ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೇರ್ ಹಾಗೂ ಲಯನ್ಸ್ ಕ್ಲಬ್ ಕಿನ್ನಿಗೋಳಿ ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ

0
22

ಮುಲ್ಕಿ: ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೇರ್ ಹಾಗೂ ಲಯನ್ಸ್ ಕ್ಲಬ್ ಕಿನ್ನಿಗೊಳಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ ಅಂಗವಾಗಿ ನಿವೃತ ಯೋಧ ಪ್ರಸ್ತುತ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಲಕ್ಷ್ಮೀ ನಾರಾಯಣ್ ರವರನ್ನು ಸನ್ಮಾನಿಸಲಾಯಿತು .

ಲಯನ್ಸ್ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷರಾದ ಸುಧಾಕರ್ ಶಿಬರೂರು, ಪ್ರಸ್ತಾವನೆ ಭಾಷಣದೊಂದಿಗೆ ಸರ್ವರನ್ನು ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಮಾತನಾಡಿ,ಸೈನಿಕರು ಚಳಿಗಾಳಿ ಮಳೆ ಎನ್ನದೆ ಗಡಿಯಲ್ಲಿ ನಮ್ಮನ್ನು ದಿನದ 24 ಗಂಟೆ ಕಾಯುದರಿಂದ ನಾವಿಲ್ಲಿ ನೆಮ್ಮದಿಯ ನಿದ್ದೆಯನ್ನು ಮಾಡಿ ನಮ್ಮ ಕುಟುಂಬದೊಂದಿಗೆ ಸುಖವಾಗಿದ್ದೇವೆ. ಇದಕ್ಕೆ ನಮ್ಮ ಸೈನಿಕರೇ ಕಾರಣ ಅವರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಲ ಬಿ. ಶಿವಪ್ರಸಾದ್, ಪ್ರಣವ್ ಶರ್ಮ ಲಯನ್ಸ್ ಕ್ಲಬ್ ಕಿನ್ನಿಗೋಳಿ ಕಾರ್ಯದರ್ಶಿ ಲಯನ್ ಪೀಟರ್ ಪೌಲ್, ಲ.ವಿದ್ಯಾ, ಲ.ಜೋಯ್ಸ್ ಡಿಸೋಜ, ಲ.ಮೋಹನ ದಾಸ್ ಶೆಟ್ಟಿ, ಲ.ಲೋಲಾಕ್ಷ, ಲ.ಸೂರಜ್ ಶೆಟ್ಟಿ, ಯೂನಿಯನ್ ಬ್ಯಾಂಕ್ ಶಾಖಾ ಪ್ರಬಂಧಕರಾದ ಅಮರನಾಥ್ ಮಾತನಾಡಿ ಸೈನಿಕರು ನಿಜವಾಗಿ ನಮ್ಮ ದೇಶದ ಶಕ್ತಿ ನಮ್ಮ ಶಾಖೆಯಲ್ಲಿ ಇವರನ್ನು ಹೊಂದಿರುವುದು ನಿಜಕ್ಕೂ ನಮ್ಮ ಸಂಸ್ಥೆಗೆ ಗೌರವ ಎಂದರು ಮಾಜಿ ಅಧ್ಯಕ್ಷರಾದ ಲ.ಫ್ರಾನ್ಸಿಸ್ ಸೆರಾವೋ ಧನ್ಯವಾದ ಸಮರ್ಪಿಸಿದರು

LEAVE A REPLY

Please enter your comment!
Please enter your name here