ಗಾಂಧಿಜಯಂತಿಯ ಪ್ರಯುಕ್ತ ಶ್ರೀ ಮಹಾವೀರ ಪದವಿ ಕಾಲೇಜು ಮೂಡಬಿದಿರೆ ಎನ್.ಎಸ್.ಎಸ್, ರೋವರ್,ರೇಂಜರ್ ಮತ್ತು ಲಯನ್ಸ್ ಕ್ಲಬ್ ನಿಡ್ಡೋಡಿ ಕಲ್ಲಮುಂಡ್ಕೂರು ಜಂಟಿ ಆಶ್ರಯದೊಂದಿಗೆ ಏಕದಿನ ಸ್ವಚ್ಛತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮೌಂಟ್ ಕಾರ್ಮೆಲ್, ಅಲಂಗಾರ್ ನಲ್ಲಿರುವ ವೃದ್ದಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಹಿರಿಯರೊಂದಿಗೆ ವಿದ್ಯಾರ್ಥಿಗಳು ಬೆರೆತರು.ಅವರಿಗೆಉಪಹಾರದ ವ್ಯವಸ್ತೆಯನ್ನು ಲಯನ್ಸ್ಕ್ಲಬ್ ನಿಡ್ಡೋಡಿ ಕಲ್ಲಮುಂಡ್ಕೂರು ಕ್ಲಬಿನ ವತಿಯಿಂದ ನೀಡಲಾಯಿತು.ನಂತರ ಹೆಜಮಾಡಿ ಬೀಚ್‌ನಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಹೆಚ್.ಐ.ವಿ ಏಡ್ಸ್ ಮತ್ತು ನಶ ಮುಕ್ತ ಭಾರತಜಾತವನ್ನು ಹಮ್ಮಿಕೊಂಡು ನಂತರ ರಾಷ್ಟ್ರೀಯು ಹೆದ್ದಾರಿ ಸ್ವಚ್ಛತೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನಿಡ್ಡೋಡಿಕಲ್ಲಮುಂಡ್ಕೂರು ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಸಂದೀಪ್ ಸುವರ್ಣ, ಕಾರ್ಯದರ್ಶಿ ರಾಜ್ ಪ್ರಸಾದ್, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಹಾಗೂ ಸೇವ ಚಟುವಟಿಕೆಯ ಉಸ್ತುವಾರಿಯಾಗಿರುವ ಯಶವಂತ ಶೆಟ್ಟಿ ಮತ್ತು ಕ್ಲಬಿನ ಸದಸ್ಯರು, ವಿದ್ಯಾರ್ಥಿಕ್ಷೇಮಪಾಲನ ಅಧಿಕಾರಿ ಪ್ರೊ.ಹರೀಶ್ ಹಾಗೂ ಎನ್.ಎಸ್.ಎಸ್‌ಅಧಿಕಾರಿ ಶಾರದ, ರೇಂಜರ್ ಅಧಿಕಾರಿ ಅರುಣ, ರೋವರ್ ಅಧಿಕಾರಿ ಸಂದೀಪ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಧಾಕೃಷ್ಣ ಶುಭ ಹಾರೈಸಿದರು, ಎನ್.ಎಸ್.ಎಸ್, ರೋವರ್, ರೇಂಜರ್‌ಘಟಕದ ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡು ಸ್ವಚ್ಛತಾ ಹೀ ಸೇವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.