾಸಣೆ ಸ್ತ್ರೀರೋಗ ತಪಾಸಣೆ ಮೂಳೆ, ಮಧುಮೇಹ ತಪಾಸಣೆ ರಕ್ತದೊತ್ತಡ ತಪಾಸಣೆ ಇತ್ಯಾದಿಗಳ ಕುರಿತು ನುರಿತ ವೈದ್ಯರ ತಂಡ ತಪಾಸಣೆ ನಡೆಸಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಮಾಡಿದ ಲೈನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಅಧ್ಯಕ್ಷರಾದ ಲಯನ್ ಅನಿಲ್ ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯದ ತಪಾಸಣೆ ಕ್ಲಪ್ತ ಸಮಯದಲ್ಲಿ ಮಾಡಿ ರೋಗವನ್ನು ಸಂಪೂರ್ಣವಾಗಿ ಗುಣಮುಖಗೊಳಿಸಬಹುದು ಆದುದರಿಂದ ಸ್ಥಳೀಯರು ಇಂತಹ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಡಾ. ಸುವಾಂಷಿ (ortho) ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವನ್ನು ಯುವಕ ಮಂಡಲದ ಅಧ್ಯಕ್ಷ ರಾದ ತುಷಾರ್ ಕೆ ವಹಿಸಿದ್ದರು. ಮುಖ್ಯ ಅತಿಥಿ ಯಾಗಿ ಲಯನ್ ಪುಷ್ಪರಾಜ್ ಚೌಟ ರವರು ಆರೋಗ್ಯದ ಕುರಿತು ಪ್ರಾರಂಭ ದಲ್ಲೇ ನಿಗಾ ವಹಿಸಬೇಕು ಎಂದು ಹಿತ ವಚನ ನೀಡಿದರು. ಕಾರ್ಯಕ್ರಮ ದಲ್ಲಿ
ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಸ್ವಾಗತಿಸಿದರು, ಕಾರ್ಯದರ್ಶಿ ಸುದರ್ಶಿನಿ ಮಾರ್ಗರೆಟ್ ಕಾರ್ಯಕ್ರಮ ನಿರ್ವಹಿಸಿದರು.ಯುವಕ ಮಂಡಲದ ಕಾರ್ಯದರ್ಶಿ ಸಂದೀಪ್ ಸುವರ್ಣ,ಡಾ ಗೆಹೆನೋ (optho), ಲಯನ್ ಕಾರ್ಯದರ್ಶಿ ಅಶ್ವಿನಿ ಶರ್ಮ, ಪ್ರಣವ್ ಶರ್ಮ, ಭಾಸ್ಕರ್ ಕಾಂಚನ್,ಸುಧೀರ್ ಬಾಳಿಗ, ಮತ್ತು ಯುವಕ ಮಂಡಲದ, ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಾರಾಯಣ ಗುರು ವಿದ್ಯಾ ಸಂಸ್ಥೆಯ ಸ್ಕೌಟ್ ಗೈಡ್ ಮಕ್ಕಳು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು.ಸುಮಾರು ನೂರಕ್ಕೂ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದು ಕೊಂಡರು.