ಲಯನ್ಸ್ ಕ್ಲಬ್ ವ್ಯಕ್ತಿತ್ವ ರೂಪಿಸಿದೆ : ಗುರುಪ್ರಸಾದ್ ಶೆಟ್ಟಿ
ಮುನಿಯಾಲು : ವಿಶ್ವದ ಅತ್ಯಂತ ಪ್ರತಿಷ್ಠಿತ ಸೇವಾಸಂಸ್ಥೆಯಾದ ಲಯನ್ಸ್ ಕ್ಲಬ್ ಜನಸೇವೆಗೆ ಅತ್ಯುತ್ತಮ ಸಂಸ್ಥೆ. ನಮ್ಮ ವ್ಯಕ್ತಿತ್ವವನ್ನು ಲಯನ್ಸ್ ಕ್ಲಬ್ ರೂಪಿಸುತ್ತದೆ, ಸಮಾಜವನ್ನು ಬೆಸೆಯುವ ಮೂಲಕ ನಮಗೆ ಸ್ಪೂರ್ತಿ ಪ್ರೇರಣೆ ನೀಡಿದೆ ಎಂದು ಲಯನ್ಸ್ 317 ಸಿ ಯ ಪ್ರಾಂತ್ಯ 4 ರ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ ಶೆಟ್ಟಿ ಹೇಳಿದರು.
ಅವರು ಭಾನುವಾರ ಮುನಿಯಾಲು ಕಾಡುಹೊಣೆಯ ಸುದಾಣ್ಣಸ್ ರೀವರ್ ವ್ಯೂ ಗಾರ್ಡನ್‌ನಲ್ಲಿ ನಡೆದ ” ಸಂಬಂಧ ” ಲಯನ್ಸ್ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ ವಹಿಸಿ ಮಾತನಾಡಿದರು. ಕಾರ್ಕಳ ಕ್ರಿಯಠಟಿವ್ ಎಜುಕೇಷನ್ ಪೌಂಡೇಷನ್ ಸಹಸಂಸ್ಥಾಪಕ ಅಶ್ವತ್ ಎಸ್.ಎಲ್ ಸೇವೆಗಾಗಿ ಲಯನ್ಸ್ ಅತ್ಯುತ್ತಮ ಸಂಸ್ಥೆ, ಕೊಡುವ ಮನಸ್ಸು ಇರುವುದರಿಂದ ಇಂತಹ ಸೇವೆ ಮಾಡಲು ಸಾಧ್ಯವಾಗುತ್ತದೆ. ಎಲ್ಲರನ್ನು, ಎಲ್ಲವನ್ನು ಸ್ವೀಕರಿಸುವ ಧರ್ಮ ಮಾನವ ಧರ್ಮ ಅದು ನಮ್ಮದಾಗ, ಆಗ ಮಾತ್ರ ಸಂಬಂಧ ಬೆಳೆದು ಬೆಸೆಯುತ್ತದೆ ಎಂದರು.

ಜಾರ್ಕಳ ವಸಂತಿ ಶೆಟ್ಟಿ ” ಸಂಬಂಧ ” ಲಯನ್ಸ್ ಪ್ರಾಂತೀಯ ಸಮ್ಮೇಳನ ಉದ್ಘಾಟಿಸಿ ಶುಭ ಹಾರೈಸಿದರು. ಲಯನ್ಸ್ 317 ಸಿ ಯ ಪ್ರಾಂತ್ಯ 4 ರ ಪ್ರಾಂತೀಯ ಪ್ರಥಮ ಮಹಿಳೆ ಪ್ರಿಯ ಗುರುಪ್ರಸಾದ್ ಶೆಟ್ಟಿ ಮಾತನಾಡಿ ಶುಭಸಂದೇಶ ನೀಡಿದರು. 11 ಲಯನ್ಸ್ ಕ್ಲಬ್ ಗಳು ಸಮ್ಮೇಳನದಲ್ಲಿ ಭಾಗವಹಿಸಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪ್ರಥಮ, ಬೆಳ್ಮಣ್ ಮತ್ತು ಬೆಳ್ಮಣ್ ಸೆಂಚುರಿ ದ್ವೀತಿಯ ಹಾಗೂ ಮುಂಡ್ಕೂರು ಕಡಂದಲೆ ತೃತೀಯ ಪ್ರಶಸ್ತಿ ಪಡೆಯಿತು.
ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವು ಹಸ್ತಾಂತರಿಸಲಾಯಿತು. ಗಣ್ಯರು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಹಲವರನ್ನು ಗೌರವಿಸಲಾಯಿತು. ನೀರೆಬೈಲೂರು ಉದಯ ಕುಮಾರ್ ಹೆಗ್ಡೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ವಿವಿಧ ಕಾರ್ಯಕ್ರಮಗಳು ನಡೆಯಿತು.
ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಇಂಟರ್ ನ್ಯಾಶನಲ್ ತರಬೇತುದಾರ ಎನ್.ಎಂ.ಹೆಗ್ಡೆ, ಪೊಲೀಸ್ ಅಧಿಕಾರಿ ಪಣಂಬೂರು ಡಿಸಿಪಿ ಶ್ರೀಕಾಂತ್ ಕೆ, ಉದ್ಯಮಿ ಸುಜಯ ಶೆಟ್ಟಿ ಮುನಿಯಾಲು, ಮುಂಬೈ ಉದ್ಯಮಿ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ, ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್‌ಗಳು, ವಿವಿಧ ಲಯನ್ಸ್ ಪ್ರಮುಖರು, ವಲಯಾಧ್ಯಕ್ಷರು, ಲಿಯೋ ಕ್ಲಬ್ ಪ್ರಮುಖರು, ಪದಾಧಿಕಾರಿಗಳು, ಸಮ್ಮೇಳನ ಸಮಿತಿಯ ಅಧ್ಯಕ್ಷ ರಾಜೇಶ ಶೆಟ್ಟಿ, ಕಾರ್ಯದರ್ಶಿ ಸುರೇಶ ಶೆಟ್ಟಿ, ಕೋಶಾಧಿಕಾರಿ ದಿಲೀಪ್ ಶೆಟ್ಟಿ, ವಲಯಾಧ್ಯಕ್ಷರಾದ ಸತೀಶ ಶೆಟ್ಟಿ, ವಿಶ್ವನಾಥ ಪಾಟ್ಕರ್, ದಿನೇಶ ಕುಮಾರ್, ಹೊಸ್ಟ್ ಕ್ಲಬ್ ನೀರೆಬೈಲೂರು ಅಧ್ಯಕ್ಷ ಪ್ರಶಾಂತ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸದಾನಂದ ಸಾಲಿಯಾನ್, ಹೆಬ್ರಿ ಟಿ.ಜಿ.ಆಚಾರ್ಯ, ಅರುಣ್ ಕುಮಾರ್ ಹೆಗ್ಡೆ, ಶಾಲಿನಿ ಬಂಗೇರ ಮುಂತಾದವರು ಉಪಸ್ಥಿತರಿದ್ದರು. ಸದಾನಂದ ಸಾಲಿಯಾನ್ ವಂದಿಸಿ, ರಾಜೇಶ ಶೆಟ್ಟಿ ಸ್ವಾಗತಿಸಿ ಅಶೀಶ್ ಶೆಟ್ಟಿ ಮತ್ತು ಸಂತೃಪ್ತಿ ಶೆಟ್ಟಿ ನಿರೂಪಿಸಿದರು.

