ಅನುಭವದ ಸಾಹಿತ್ಯ ಶ್ರೀಮಂತ : ಕಲ್ಲೂರು ನಾಗೇಶ್

0
8

ಪುಸ್ತಕಗಳು ಸತ್ಯ, ವಿವೇಕವನ್ನೂ ಹುಟ್ಟುಹಾಕುತ್ತವೆ. ತಂತ್ರಜ್ಞಾನದ ಮೂಲಕ ಜ್ಞಾನ ವಿಸ್ತರಿಸಿದೆ. ಬದುಕಿನ ಅನುಭವ ಅಕ್ಷರ ರೂಪದಲ್ಲಿ ಬರುತ್ತಿದೆ ಎಂದು ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಹೇಳಿದರು.

ಅವರು ಸಮಾಜ ಮಂದಿರದಲ್ಲಿ ಸಾಹಿತ್ಯ ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ರಾಂತ ಮುಖ್ಯ ಶಿಕ್ಷಕಿ ಪದ್ಮಾವತಿ ಪಂಡಿತ್ ಮೂಡುಬಿದಿರೆ ಅವರ ಚೊಚ್ಚಲ ಕಥಾ ಸಂಕಲನ ” ಕಿಟಕಿಯಲ್ಲಿ ಕಂಡ ಕಥೆಗಳು” ಕೃತಿಯನ್ನು ಹಿರಿಯ ನ್ಯಾಯವಾದಿ ಕೆ. ರಮಾನಂದ ಪಂಡಿತ್ , ಕೃಷ್ಣ ಅಹಿತಾನಲ ಸಾಲಿಗ್ರಾಮ ಉಡುಪಿ ಅವರ ” ಹರಿದಾಸ ಸಾಹಿತ್ಯ ಮತ್ತು ಇತರ ಧಾರ್ಮಿಕ ವಿಚಾರಗಳು ” ಕೃತಿಯನ್ನು ಗುಂಡ್ಯಡ್ಕ ಶ್ರೀನಿವಾಸಪುರದ ಕರ್ಹಾಡ ಬ್ರಾಹ್ಮಣ ಸುಧಾರಕ ಸಂಘದ ಕಾರ್ಯಾಧ್ಯಕ್ಷ ರಾಮಚಂದ್ರ ಭಟ್ ನಾಟೇಕರ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ, ನಿಟ್ಟೆಯ ಕನ್ನಡ ಉಪನ್ಯಾಸಕಿ ಮುದ್ರಾಡಿ ಶುಭ ಹಾರೈಸಿದರು.

ಮೂಡುಬಿದಿರೆ ಮಹಾವೀರ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಚಂದನಾ ಕೆ.ಎಸ್., ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕನ್ನಡ ಉಪನ್ಯಾಸಕ ಎಂ. ಗಣೇಶ್ ಕಾಮತ್ ಕೃತಿ,ಕೃತಿಕಾರರ ಕುರಿತು ವಿವರಿಸಿದರು. ಲೇಖಕಿ ಪದ್ಮಾವತಿ ಪಂಡಿತ್ ಸ್ವಾಗತಿಸಿದರು. ಚಿತ್ರಾಶ್ರೀ ಕೆ.ಎಸ್. ಮತ್ತು ಮಹೇಶ್ ಕುಮಾರ್ ಡಿ.ಕರ್ಕೆರಾ ಕಾರ್ಯಕ್ರಮ ನಿರೂಪಿಸಿದರು. ದೃತಿ ಪಂಡಿತ್ ವಂದಿಸಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here