ಲಯನ್ಸ್ ಕ್ಲಬ್ ಬಪ್ಪನಾಡು ಲಯನ್ಸ್ ಕ್ಲಬ್ ಮಂಗಳೂರು ಲೇಡಿಹಿಲ್, ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಕನ್ನಡ ರಾಜ್ಯೋತ್ಸವ ವನ್ನು ಕೆಎಸ್ ರಾವ್ ನಗರ ಸರಕಾರಿ ಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು .ಈ ಸಂದರ್ಭ ಕನ್ನಡದ ಉಳಿವಿಗಾಗಿ ಹೋರಾಟ ನಡೆಸಿದ ಹಾಸನ ಜಿಲ್ಲಾ ಕನ್ನಡ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಲಯನ್ ರಘು ಪಾಳ್ಯ ಹಾಗೂ ಮಂಗಳೂರಿನ ಎನ್ ಟಿ ರಾಜ ರವರನ್ನು ಗೌರವಿಸಲಾಯಿತು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಅನೇಕ ಸ್ಪರ್ಧೆ ಜರಗಿಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ವಿಶೇಷವಾಗಿ ಎಸ್ ಎಸ್ ಎಲ್ ಸಿ ಕನ್ನಡ ಭಾಷೆಯಲ್ಲಿ 125/125 ಪಡೆದ ವಿದ್ಯಾರ್ಥಿನಿ ಕುಮಾರಿ ವೈಷ್ಣವಿಯನ್ನು ಗೌರವಿಸಿ ಗೌರಧನವನ್ನು ನೀಡಲಾಯಿತು.
ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯದರ್ಶಿ ಅಶ್ವಿನಿ ಶರ್ಮ ಕೋಶಾಧಿಕಾರಿ ಸಂತೋಷ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಬಿ ಶಿವಪ್ರಸಾದ್, ಸ್ಥಾಪಕ ಅಧ್ಯಕ್ಷ ಲಯನ್ ವೆಂಕಟೇಶ ಹೆಬ್ಬಾರ್, ಪ್ರತಿಭಾ ಹೆಬ್ಬಾರ್ ಸೌಮ್ಯಲತಾ ಅನಿಲ್, ಪ್ರಣವ್ ಶರ್ಮ, ಕಲ್ಲಪ್ಪ ತಡವಲಗ , ಲಯನ್ಸ್ ಕ್ಲಬ್ ಮಂಗಳೂರು ಲೇಡಿಹಿಲ್ ಅಧ್ಯಕ್ಷರಾದ ವಿಕ್ಟರ್ ಮೊರಸ್ ಕಾರ್ಯದರ್ಶಿ ಲಿಡಿಯಾ ಡಿಕೋಸ್ಟ ರೇಷ್ಮಾ ಮೋರಸ್, ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎರಿಕ್ ಪಾಯಸ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕಾಮೇಶ್ವರಿ ಭಟ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ದಿನೇಶ್ ಕೆ ,ಸುಜಾತಾ ಭಟ್, ಶ್ರೀದೇವಿ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರುಗಳಾದ ಸಿದ್ದಪ್ಪ ,ಜ್ಯೋತಿ ಎಸ್ ಮೊದಲಾದವರು ಉಪಸ್ಥಿತರಿದ್ದರು

