ಮಚ್ಚಿನ : ಬಾಂಬೂ ಸೊಸೈಟಿ ಆಪ್ ಇಂಡಿಯಾ ಬಿದಿರು ಗ್ರಾಮಗಳ ಕ್ಲಸ್ಟರ್ ಯೋಜನೆ ಹಾಗೂ ಬೆಳ್ತಂಗಡಿ ರಬ್ಬರ್ ಸೋಸ್ಯೆಟಿ ಹಾಗೂ ಶ್ರೀ ಕ್ಷೇ ಧ ಗ್ರಾ ಯೋ BC ಟ್ರಸ್ಟ್ ಗುರುವಾಯನಕೆರೆ ಸಹಕಾರದೊಂದಿಗೆ 1250 ಬಿದಿರು ಗಿಡ ವಿತರಣೆ ಕಾರ್ಯಕ್ರಮ ಅನಂತೇಶ್ವರ ದೇವಸ್ಥಾನ ಬೆಳಮಂಜ ದೇವಸ್ಥಾನದ ಕಮಿಟಿಯ ಬಾಲಕೃಷ್ಣ ಬಟ್ ಹಾಗೂ ಸುಧೀರ್ ಕುಮಾರ್ ಶೆಟ್ಟಿ (ಕೋರ ಬಿಟ್ಟು ಮನೆ )ಅವರಿಗೆ ಬಿದಿರು ಗಿಡವನ್ನು ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಬಾಲಕೃಷ್ಣ ರವರು ವಿತರಣೆ ಮಾಡಿದರು ಬಿದರಿ ಬಾಂಬು ಸೊಸೈಟಿಯ ಮೇಲ್ವಿಚಾರಕರಾದ ಕುಮಾರ ನಾಥ್ ರವರು ಬಿದರ ಕೃಷಿ ಬಗ್ಗೆ ಮಾತನಾಡಿಬಿದಿರು ವೇಗವಾಗಿ ಬೆಳೆಯುವ ಕೃಷಿಯಾಗಿದೆ ಬಿದರಿನ ಬಹುಮುಖ ಉಪಯೋಗಗಳು ನಿರ್ಮಾಣ ಕಟ್ಟಡದ ಒಳಾಂಗಣ ಅಲಂಕಾರಕ್ಕಾಗಿ, ಪೀಠೋಪಕರಣಗಳ ತಯಾರಿಕೆಗಾಗಿ ಅಗರಬತ್ತಿ ತಯಾರಿಕೆಗೆ ಕಾಗದ ತಯಾರಿಕೆಗೆ ಅತಿ ಹೆಚ್ಚು ಉಪಯೋಗವಾಗುತ್ತದೆ ಬಿದರ ಗಿಡ ನಾಟಿ ಮಾಡುವ ವಿಧಾನ ಬಳಸಬೇಕಾದ ಗೊಬ್ಬರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಡಂತ್ಯಾರ್ ವಲಯದ ಮೇಲ್ವಿಚಾರದ ಕೇಶವ್ ಒಕ್ಕೂಟದ ಅಧ್ಯಕ್ಷರಾದ ವಿಜಯ್ ಮಡಿಕಲ್ಲು,ಮಚ್ಚಿನ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಸುಧಾ,ಕೃಷಿ ಮೇಲ್ವಿಚಾರಕರಾದ ಕೃಷ್ಣ, ಮಚ್ಚಿನ ಸೇವಾ ಪ್ರತಿನಿಧಿ ಪರಮೇಶ್ವರ, ಕುದ್ರಡ್ಕ ಶ್ರೀಮತಿ ನಂದಿನಿ ಶೌರ್ಯ ಘಟಕದ ಪ್ರತಿನಿಧಿ ಪ್ರಭಾಕರ್ ಉಪಸ್ಥಿತರಿದ್ದರು.