ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಟ್ರೋಫಿಗಳ ಕೊಡುಗೆ

0
95

ಕಟೀಲು ದ.ಕ.ಜಿ. ಪ ಶಾಲ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಕಟೀಲು ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಯ ಮೈದಾನದಲ್ಲಿ ಜರಗಿ ಇದರ ನಾಲ್ಕು ವಿಭಾಗದ ಪ್ರಥಮ ದ್ವಿತೀಯ ಬಹುಮಾನಗಳನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಟ್ರೋಫಿಗಳ ಕೊಡುಗೆ ನೀಡಿ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿಗಾಗಿ ಸಹಕಾರ ನೀಡಿದ್ದು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಟೀಲು ಶ್ರೀ ವೆಂಕಟರಮಣ ಅಸರಣ್ಣರು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶುಭ ಹಾರೈಸಿದರು ತರುವಾಯ ಮಾತನಾಡಿದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪರ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಕೇವಲ ಶಿಕ್ಷಣವಲ್ಲದೆ ದೈಹಿಕ ಶಿಕ್ಷಣಗಳ ಸಾಲಿನಲ್ಲಿ ಬರುವ ಕ್ರೀಡಾಕೂಟಗಳು ಪಂದ್ಯಾಟಗಳು ವಿದ್ಯಾರ್ಥಿಗಳ ಮನೋ ಧೈರ್ಯವನ್ನು ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಲು ಸಹಕಾರಿಯಾಗಿದೆ ಅಲ್ಲದೆ ಗ್ರಾಮೀಣ ಪ್ರದೇಶದ ಅನೇಕ ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸಿ ರಾಜ್ಯಮಟ್ಟ ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನು ಗುವಂತೆ ಮಾಡಲು ತುಂಬಾ ಸಹಕಾರಿಯಾಗಿದೆ ಎಂದರು ಅಧ್ಯಕ್ಷತೆ ವಹಿಸಿದ ಲೋಕಯ್ಯ ಸಾಲಿಯಾನ್ ಸೋಲು ಗೆಲುವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರುಗಳಾದ ಗಿರೀಶ್ ಚಂದ್ರಶೇಖರ್ ರಾಜಶೇಖರ್, ಸರೋಜಿನಿ ಸಿಆರ್‌ಪಿಗಳಾದ ವಿಮಾಲ ಜ್ಯೋತಿ ಮಾಜಿ ವಲಯಧ್ಯಕ್ಷರಾದ ಪ್ರತಿಭಾ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪುಂಡಲಿಕ ಕೊಠಾರಿ ನಿರೂಪಿಸಿದರು ದೈಹಿಕ ಶಿಕ್ಷಕರಾದ ಕೃಷ್ಣ ಕೆ ಧನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here