ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ರಕ್ತದಾನ ಶಿಬಿರ

0
98

ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಹಳೆಯಂಗಡಿ. ಇಲ್ಲಿ ಯುವ ರೆಡ್ ಕ್ರಾಸ್ ಘಟಕವು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೇಂಜರ್ಸ್ ಮತ್ತು
ರೋವರ್ಸ್ ಸಹಯೋಗದೊಂದಿಗೆ, ಲಯನ್ಸ್ ಕ್ಲಬ್ ಕೃಷ್ಣಾಪುರ, ಕಾಟಿಪಳ್ಳದ ಪ್ರಾಯೋಜಕತ್ವದಲ್ಲಿ ಜಿಲ್ಲಾ ರಕ್ತದಾನ ಸಂಯೋಜಕರಾದ ನಾಗೇಶ್ ಎನ್ ಜೆ ಅವರ ಮಾರ್ಗದರ್ಶನದಲ್ಲಿ ದಾಖಲೆಯ 276ನೇ ರಕ್ತ ದಾನ ಶಿಬಿರವನ್ನು ದಿನಾಂಕ 9-12-25 ರಂದು ಹಮ್ಮಿಕೊಂಡಿತ್ತು. ಲಯನ್ಸ್ ಕ್ಲಬ್ ಕಾಟಿಪಳ್ಳದ ಅಧ್ಯಕ್ಷರಾದ ಶ್ರೀ ಲೋಕೇಶ್ ಕುರುವನ್ ಅವರು ಮುಖ್ಯ ಅತಿಥಿಯಾಗಿದ್ದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಯನ್ಸ್ ಕ್ಲಬ್ ಬಪ್ಪನಾಡು ಇಲ್ಲಿನ ಚಾರ್ಟರ್ಡ್ ಪ್ರೆಸಿಡೆಂಟ್ ಆಗಿರುವ ಶ್ರೀ ವೆಂಕಟೇಶ್ ಹೆಬ್ಬಾರ್ ಅವರು ಮಾತಾಡಿ, ಅಪಘಾತದಂತಹ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ದಿಢೀರನೆ ರಕ್ತದ ಅವಶ್ಯಕತೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಬ್ಲಡ್ ಬ್ಯಾಂಕ್ ಸಹಕಾರ ಅಗತ್ಯ. ಯುವ ಜನರು ರಕ್ತದಾನ ಮಾಡುವುದರಿಂದ ಜೀವನವನ್ನು ಉಳಿಸಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಲಯನ್ಸ್ ಕ್ಲಬ್ ಮುಖಾಂತರ ರಕ್ತ ದಾನಿಗಳ ಗುಂಪು ರಚಿಸಿ ಅಗತ್ಯ ಉಳ್ಳವರಿಗೆ, ರಕ್ತವನ್ನು ಉಚಿತವಾಗಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕಾಲೇಜುಗಳಲ್ಲಿ ಕೂಡ ಈ ರೀತಿಯ ಗುಂಪುಗಳನ್ನು ರಚಿಸುವ ಅಗತ್ಯ ಇದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್ ಎಂ. ಅವರು ಮಾತಾಡಿ ನಮ್ಮ ದೇಶದ ಸಾಮಾಜಿಕ ಸಂದರ್ಭದಲ್ಲಿ ರಕ್ತದಾನವು ಮನುಷ್ಯನ ಜಾತಿ, ಸ್ಥಾನಮಾನ, ಲಿಂಗ, ಯಾವುದೆಂದು ಕೇಳದ ಏಕೈಕ ಕಾರ್ಯಕ್ರಮವಾಗಿದೆ. ಸಂಪೂರ್ಣ ಘನತೆಯಿಂದ ಅವನು ರಕ್ತದಾನ ಮಾಡಲು ಅವಕಾಶ ನೀಡಲಾಗುವುದು ಮತ್ತು ಗೌರವಯುತವಾಗಿ ರಕ್ತವನ್ನು ಅಗತ್ಯವಿರುವ ಜನರಿಗೆ ಬಳಸಲಾಗುತ್ತದೆ. ವಿದ್ಯಾರ್ಥಿಗಳು ಈ ರೀತಿಯ ನಿಸ್ವಾರ್ಥ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ರೆಡ್ ಕ್ರಾಸ್ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿಗಳಾದ ಡಾ. ಸುಕೇಶ್ ಹಾಗೂ ಆರೋಗ್ಯ ಸಿಬ್ಬಂದಿ ವರ್ಗ ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು. ಒಟ್ಟು 24 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್, ರೀಜನ್ 9 ಇದರ ರೀಜನಲ್ ಚೇರ್ ಪರ್ಸನ್ ಆಗಿರುವ ಶ್ರೀ ಮಾಧವ ಶೆಟ್ಟಿ ಬಾಳ, ಕೋಶಾಧಿಕಾರಿ. ಶ್ರೀ ಆನಂದ್ ಅಮೀನ್, ಶ್ರೀಮತಿ ಶೆರಿಲ್ ಪಿಂಟೋ, ಶ್ರೀ ಪುಷ್ಪರಾಜ್ ಇವರು ಉಪಸ್ಥಿತರಿದ್ದರು.

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ಜಯಶ್ರೀ ಬಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು , ದ್ವಿತೀಯ ಎಂ.ಕಾಮ್ ನ ತೇಜಸ್ವಿನಿ ಕಾರ್ಯಕ್ರಮ ನಿರೂಪಣೆ ಮಾಡಿದರು, ದ್ವಿತೀಯ ಬಿಬಿಎ ಹರ್ಷಿತಾ ಸ್ವಾಗತಿಸಿದರು, ದ್ವಿತೀಯ ಬಿ.ಕಾಮ್ ದೇವಿಕಾ ಮತ್ತು ಬಳಗ ಪ್ರಾರ್ಥನೆ ಹಾಡಿದರು, ಅನನ್ಯ ರಾವ್ ಅತಿಥಿಗಳನ್ನು ಪರಿಚಯಿಸಿದರು, ಭವಿಷ್ಯ ಅವರು ಧನ್ಯವಾದ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here