
ಹೊರ್ನಾಡಿ ವಲಕುತ್ತೂರು ಪುರಾತನ ಇತಿಹಾಸ ತಕಾಲದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏಕವಾರ ಮಹಾರುದ್ರಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.
ದಿನಾಂಕ 15-2-2026ನೇ ಆದಿತ್ಯವಾರ ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ 8:30 ರಿಂದ 11:30 ತನಕ ಶ್ರೀ ದೇವರಿಗೆ ರುದ್ರಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ. ಸಂಜೆ 5:30 ರಿಂದ 6:30 ತನಕ ಶ್ರೀದೇವರಿಗೆ ಏಕವಾರ ರುದ್ರಾಭಿಷೇಕ ಮತ್ತು ರಾತ್ರಿ ಎಂಟು ಗಂಟೆಗೆ ಮಹಾಪೂಜಾ ಆದ ತದನಂತರ ಪ್ರಸಾದ ವಿತರಣೆ ಹಾಗೂ ಫಲಹಾರ ಸೇವೆ ಜರುಗಲಿದೆ.
ಶ್ರೀ ಮಹಾಗಣಪತಿ ಸೇವಾ ಸಮಿತಿ ಇವರ ನೇತೃತ್ವದಲ್ಲಿ ಸಂಜೆ 6ರಿಂದ ರಾತ್ರಿ 11:30 ತನಕ ಶ್ರೀ ಜೆಟ್ಲಿಂಗೇಶ್ವರ ಭಜನಾ ಮಂಡಳಿ( ರಿ) ರಾಚಿನಬೆಟ್ಟು ಜನ್ಯಾಡಿ ಮತ್ತು ಶ್ರೀ ಚಿಕ್ಕಮ್ಮ ದೇವಿ ಭಜನಾ ಮಂಡಳಿ( ರಿ) ಮಣಿಗೇರಿ ಹಾಗೂ ಶ್ರೀ ಮಹಾಗಣಪತಿ ಭಜನಾ ಮಂಡಳಿ ಮರತೂರು ಮೊಳಹಳ್ಳಿ ಇವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ದೇವತಾ ಕಾರ್ಯಕ್ರಮಕ್ಕೆ ಆಧಾರದ ಸ್ವಾಗತ ಬಯಸುವ ಶ್ರೀ ಮಹಾಗಣಪತಿ ಸೇವಾ ಸಮಿತಿ ( ರಿ) ಹೊರ್ನಾಡಿ ಮೊಳಹಳ್ಳಿ ಮತ್ತು ಕ್ಷೇತ್ರದ ಆಡಳಿತ ಮಂಡಳಿ ಅರ್ಚಕರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸುತ್ತಲು ತಪ್ಪಲಿನಲ್ಲಿ” ಪ್ರಶಾಂತ ವಾತಾವರಣದಲ್ಲಿದ್ದು ಮೊಳಹಳ್ಳಿ ಗ್ರಾಮದಲ್ಲಿ ಇರುವ ಹೊರ್ನಾಡಿ ವಲಕುತ್ತೂರು ಶ್ರೀಮಹಾಲಿಂಗೇಶ್ವರ ಶ್ರೀ ಮಹಾ ಗಣಪತಿ ದೇವಾಲಯವು ‘ ಜನರ ಇಷ್ಟಾರ್ಥ ಸಿದ್ದಿ ಪೂರೈಸುವ ಮಹಾದೇವ ಎಂದೇ ಪ್ರಸಿದ್ಧವಾಗಿದೆ.
ಭಕ್ತರ ಕಷ್ಟಗಳನ್ನು ಪರಿಹರಿಸುವ ಸಾಕಾರ ಮೂರ್ತಿಯಾಗಿ, ಶ್ರದ್ಧೆಯಿಂದ ಬೇಡಿಕೊಂಡವರ ಇಷ್ಟಾರ್ಥಗಳನ್ನು ಈಡೇರಿಸುವ ದೇವರೆಂದು ನಂಬಲಾಗಿದೆ. ಈ ಪುರಾತನ ದೇವಾಲಯವು ಸುಮಾರು 800 ವರ್ಷ ಇತಿಹಾಸ ಇರುವ ದೇವಾಲಯ ಇದು.
ಈ ದೇವಾಲಯದ ವಿಶೇಷತೆ ಕಡೆಯ ಮಣ್ಣುಗಳ ಆಧಾರ ಸಿಲೆ ನಿಧಿ ಕುಂಭ ಪದ್ಮಕೋರ್ಮ ಯೋಗನಾಳ ನಪುಂಸಕ ಸಿಲೆ, ಈ ಎಲ್ಲಾ ಶ್ರೇಷ್ಠ ಮಟ್ಟದ್ದು ಮತ್ತು ಋಷಿಮುನಿಗಳು ಯೋಗಿಗಳಿಂದ ಇಲ್ಲಿರುವ ಶಿವಲಿಂಗ ಪ್ರತಿಷ್ಠವಾಗಿರುತ್ತೆ ಎನ್ನೋದು ಇಲ್ಲಿಯ ಸ್ಥಳ ಪುರಾಣದ ಇತಿಹಾಸ ಹೇಳುತ್ತದೆ.
ಈ ದೇವಾಲಯದ ಅರ್ಚಕರು ನೀಡಿರುವ ಮಾಹಿತಿ ಪ್ರಕಾರ ಇಲ್ಲಿಯ ದೇವಾಲಯದ ಸ್ಥಳ ಪುರಾಣ ಅತಿ ವಿಶೇಷವಾಗಿದೆ.!
ಮೂರ್ತಿ ಶಿಲ್ಪ ಮತ್ತು ಶಿಲಾಶಾಸನದ ಆಧಾರದಲ್ಲಿ ಕಂಚಾರ್ತಿ ಶ್ರೀ ರಾಜೇಶ್ವರ ಉಪಾಧ್ಯಾಯ ಇವರು ನೀಡಿದ ಮಾಹಿತಿಯಂತೆ ಹೊನಾ೯ಡಿ ವಲಕುತ್ತೂರು ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀಮಹಾ ಗಣಪತಿ ದೇವಸ್ಥಾನ ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿದೆ ಎನ್ನುವುದು ಇತಿಹಾಸದ ಪುರಾವೆಗಳಲ್ಲಿ ಉಲ್ಲೇಖನದಲ್ಲಿ ಇವೆ.
ಕಿ. ಶ.1394ರ ವಿಜಯನಗರ ಹಿಮ್ಮುಡಿ ಹರಿಹರನ ಆಡಳಿಕೆಯಲ್ಲಿ ಈ ಊರಿಗೆ ಕೆವಿಲಕೇರಿ ಎಂದು ಕರೆಯುತ್ತಿದ್ದಾರೆ ಎನ್ನುವುದು ಶಾಸನದಲ್ಲಿ ತಿಳಿದುಬಂದಿರುತ್ತದೆ ವಿಗಗಳ ಕಳೆದಂತೆ ಈ ಊರಿಗೆ ಕೈಲ್ಕೇರಿ ಎನ್ನುವ ರೀತಿಯಲ್ಲಿ ಈ ಊರಿನ ಹೆಸರು ಬದಲಾವಣೆಯಾಯಿತು.
ಇಲ್ಲಿಯ ಶಾಸನದಲ್ಲಿ ನಮಂದಿಸಿದ ಆಧಾರಿತ ದೇವಸ್ಥಾನ ಸುಮಾರು 12ನೇ ಶತಮಾನದಲ್ಲಿ ಸ್ಥಾಪನೆವಾಗಿದೆ ಎಂದು ಹೇಳಲ್ಪಡುತ್ತದೆ ಹೊನಾ೯ಡಿ ಮತ್ತು ವಲಕುತ್ತೂರು ಎನ್ನುವ ಊರಿನ ಹೆಸರುಗಳು ಬದಲಾವಣೆ ಇದ್ದರೂ ಕೂಡ ಈ ಎರಡು ಊರುಗಳು ಹೆಸರು ಕೂಡ ಒಂದೇ ಆಗಿರುತ್ತೆ ಇಲ್ಲಿಯ ಊರಿನ ಇತಿಹಾಸದ ಪ್ರಕಾರ ಹೊರ್ನಾಡಿಯ ಮೂಲ ನಾಮ ಹೊನ್ನಹಲಡಿ, ಅಥವಾ ಹೊನ್ನಾಡು ಅದು ಕಾಲಕ್ರಮೇಣ ಹೊರ್ನಾಡಿವಾಗಿ ಮಾರ್ಪಟ್ಟಿದೆ.
ಸ್ಥಳ ಪುರಾಣ : ಕಿ. ಶ.1394ರಲ್ಲಿವಿಜಯನಗರದ ಇಮ್ಮಡಿ ಹರಿಹರನ್ನು ಮೂವರು ವಿದ್ವಾನ್ಗಳ್ಳಾದ ನಾರಾಯಣ ವಾಜಪೇಯ ಯಾಜಿ, ಪುಂಡರಿ ದೀಕ್ಷಿತ್ ಮತ್ತು ನರಹರಿ ಸೋಮಯಾಯಾಜಿಗಳಿಗೆ ಬಾರ್ಕೂರು ರಾಜ್ಯದ ಕೆವಿಲಕೇರಿ ಗ್ರಾಮ (ಈಗಿನ ಕೈಲ್ಕೇರಿ) ಇದಕ್ಕೆ ಸಂಬಂಧಿಸಿದ ಹೊನ್ನಹಲಡಿ ವಲಕುತ್ತೂರು ಈಗಿನ ಹೊನಾ೯ಡಿಎನ್ನು ಹಂಪಿ ಶ್ರೀರೂಪಾಕ್ಷ ಸ್ವಾಮಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಪುಣ್ಯಕಾಲದಂದು ದಾನವಾಗಿ ನೀಡಿರುತ್ತಾರೆ. ಇಲ್ಲಿಯ ಶಾಸನದಲ್ಲಿ ಉಲ್ಲೇಖಿತವಾಗಿರುವ ಅಂತೆ ಈಗಿನ ಕಂಚಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಕಂಚಿಕಾ ದೇವಿಯೆಂದು ಕರೆಯಲ್ಪಡಲಾಗುತ್ತದೆ.
ಈಗಿನ ಹೊರ್ನಾಡಿ ವಲಕುತ್ತೂರು ಶ್ರೀ ಮಹಾಲಿಂಗೇಶ್ವರ ದೇವರನ್ನು ಹೊನ್ನಹಲಡಿ ವಲಕುತ್ತೂರು ಮಹಾದೇವ ಎಂತಲೂ ಉಲ್ಲೇಖಿಸಿದ್ದಾರೆ ಶಾಸನದಲ್ಲಿ ಈ ದೇವಸ್ಥಾನವು ಚತು: ರಸ್ರ ಶೈಲಿಯಲ್ಲಿ ಮುರುಕಲ್ಲಿನ ತಳಪಾಯ ಹೊಂದಿದ್ದು ಸುತ್ತ ಪ್ರಕಾರವನ್ನು ಒಳಗೊಂಡಂತೆ ನಾಡ ಹಂಚಿನ ಛಾವಣಿಯನ್ನು ಹೊಂದಿವೆ. ಶ್ರೀ ಮಹಾಲಿಂಗೇಶ್ವರ ದೇವರು ಪ್ರಧಾನ ದೇವರಾಗಿದ್ದು, ಶ್ರೀ ಮಹಾಗಣಪತಿ ದೇವರು ಸಕಾರ ದೇವರಾಗಿದ್ದಾರೆ, ಉಳಿದಂತೆ ನಂದಿ, ಕ್ಷೇತ್ರಪಾಲ, ಮತ್ತು ನಾಗದೇವರು ಇಲ್ಲಿಯ ಪರಿವಾರ ದೇವರುಗಳಾಗಿದ್ದಾರೆ, ಕ್ಷೇತ್ರದ ಮಹಿಮೆ ಕಷ್ಟಕಾಲದಲ್ಲಿ ಮತ್ತು ಕಾರ್ಯ ಸಾಧನೆಗಾಗಿ ಇಲ್ಲಿನ ಶ್ರೀ ಮಹಾಗಣಪತಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಸಮರ್ಪಿಸಿ ಪ್ರಾರ್ಥಿಸಿದರೆ ಶೀಘ್ರವೇ ಅನುಗ್ರಹ ಪ್ರಾಪ್ತಿಯಾಗಲ್ಪಡುತ್ತೆ ಎನ್ನುವುದು ಭಕ್ತರ ನಂಬಿಕೆ ಇಲ್ಲಿಯ ವಿಶೇಷತೆಯಾಗಿದೆ.
ಅದೇ ರೀತಿ ಶ್ರೀ ಮಹಾಲಿಂಗೇಶ್ವರನಿಗೆ ರುದ್ರಾಭಿಷೇಕ ಮಾಡಿಸಿ ಮಹಾದೇವನನ್ ಪ್ರಾರ್ಥಿಸಿದರೆ ಮಹಾದೇವ ಭಕ್ತರ ಇಷ್ಟಾತಸಿದ್ಧಿಗಳನ್ನು ನೆರವೇರಿಸುತ್ತಾನೆ ಎನ್ನುವುದು ಇಲ್ಲಿಯ ಭಕ್ತರು ನಂಬಿಕೆವಾಗಿರುತ್ತದೆ.
ಇಲ್ಲಿಯ ದೇವಸ್ಥಾನದ ಆಗಮ ಶಾಸ್ತ್ರದ ಪ್ರಕಾರ ನಿರ್ಮಿತವಾಗಿದ್ದು ಬಲಿಕಲ್ಲು ಮತ್ತು ಪ್ರಧಾನ ಬಲಿಪೀಠವನ್ನು ಒಳಗಿನ ಮತ್ತು ಹೊರಗಿನ ಪ್ರದಕ್ಷಣೆ ಪಥವನ್ನು ಹೊಂದಿದೆ. ಹಿಂದೆ ಈ ದೇವಸ್ಥಾನದಲ್ಲಿ ಮರದ ಧ್ವಜಸ್ತಂಬ ಮತ್ತು ರಥೋತ್ಸವ ನಡೆಯುತ್ತದೆ ಎನ್ನುವುದಕ್ಕೆ ಮೇಲ್ಕಾಣಿಸಿದ ಅಂಶಗಳ ಆಧಾರದ ಸಾಕ್ಷಿಗಳು ಗೋಚರಿಸುತ್ತಿವೆ.
ಇಲ್ಲಿಯ ಶಿಲಾಶಾಸನದ ಹೆಚ್ಚಿನ ಮಾಹಿತಿಯನ್ನು ಶ್ರೀಯುತ ಉಪಾಧ್ಯಾಯ ಅವರು ತಮ್ಮ ಪುಸ್ತಕದಲ್ಲಿ ಸವಿಸ್ತಾರವಾಗಿ ಉಲ್ಲೇಖಿಸಿದ್ದಾರೆ ಎನ್ನುವುದು ತಿಳಿದುಬಂದಿರುತ್ತೆ. ಇಷ್ಟೊಂದು ಇತಿಹಾಸ ಇರುವ ಈ ಪುರಾತನ ದೇವಸ್ಥಾನ ಅಭಿವೃದ್ಧಿ ಆಗದೇ ಉಳಿದುಕೊಂಡಿರುವುದು ಬೇಸರದ ವಿಷಯ ಅಲ್ಲವೇ ಇದು?
ಇತಿಹಾಸ ಪ್ರಸಿದ್ಧ ದೇವಸ್ಥಾನ ಅದೆಷ್ಟು ಅಭಿವೃದ್ಧಿಯನ್ನು ಕಾಣಬೇಕಿತ್ತು ಆದರೆ ತೀರ ಗ್ರಾಮೀಣ ಪ್ರದೇಶ ಆದ ಕಾರಣದಿಂದಲೂ ಅಥವಾ ಆದಾಯದ ಕೊರತೆಯಿಂದಲೂ ಭಕ್ತರ ನಿರ್ಲಕ್ಷದಿಂದಲೂ ಇಂಥ ಇತಿಹಾಸ ದೇವಸ್ಥಾನ ಅಭಿವೃದ್ಧಿ ವಿಷಯದಲ್ಲಿ ತುಂಬಾ ಹಿನ್ನಡೆಯಾಗಿ ಉಳಿದುಕೊಂಡಿರುವುದು ವಿಪರ್ಯಾಸವೇಸರಿ.!?
ಎಲ್ಲದಕ್ಕೂ ಸಾಕ್ಷಿ ಎಂಬಂತೆ ಇಲ್ಲಿ ಅತಿ ದೊಡ್ಡ ಸಮಸ್ಯೆ ಏನೆಂದರೆ ಪ್ರಥಮವಾಗಿ ಇಲ್ಲಿಯ ನೀರಿನ ಸಮಸ್ಯೆ ಹೇಳಬೇಕೆಂದರೆ ಇಲ್ಲಿ ಪುರಾತನ ಬಾವಿ ಇದೆ ಬಾವಿಯಲ್ಲಿ ವರ್ಷದ ಕೆಲವು ತಿಂಗಳುಗಳಲ್ಲಿ ಮಾತ್ರ ಬಾವಿಯಲ್ಲಿ ನೀರಿರುತ್ತೆ ಹೆಚ್ಚಿನ ಸಮಯಗಳಲ್ಲಿ ದೇವರ ಪೂಜೆಗಾಗಿ ನೀರನ್ನು ಅರ್ಚಕರು ದೂರದಿಂದ ತರುತ್ತಿರುವುದು ಗ್ರಾಮದ ಬಹುತೇಕರಿಗೆ ತಿಳಿದ ವಿಷಯವಾಗಿರುತ್ತೆಇದು.! ಆದರೆ ಇದರ ಬಗ್ಗೆ ಈ ಊರಿನ ಜನರು ಯಾರೊಬ್ಬರೂ ಗಮನಹರಿಸದಿರುವುದೇ ಇರುವುದು ಬೇಸರದ ವಿಷಯ ಆಗಿರುತ್ತೆ ಇದು.
ಈ ಊರಿನಲ್ಲಿ ಎಲ್ಲವರು ಬಡವರಂತ ಏನಿಲ್ಲ ಆದರೆ ಮನಸ್ಸು ಮಾಡಿದರೆ ಇಂತಹ ಹತ್ತಾರು ಬಾವಿಯನ್ನು ತೋಡಿಸುವ ಸಾಮರ್ಥ್ಯ ಇರುವ ಹಲವಾರು ಗಣ್ಯ ವ್ಯಕ್ತಿಗಳು ಈ ಊರಿನಲ್ಲಿ ಇದ್ದಾರೆ ಆದರೆ ಏನು ಮಾಡುವುದು ಅವರು ಯಾರು ಎಲ್ಲಿಯ ಸಮಸ್ಯೆಯನ್ನು ಬಗೆಹರಿಸುವಂತೆ ಕಾಣುತ್ತಿಲ್ಲ ಎನ್ನುವ ರೀತಿ ತೋರುತ್ತಿವೆ ಇಲ್ಲಿಯ ಸಮಸ್ಯೆಗಳನ್ನು ನೋಡಿದಾಗ.!?
ಈ ಪುರಾತನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಒಂದು ಶೌಚಾಲಯ ಕೂಡ ಇಲ್ಲದೆ ಪರದಾಡುತ್ತಿರುವುದು ವಿಪರ್ಯಾಸವೇಸರಿ.
ಈ ದೇವಸ್ಥಾನ ಪುರಾತನ ದೇವಸ್ಥಾನ ಆದಕಾರಣ ಇಲ್ಲಿ ಹೋಮನ ಪೂಜ ಪುರಸ್ಕಾರಗಳು ಯಾವಾಗಲೂ ನಡೆಯುತ್ತಲೇ ಇರುತ್ತೆ ಇಲ್ಲಿ ನಡೆವು ಪೂಜೆ ಪುರಸ್ಕಾರಗಳಿಗೆ ಬರುವ ವೃದ್ಧರೂ ಮಕ್ಕಳು ಮತ್ತು ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಆಗಿರುತ್ತೆ ಇಲ್ಲಿ.
ಮನೆ ಹತ್ತಿರದ ದೇವಸ್ಥಾನದ ಅಭಿವೃದ್ಧಿಗಾಗಿ ಸ್ಥಳೀಯರ ಒಗ್ಗಟ್ಟು, ಪ್ರತಿನಿತ್ಯದ ಪೂಜೆ, ಮತ್ತು ಸಮಿತಿ ರಚನೆ ಅತ್ಯಗತ್ಯ. ದೂರದ ಕ್ಷೇತ್ರಗಳಿಗೆ ಹೋಗುವ ಬದಲು, ಹತ್ತಿರದ ದೇವಾಲಯದಲ್ಲಿ ಸಣ್ಣ ಸೇವೆಗಳನ್ನು ಆರಂಭಿಸಿ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವ ಮೂಲಕ ಸಮುದಾಯದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಸಾಧ್ಯ. ಹತ್ತಿರದ ದೇವಾಲಯದಲ್ಲಿಯೇ ದೈವಿಕ ಶಕ್ತಿ ಇರುತ್ತದೆ, ಅದನ್ನು ಅಭಿವೃದ್ಧಿಪಡಿಸುವುದು ಸ್ಥಳೀಯರ ಜವಾಬ್ದಾರಿಯಾಗಿದೆ.
ಇಲ್ಲಿಯ ದೇವಸ್ಥಾನದ ಸೇವಾ ಸಮಿತಿಯವರು ಹಲವಾರು ಬಾರಿ ಇಲ್ಲಿಯ ಮೂಲ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದರು ಸ್ಪಂದಿಸದೆ ಇರುವುದು ವಿಷಾದವಲ್ಲವೇ ಇದು?
ಇಲ್ಲಿಯ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವವರು ದೇವಸ್ಥಾನದ ಸೇವಾ ಸಮಿತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು. ಅಥವಾ ಸೇವಾ ಸಮಿತಿಯ ಬ್ಯಾಂಕಿನ ಕ್ಯೂಆರ್ ಕೋಡಿನಲ್ಲಿ ಸ್ಕ್ಯಾನ್ ಮಾಡಬಹುದು.
ದೇವಾಲಯದ ವಿಳಾಸ :
ಸುತ್ತಲು ತಪ್ಪಲಿನಲ್ಲಿ” ಪ್ರಶಾಂತ ವಾತಾವರಣದಲ್ಲಿದ್ದು, ಕರಾವಳಿ ಕರ್ನಾಟಕದ ಪ್ರಮುಖ ಶಿವನ ದೇವಾಲಯಗಳಲ್ಲಿ ಒಂದಾಗಿದೆ.
ಸ್ಥಳ: ಹೊರ್ನಾಡಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಕರ್ನಾಟಕ.
ಪ್ರಸಿದ್ಧ ಹೆಸರು : ಭಕ್ತರ ಇಷ್ಟಾರ್ಥ ಸಿದ್ಧಿಗಳನ್ನು ನೆರವೇರಿಸುವ ಮಹಾದೇವ ಮಾತನಾಡುವ ಮಹಾಲಿಂಗೇಶ್ವರ. ಶ್ರೀ ಮಹಾಲಿಂಗೇಶ್ವರ (ಶಿವ).
ವಿಶೇಷತೆ : ಭಕ್ತರ ಕೋರಿಕೆಗಳನ್ನು ಈಡೇರಿಸುವ ಮತ್ತು ನಂಬಿದವರಿಗೆ ಕಷ್ಟಕಾಲದಲ್ಲಿ ಮಾರ್ಗದರ್ಶನ ನೀಡುವ ಭಕ್ತರ ನಂಬಿಕೆಯ ಹೊನಾ೯ಡಿ ಹೊರ್ನಾಡಿ ವಲಕುತ್ತೂರು . ಪುರಾತನ ಇತಿಹಾಸ ತಕಾಲದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏಕವಾರ ಮಹಾರುದ್ರಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ..
