ಮೂಡುಬಿದಿರೆ ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಸಾಹಿತ್ಯ ಸಮ್ಮೇಳನ -ಸಾಧಕರಿಗೆ ಸನ್ಮಾನ

0
1

ಕನ್ನಡ ಮಾತೃಭಾಷೆಯಾಗಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಕನ್ನಡದ ಉಳಿವು ಸಾಧ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅಭಿಪ್ರಾಯಪಟ್ಟರು.

ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಡಂದಲೆ ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ನಡೆದ ಸಂದರ್ಭ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಇಂದು ಉದ್ಯೋಗಕ್ಕೆ ಸೀಮಿತವಾಗುತ್ತಿದೆ. ಸಂಸ್ಕಾರ ಕೊಡುವಲ್ಲಿ ಶಿಕ್ಷಣ ಹಿಂದುಳಿಯಬಾರದು ಎಂದು ಸರ್ವಜ್ಞನ ಉಲ್ಲೇಖದೊಂದಿಗೆ ಹಿರಿಯ ಸಾಹಿತಿ ಡಾ. ಬಿ. ಪಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು.

ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ನಡೆದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ವಿಶೇಷೋಪನ್ಯಾಸ ನೀಡಿದರು. ಜ್ಞಾನದೊಂದಿಗೆ ಸಂವೇದನೆ, ಭಾವನೆ ಅಗತ್ಯ. ಅವು ಸಮಾನವಾಗಿ ವಿಕಾಸಗೊಳ್ಳಲು ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಮಹಾಭಾರತ, ರಾಮಾಯಣ ಕಥನಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ಸಾಹಿತ್ಯ ಮೌಲ್ಯ, ತಾಳ್ಮೆ ಸಾಮಾಜಿಕ ಚಿತ್ರಣಗಳನ್ನು ಕೊಟ್ಟು, ವ್ಯಕ್ತಿತ್ವ ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದು ಯುವಜನತೆ ಮೊಬೈಲ್ ಮೂಲಕ ಚಿನ್ನದ ರೇಟು ಹುಡುಕುತ್ತೇವೆ. ಆದರೆ ಭತ್ತ, ಕೃಷಿ ರೇಟು ಹುಡುಕಲು ಭತ್ತ ಇಲ್ಲದಂತಾಗಿದೆ ಎಂದು ಪೆರ್ವಾಜೆ ಪಿಎಂ ಶ್ರೀ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಅಸ್ಮಾ ಅಭಿಪ್ರಾಯಪಟ್ಟರು. ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಕೃಷಿ ಬದುಕು ವಿಚಾರವಾಗಿ ಮಾತನಾಡಿದರು. ಮಣ್ಣು ಸಂರಕ್ಷಿಸಿ, ಮಣ್ಣು ಉಸಿರಾಡಲು ಅವಕಾಶ ಕೊಡಿ. ಅದರ ಜೀವಚೈತನ್ಯ ಶ್ರೇಷ್ಠವಾದುದು ಎಂದರು. ಭೂಮಿ ತಾಯಿ ಎಂಬ ಗೌರವ ಮರೆತು ಬಿಟ್ಟರೆ ಭತ್ತದ ತಳಿಯ ಗೌರವ ಉಳಿಸಲು ಸಾಧ್ಯವಿಲ್ಲ. ಮಕ್ಕಳಲ್ಲಿ ಭತ್ತ, ಕೃಷಿಯ ಪ್ರೀತಿ ಬೆಳೆಸಬೇಕು. ಅವಾಗ ಭವಿಷ್ಯ ಸಂಪನ್ನತೆ ಕಾಣಲು ಸಾಧ್ಯ ಎಂದರು.

ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು ಪಾಲಡ್ಕ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಶಾಲು ಫಲವಸ್ತು ಸನ್ಮಾನಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here