ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್‌ ನಿಂದ ಕೃತಕ ಕಾಲು ವಿತರಣೆ

0
78

ದಿನಾಂಕ 30.8.2025 ರಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಲಯನ್ಸ್ ಕೃತಕ ಕಾಲು ಜೋಡನ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಮುಲ್ಕಿ ಕಾರ್ನಾಡಿನ ನಿವಾಸಿ ಉಮೇಶ್ ಕೋಟ್ಯಾನ್ ರವರಿಗೆ ಕೃತಕ ಕಾಲು ವಿತರಣೆ ಮಾಡುವ ಕಾರ್ಯಕ್ರಮವು ಜರುಗಿತು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪ್ರಾಂತ್ಯ10ರ
ವಲಯ್ಯಾಧ್ಯಕ್ಷರಾದ ಲಯನ್ ಮೇಲ್ವಿನ್ ಸಲ್ದಾನ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರಗಿತು ಈ ಸಂದರ್ಭ ಮಾತನಾಡಿದ ವಲಯ ಅಧ್ಯಕ್ಷರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಮ್ಮ ಜಿಲ್ಲೆಯಲ್ಲಿ ಉತ್ತಮ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಸತತವಾಗಿ ಕಳೆದ ಮೂರು ವರ್ಷಗಳಿಂದ ಲಯನ್ಸ್ ಜಿಲ್ಲೆಯಲ್ಲಿ ಮೊದಲಿನ ಸ್ಥಾನವನ್ನು ಪಡೆದುಕೊಂಡಿದೆ ನಿಮ್ಮ ಈ ಸೇವ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು ಈ ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಕಾರ್ಯದರ್ಶಿ ಅಶ್ವಿನಿ ಶರ್ಮ ಮಾಜಿ ವಲಯ್ಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ಶರತ್ ಲಯನ್ಸ್ ಕ್ಲಬ್ ಮಂಗಳೂರು ಸದಸ್ಯರಾದ ಸುರೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here