ಮಾ. 28: ಬೊಲ್ಲೆಟ್ಟು ಅದಿ ಅಲಡೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ

0
5

ಕಾಪು : ಇತಿಹಾಸ ಪ್ರಸಿದ್ದ ಬೊಲ್ಲೆಟ್ಟು ಆದಿ ಅಲಡೆ ಜೀರ್ಣೋದ್ಧಾರ ಸಮಿತಿಯ ಅಶ್ರಯದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಮಾರ್ಚ್ 28 ರ ಬೆಳಿಗ್ಗೆ 8.30 ಕ್ಕೆ ಬೊಲ್ಯೊಟ್ಟು ಆಲಡೆಯಲ್ಲಿ ನಡೆಯಲಿದೆ.

ಬೊಲ್ಲೆಟ್ಟು ಆದಿ ಆಲಡೆಯ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರು ಶ್ರೀ ಅದಮಾರು ಮಠದ ಹಿರಿಯ ಯತಿಗಳು, ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಶಿಲಾನ್ಯಾಸ ಹಾಗೂ ಆಶೀರ್ವಚನ ನೀಡಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ಕ್ಷೇತ್ರದ ಶಾಸಕರು ಸುನಿಲ್ ಕುಮಾರ್, ಕರ್ನಾಟಕ ಸರಕಾರದ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆ, ಮಹಾರಾಷ್ಟ್ರದ ಮಾಜಿ ಸಂಸದರು ಗೋಪಾಲ್ ಎಂ ಶೆಟ್ಟಿ, ಕುತ್ಯಾರು ಆರಮನೆಯ ಜಿನೇಶ್ ಬಲ್ಲಾಳ್, ಜಾನಪದ ಸಂಶೋಧಕ ಕೆ, ಎಲ್, ಕುಂಡoತಾಯ, ಎಲ್ಲೂರು ಗುತ್ತು ವೈ ಪ್ರಭಾಕರ್ ಶೆಟ್ಟಿ ಹಾಗೂ ವೈ ಪ್ರಪುಲ್ಲ ಶೆಟ್ಟಿ, ನ್ಯಾಯವಾದಿ ಪ್ರದೀಪ್ ಕುಮಾರ್, ಅದಾನಿ ಗ್ರೂಪ್ ಸಿ. ಇ. ಒ. ಕಿಶೋರ್ ಆಳ್ವ ಭಾಗವಹಿಸಲಿದ್ದಾರೆ.. ಈ ಮೇಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ಆದಿಸ್ಥಳಕ್ಕೆ ಸಂಬಂಧಿಸಿದ ಹಾಗೂ ಊರ ಪರ ಊರ ಭಕ್ತರು ಆಗಮಿಸಬೇಕಾಗಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here