ಕಳೆದುಕೊಂಡ ಚಿನ್ನ-ನಗದು ಸುರಕ್ಷಿತವಾಗಿ ಹಸ್ತಾಂತರ

0
112

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಅಂಡಿಲ ನಿವಾಸಿ ರಕ್ಷಿತ್ ಇವರ ಪತ್ನಿ ಶ್ರೀಮತಿ ದೀಕ್ಷ ರಕ್ಷಿತ್ ರವರ ರೂ 2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಇದ್ದ ಪರ್ಸ್ ಉಪ್ಪಿನಂಗಡಿ ಹೋಟೆಲ್ ನಲ್ಲಿ ಡಿಸೆಂಬರ್ ಸಂಜೆ 10 ರಂದು ಕೈ ತಪ್ಪಿ ಕಳೆದು ಹೋಗಿತ್ತು. ಮನೆಗೆ ಹೋಗಿ ನೋಡುವಾಗ ಚಿನ್ನ, ನಗದು ಕಳೆದುಹೋಗಿರುವ ಬಗ್ಗೆ ಅರಿವಾಗುತ್ತೆ, ತಕ್ಷಣ ತನ್ನ ಸಂಬಂಧಿಕರಲ್ಲಿ ತಿಳಿಸಿ ಹೋಟೆಲ್ ನಲ್ಲಿ ವಿಚಾರಿಸಲು ತಿಳಿಸಿದಾಗ ನಂತರ ಚೆಕ್ ಮಾಡಿದಾಗ ಯಾರಿಗೆ ಸಿಕ್ಕಿದೆ ಅನ್ನೋದು ಅರಿವಾಗುತ್ತದೆ . ಸಿಕ್ಕಿದವರು ಹೇಳಿದ್ರು ಯಾರು ಅಂತ ತಿಳಿಸಲಿ ನಾಳೆ ಠಾಣೆಗೆ ಬನ್ನಿ ಹೇಳಿದರು, ಅಲ್ಲಿ ನಿಮಗೆ ಹಸ್ತಾಂತರ ಮಾಡುತ್ತೇವೆ ಎಂದು ತಿಳಿಸಿದರು. ಅದೇ ರೀತಿಯಲ್ಲಿ ಡಿ. 11 ಇಂದು ಬಜತ್ತೂರು ಗ್ರಾಮ ವಲಾಲ್ ಬೆದ್ರೂಡಿ ವಿದ್ಯಾನಗರ ಮಂತ್ರ ನಿಲಯ ನಿವಾಸಿ ವಿನಯ್ ನಿವೇದಿತಾ ರವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ನಂತರ ವಾರಸುದಾರರಿಗೆ ಚಿನ್ನ, ನಗದು ಹಸ್ತಾಂತರ ಮಾಡಿದರು. ಇವರನ್ನು ಕಳೆದುಕೊಂಡ ಶ್ರೀಮತಿ ದೀಕ್ಷಾ ರಕ್ಷಿತ್ ದಂಪತಿಗಳು ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು. ಉಪ್ಪಿನಂಗಡಿ ಪೊಲೀಸ್ ಅಧಿಕಾರಿ ವರ್ಗಕ್ಕೂ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here