Maharaja Trophy T20: ಮಂಗಳೂರು ಡ್ರ್ಯಾಗನ್ಸ್‌ಗೆ ಪ್ರಶಸ್ತಿ

0
6

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಚಾಂಪಿಯನ್‌ ಪಟ್ಟವನ್ನು ಮಂಗಳೂರು ಡ್ರ್ಯಾಗನ್ಸ್‌ ಅಲಂಕರಿಸಿದೆ. ಗುರುವಾರ ಮಳೆ ಬಾಧಿತ ಪಂದ್ಯದಲ್ಲಿ ವಿಜೆಡಿ (ವಿ ಜಯದೇವನ್‌ ಮೆಥೆಡ್‌) ನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡವನ್ನು 14 ರನ್‌ ಮಣಿಸಿದ ಮಂಗಳೂರು ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿದೆ.

ಟಾಸ್‌ ಗೆದ್ದರೂ ಮೊದಲು ಬ್ಯಾಟ್ ಮಾಡುವ ಹುಬ್ಬಳ್ಳಿ ನಿರ್ಧಾರವನ್ನು ಬ್ಯಾಟರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ದೇವದತ್ ಪಡಿಕ್ಕಲ್‌ (10) ಹಾಗೂ ಮೊಹಮ್ಮದ್ ತಹಾ (27) ಮಹತ್ವದ ಪಂದ್ಯದಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ 38 ರನ್‌ ಜೊತೆಯಾಟ ನೀಡಿತು. ಆದರೆ ಆರಂಭಿಕರು ಬಿಗ್‌ ಇನಿಂಗ್ಸ್‌ ಕಟ್ಟಲಿಲ್ಲ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.ಹುಬ್ಬಳ್ಳಿ ಪರ ರಿತೇಶ್‌ ಭಟ್ಕಳ್ (13), ಅಭಿನವ್ ಮನೋಹರ್ (17), ಮನ್ವಂತ ಕುಮಾರ್‌ (ಅಜೇಯ 15), ಮಾತ್ರ ಡಬಲ್‌ ಡಿಜಿಟ್‌ ಮುಟ್ಟಿದರು. ಮಧ್ಯಮ ಕ್ರಮಾಂಕದಲ್ಲಿ ಕೃಷ್ಣ ಶ್ರೀಜೀತ್‌ ಕ್ಲಾಸಿಕ್‌ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 45 ಎಸೆತಗಳಲ್ಲಿ 52 ರನ್‌ ನೀಡಿ ತಂಡಕ್ಕೆ ಆಧಾರವಾದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 4 ಬೌಂಡರಿ, 1 ಸಿಕ್ಸರ್‌ಗಳು ಸೇರಿವೆ. ಮಂಗಳೂರು ತಂಡದ ಪರ ಸಚಿನ್‌ ಶಿಂದೆ 3 ವಿಕೆಟ್‌ ಕಬಳಿಸಿದರು. ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಲೋಚನ್‌ ಗೌಡ (18), ಶರತ್ ಬಿಆರ್ ಜೋಡಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 55 ರನ್‌ ಸೇರಿಸಿತು. ಶರತ್ ಬಿಆರ್‌ 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 49 ರನ್‌ ಸಿಡಿಸಿ ಔಟ್ ಆದರು. ಈ ಎರಡು ವಿಕೆಟ್‌ಗಳನ್ನು ರಿತೇಶ್‌ ಭಟ್ಕಳ್‌ ಪಡೆದರು. 10.4 ಓವರ್‌ಗಳಲ್ಲಿ ಮಂಗಳೂರು 2 ವಿಕೆಟ್‌ ನಷ್ಟಕ್ಕೆ 85 ರನ್‌ ಗಳಿಸಿದ್ದಾಗ ಮಳೆ ಆರಂಭವಾಯಿತು. ಹೀಗಾಗಿ ಪಂದ್ಯ ನಡೆಯಲಿಲ್ಲ. ಅಂತಿಮವಾಗಿ ವಿಜೆಡಿ (ವಿ ಜಯದೇವನ್‌ ಮೆಥೆಡ್‌) ನಿಯಮದಂತೆ ಮಂಗಳೂರು ಡ್ರ್ಯಾಗನ್ಸ್‌ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಯಿತು.

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಚಾಂಪಿಯನ್ಸ್ ಪಟ್ಟಿ

2022, ಗುಲ್ಬರ್ಗ್ ಮಿಸ್ಟೇಕ್ಸ್‌

2023, ಹುಬ್ಬಳ್ಳಿ ಟೈಗರ್ಸ್‌

2024, ಮೈಸೂರು ವಾರಿಯರ್ಸ್‌

2025, ಮಂಗಳೂರು ಡ್ರ್ಯಾಗನ್ಸ್‌

LEAVE A REPLY

Please enter your comment!
Please enter your name here