2026 ಮಾರ್ಚ್ 24 ರಿಂದ 28 ರ ವರೆಗೆ ಐದು ದಿನಗಳಕಾಲ ಮಂಗಳೂರಿನಲ್ಲಿ ರಾಮನ್ ಪೈ ಕನ್ವೆಷನ್ ಹಾಲ್ ನಲ್ಲಿ ಸೀನಿಯರ್ ಕ್ಲಾಸಿಕ್ ಪುರುಷರ ಹಾಗೂ ಮಹಿಳಿಯರ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಸ್ಪರ್ಧೆಗಳು ನೆಡೆಯಲಿವೆ, ಈ ಸ್ಪರ್ಧೆಗೆ ತೀರ್ಪುಗರರಾಗಿ ಎಂ. ಮಹೇಶ್ವರಯ್ಯ ಆಯ್ಕೆಯಾಗಿದ್ದಾರೆ.
ಇವರು ಬೀರೇಶ್ವರ ವ್ಯಾಯಾಮ ಶಾಲೆಯ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟುವಾದ ಎಂ. ಮಹೇಶ್ವರಯ್ಯ ಅವರು ಬಿ.ಕಾಂ. ಪದವೀಧರರಾಗಿದ್ದು, ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದವರು. ಪ್ರಸ್ತುತ ದಾವಣಗೆರೆಯ ಶಂಕರ್ ವಿಹಾರ್ ಬಡಾವಣೆಯ “ಬಿ” ಬ್ಲಾಕ್‌ನಲ್ಲಿ ವಾಸವಾಗಿದ್ದಾರೆ. ಇವರು ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಮಹತ್ವದ ಸಾಧನೆಗಳನ್ನು ಮಾಡಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.ಇವರು ದಾವಣಗೆರೆಗೆ ನಗರಕ್ಕೆ, ಕರ್ನಾಟಕ ರಾಜ್ಯಕ್ಕೆ, ಭಾರತಕ್ಕೆ ಕೀರ್ತಿಯನ್ನು ತಂದಿದ್ದಾರೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಇವರು 6 ಬಂಗಾರದ ಪದಕಗಳು ಮತ್ತು 3 ಬೆಳ್ಳಿ ಪದಕಗಳನ್ನು ಗೆದ್ದಿದ್ದು, 3 ಬಾರಿ ಏಷ್ಯನ್ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ “ಸ್ಟ್ರಾಂಗ್ ಮ್ಯಾನ್ ಆಫ್ ಏಷ್ಯಾ” ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ 19 ಬಂಗಾರದ ಪದಕಗಳನ್ನು ಗಳಿಸಿ, 15 ಬಾರಿ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ “ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ” ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಇವರು ರಾಷ್ಟ್ರೀಯ ಮಟ್ಟದ ಕ್ಯಾಟೆಗರಿ-1 ತೀರ್ಪುಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪವರ್ ಲಿಫ್ಟಿಂಗ್‌ನಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ
ರಾಜ್ಯ ಮಟ್ಟದಲ್ಲಿ 25 ಬಂಗಾರದ ಪದಕಗಳನ್ನು ಗೆದ್ದು ಹಲವಾರು ರಾಜ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಾಲೇಜು ದಿನಗಳಲ್ಲಿ ಓದುತ್ತಿದ್ದಾಗಲೇ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ 800 ಮೀಟರ್, 1500 ಮೀಟರ್ ಓಟ, ಶಾಟ್ ಪುಟ್ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ನಿರಂತರವಾಗಿ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದು “ಚಾಂಪಿಯನ್ ಆಫ್ ಚಾಂಪಿಯನ್ಸ್” ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಬಡ್ಡಿ ಕ್ರೀಡೆಯಲ್ಲಿ ಕರ್ನಾಟಕ ರಾಜ್ಯ ತಂಡದ ನಾಯಕನಾಗಿ ಆಯ್ಕೆಯಾಗಿದ್ದು, ಬಂಗಾರದ ಪದಕವನ್ನು ಗೆದ್ದಿದ್ದಾರೆ. ಜೊತೆಗೆ ದಾವಣಗೆರೆ ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಹಲವು ಬಾರಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ. ಇವರಿಗೆ ಬೀರೇಶ್ವರ ವ್ಯಾಯಾಮಶಾಲೆ, ನಗರಸಭೆ ವ್ಯಾಯಾಮಶಾಲೆ, ಎಲ್ಲಾ ಹಿರಿಯ, ಕಿರಿಯ ಕ್ರೀಡಾಪಟುಗಳು, ಗಂಗನರಸಿ ಗ್ರಾಮಸ್ಥರು, ಎಲ್ಲಾ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ,
Home Uncategorized ರಾಷ್ಟ್ರೀಯ ಮಟ್ಟದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ತೀರ್ಪುಗರಾಗಿ ಎಂ.ಮಹೇಶ್ವರಯ್ಯ ಆಯ್ಕೆ

