“ನೆತ್ತರಕೆರೆ”ಯಲ್ಲಿ ಮಿಂಚಿದ ಭವ್ಯ ಪೂಜಾರಿ

0
89

ಅಸ್ತ್ರ ಪ್ರೋಡಕ್ಸನ್ ಬ್ಯಾನರ್ ನಲ್ಲಿ ಲಂಚುಲಾಲ್ ಕೆ .ಎಸ್ ನಿರ್ಮಾಣ ಮಾಡಿರುವ, ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ನೆತ್ತರಕೆರೆ ತುಳು, ಕನ್ನಡ ಸಿನಿಮಾ ಆಗಸ್ಟ್ 29 ರಂದು ಬಿಡುಗಡೆಯಾಗಿದೆ.

ಬಹು ದೊಡ್ಡ ತಾರಾಂಗಣ ಇರುವ ಈ ಸಿನಿಮಾ ನೋಡುಗರ ಗಮನ ಸೆಳೆದಿದೆ. ಇದು ತುಳುವಿನ 150ನೆ ಸಿನಿಮಾ. ಪ್ರಮುಖವಾಗಿ ಬಹು ಭಾಷ ನಟ ಸುಮನ್ ತಲ್ವಾರ್ ಪ್ರಥಮ ಬಾರಿಗೆ ತುಳು ಸಿನಿಮಾ ಅಭಿನಯಿಸಿರುವುದು ವಿಶೇಷ ಮತ್ತು ತಮ್ಮ ಪಾತ್ರದ ಮೂಲಕವೇ ಸಿನೀಮಾವನ್ನು ಆವರಿಸಿದ್ದಾರೆ.

ಈ ಸಿನಿಮಾದಲ್ಲಿ ಬೆಳ್ಳಾರೆಯ ಬಾಯಂಬಾಡಿಯ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನಟಿ ಭವ್ಯ ಶ್ರೀ ಪೂಜಾರಿ ಅವರು ಮುಖ್ಯ ಪಾತ್ರವೊಂದರಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಬಗ್ಗೆ ಮಾತಾಡಿದ ಅವರು ‘ಇಂತಹ ಪಾತ್ರ ಮಾಡುವುದು ನನ್ನ ಕನಸಾಗಿತ್ತು. ಅದು ನೆತ್ತರಕೆರೆ ಸಿನಿಮಾದ ಮೂಲಕ ಈಡೇರಿದೆ. ಅವಕಾಶ ನೀಡಿದ ನಿರ್ದೇಶಕರಾದ ಸ್ವರಾಜ್ ಶೆಟ್ಟಿ ಹಾಗೂ ನಿರ್ಮಾಪಕರಾದ ಲಂಚುಲಾಲ್ ಅವರಿಗೆ ಧನ್ಯವಾದಗಳುʼ ಎಂದಿದ್ದಾರೆ.

ವಿಶೇಷವಾಗಿ ತಾಂತ್ರಿಕವಾಗಿ ಛಾಯಾಗ್ರಹಣ ಉದಯ ಬಲ್ಲಾಲ್, ವಿನೋದ್ ರಾಜ್ ಕೋಖಿಲ, ಸಂಗೀತ ನಿರ್ದೇಶನ ಕಾರ್ತಿಕ್ ಮುಲ್ಕಿ, ಗಣೇಶ್ ನೀರ್ಚಾಲ್ ಸಂಕಲನ, ಸಾಹಸ ಮಾಸ್ ಮಾದ, ಟೈಗರ್ ಶಿವು ಸಿನಿಮಾದ ಹೈಲೈಟ್.

ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಯತೀಶ್ ಪೂಜಾರಿ ಸಹಕರಿಸಿದ್ದಾರೆ, ಸಿನಿಮಾದ ನಿರ್ಮಾಣ ವ್ಯವಸ್ಥಾಪಕರಾಗಿ ರಾಜೇಶ್ ಕುಡ್ಲ ಹಾಗೂ ವಿಜಯ್ ಮಯ್ಯ, ನಿರ್ದೇಶನ ತಂಡದಲ್ಲಿ ಜಯರಾಜ್ ಪೂಜಾರಿ, ಅವಿನಾಶ್ ಎಸ್ ಆಪ್ತ, ಕಾರ್ತಿಕ್ ಜಯಚ೦ದ್ರನ್‌, ತುಳಸಿದಾಸ್ ಮಂಜೇಶ್ವರ. ಪತ್ರಿಕೋದ್ಯಮ ಜಗನ್ನಾಥ ಶೆಟ್ಟಿ ಬಾಳ ಸಹಕಾರ ನೀಡಿದ್ದಾರೆ. ಮೇಕಪ್ ಚೇತನ್ , ಕಲೆ ವಿಪಿನ್ ಆರ್ಟ್ಸ್, ಪ್ರಚಾರ ಕಲೆ ದೇವಿ ರೈ, ಕಟ್ಟಿಂಗ್ ಮೀಡಿಯಾ, ಕಾರ್ತಿಕ್, ಡಿಐ ಮತ್ತು ವಿ.ಎಫ್. ಎಕ್ಸ್. ಸುಪ್ರೀತ್ ಬಿ ಕೆ., ಡಿ.ಟಿ.ಎಸ್. ನವೀನ್ ರೈ ಕಾರ್ಯ ನಿರ್ವಹಿಸಿದ್ದಾರೆ.

ಇದರೊಂದಿಗೆ ನಾಯಕನಾಗಿ ಸ್ವರಾಜ್ ಶೆಟ್ಟಿ ಸಿನಿಮಾ ತುಂಬಾ ಆವರಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ, ಅನಿಲ್ ರಾಜ್ ಉಪ್ಪಳ, ಪುಷ್ಪರಾಜ್ ಬೊಳ್ಳಾರ್ ,ಮನೀಶ್ ಶೆಟ್ಟಿ, ಉತ್ಸವ್ ವಾಮಂಜೂರ್, ಯುವ ಶೆಟ್ಟಿ, ಪೃತ್ವಿನ್ ಪೊಳಲಿ, ನೀತ್ ಪೂಜಾರಿ, ಚಂದ್ರ ಶೇಖರ್ ಸಿದ್ಧಕಟ್ಟೆ, ನಮಿತಾ ಕಿರಣ್ ಮೊದಲಾದವರು ಪಾತ್ರಕ್ಕೆ ಜೀವತುಂಬಿದ್ದಾರೆ.

LEAVE A REPLY

Please enter your comment!
Please enter your name here