ಮಧೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಓಂಬಡ್ಸ್ ಮೆನ್ ಸಿಟ್ಟಿಂಗ್ ಸಭೆ ನಡೆಯಿತು. ಮಧೂರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ಮದೂರು ಗ್ರಾ.ಪಂ. ಸದಸ್ಯರಾದ ಉದಯ ಕುಮಾರ್, ಸ್ಮಿತಾ, ಪಂಚಾಯತ್ ಕಾರ್ಯದರ್ಶಿ ಅಜೇಶ್, ಪಂಚಾಯತ್ ಸಿಬ್ಬಂದಿ, ನರೇಗಾ ಕಾರ್ಮಿಕರು, ಮತ್ತಿತರರು ಉಪಸ್ಥಿತರಿದ್ದರು.

