ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲು, ಸಜೀಪ ಮಾಗಣೆಯಲ್ಲಿ ಮಾರ್ಚ್ 18, 19 ಮತ್ತು 20 ರಂದು ನಡೆಯಲಿರುವ ಶ್ರೀ ನಡಿಯೇಲು ದೈಯ್ಯಂಗುಲುಗಳ ನೂತನ ಸ್ವರ್ಣಬಿಂಬಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ದಾರ ಹಾಗೂ ನೂತನ ಸ್ವರ್ಣಬಿಂಬ ಪ್ರತಿಷ್ಠಾ ಸಮಿತಿ ಇಂದು ಭಕ್ತಿಪೂರ್ವಕವಾಗಿ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಗಳಿಗೆ ಸಲ್ಲಿಸಿ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ ನೀಡಿ ಅವರ ಆಶೀರ್ವಾದ ಪಡೆಯಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು, ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಕಾರ್ಯದರ್ಶಿ ದೇವಿ ಪ್ರಸಾದ್ ಪೂಂಜಾ, ಕೋಶಾಧಿಕಾರಿ ರತ್ನಾಕರ್ ಪೂಜಾರಿ ನಾಡಾರು, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ನೀಲ್ಯಾ, ಮೊದಲಾದವರು ಉಪಸ್ಥಿತರಿದ್ದರು.

