ಲಯನ್ಸ್ ಕ್ಲಬ್ ಸೋಮೇಶ್ವರ ಮಂಗಳೂರು ಇದರ ವತಿಯಿಂದ ನಿವೃತ್ತ ಮುಖ್ಯ ಉಪಾಧ್ಯಾಯಿನಿ ಕೆ ಪುಷ್ಪ ಅವರಿಗೆ ಸನ್ಮಾನ

0
129

ಮಂಗಳೂರು: ಲಯನ್ಸ್ ಕ್ಲಬ್ ಸೋಮೇಶ್ವರ ಮಂಗಳೂರು ಇದರ ವತಿಯಿಂದ ಶಿಕ್ಷಕರ ದಿನಾಚರಣೆ 2025 ರ ಅಂಗವಾಗಿ ಪಂಡಿತ್ ಹೌಸ್, ಬಬ್ಬುಕಟ್ಟೆ ನಿವಾಸಿಯಾಗಿರುವ ನಿವೃತ್ತ ಮುಖ್ಯ ಉಪಾಧ್ಯಾಯಿನಿ ಕೆ ಪುಷ್ಪ ರವರನ್ನು ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಅವರ ಸಮರ್ಪಣೆ, ಉತ್ಸಾಹ ಮತ್ತು ಬದ್ಧತೆಗಾಗಿ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. ಕೆ ಪುಷ್ಪ ಅವರು ತಮ್ಮ ಧೀರ್ಘ 34 ವರ್ಷದ ಶಿಕ್ಷಕಿ ಜೀವನವನ್ನು 1972 ರಿಂದ ನರಿಕೊಂಬು, ಪಾಂಡೇಶ್ವರ, ಬಬ್ಬುಕಟ್ಟೆ ಹಾಗೂ ಕೊನೆಯ 5 ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಉರುಮಣೆ ಯಿಂದ 2006 ರಲ್ಲಿ ನಿವೃತ್ತಿ ಹೊಂದಿರುತ್ತಾರೆ.
ಕ್ಲಬ್ ಅಧ್ಯಕ್ಷರಾದ ಲಯನ್ ವಿಜಯನ್ ಕೆ, ಉಪಾಧ್ಯಕ್ಷರಾದ ವಿಜಯ ಕುಮಾರ್, ಕಾರ್ಯದರ್ಶಿ ಕೆ ಗೋಪಿನಾಥ್, ರಾಘವನ್ ಎಂ, ಡಾ.ಅನುರೂಪ, ಫ್ಲೇವಿಯಾ ಡಿ‘ಸೋಜಾ ಹಾಗೂ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here