ಮಹಾವೀರ ಎನ್.ಎಸ್.ಎಸ್.ನಿಂದ ಗುಂಡೂರಿ ಅನಾಥಾಶ್ರಮಕ್ಕೆ ಭೇಟಿ

0
28

ಮೂಡುಬಿದಿರೆ: ಮಹಾವೀರ ಕಾಲೇಜಿನ ಎನ್. ಎನ್.ಎಸ್. ವಿದ್ಯಾರ್ಥಿಗಳಿಂದ 2025-26 ನೇ ಸಾಲಿನ ಎನ್.ಎಸ್ ಎಸ್ ಶೈಕ್ಷಣಿಕ ಚಟುವಟಿಕಯ ಅಂಗವಾಗಿ ದತ್ತುಗ್ರಾಮವಾಗಿ ಸ್ವಿಕರಿಸಿದ ಹೊಸಂಗಡಿ ಪೇರಿಯ ಆರಂಬೋಡಿ ಎಂಬ ಗ್ರಾಮ ದಲ್ಲಿರುವ ಗುರುಚೈತನ್ಯ ಅನಾಥಾಶ್ರಮಕ್ಕೆ ಭೇಟಿ ಮಾಡಿ ಅಲ್ಲಿರುವ ಅನಾಥ ಜನರೊಂದಿಗೆ ಬೆರೆತು ನೊಂದ ಮನಸ್ಸುಗಳಿಗೆ ಧೈರ್ಯ ತುಂಬುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದರು. ಸುಮಾರು ಮಧ್ಯಾಹ್ನದವರೆಗೆ ಅವರ ಜೊತೆ ಬೆರೆತು ಅವರಿಗೆ ಸಿಹಿ ತಿಂಡಿ ಹಾಗೂ ದಿನನಿತ್ಯ ಬಳಕೆಯ ವಸ್ತುಗಳನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಹೊಸಂಗಡಿ ಗ್ರಾಮ ಪಂಚಾಯತಿನ ಪಂಚಾಯತು ಅಭಿವೃದ್ಧಿ ಅಧಿಕಾರಿಯಾದ ಗಣೇಶ್ ಶೆಟ್ಟಿ ಇವರು ಮಾತನಾಡಿ ವಿದ್ಯಾರ್ಥಗಳು ತಮ್ಮ ಹೆತ್ತವರನ್ನು ಅನಾಥರನ್ನಾಗಿ ಮಾಡಬಾರದು .ತಂದೆ ತಾಯಿ ಅಷ್ಟೇ ಅಲ್ಲ ಮನೆಯಲ್ಲಿರುವ ಯಾವುದೇ ವ್ಯಕ್ತಿಗಳನ್ನು ನಿರ್ಗತಿಕರಾಗಿ ಮಾಡಬಾರದು ಎಂಬ ಸಂದೇಶವನ್ನು ನೀಡಿದರು .ಹಾಗೆಯೇ ಸಮಾಜದಲ್ಲಿ ಇರುವ ಯಾವುದೇ ವ್ಯಕ್ತಿ ನಿರ್ಗತಿಕರಾಗಬಾರದು .ಇಂತಹ ನಿರ್ಗತಿಕರು ಕಂಡುಬಂದರೆ ಎನ್.ಎಸ್. ಎಸ್ ವಿದ್ಯಾರ್ಥಿಗಳು ಅವರ ಅವರ ಮನೆಗೆ ಸೇರಿಸುವ ಕೆಲಸವನ್ನು ಕೈಗೊಂಡು ಸಮಾಜಕ್ಕೆಮಾದರಿಯಾಗಬೇಕು ಎಂಬುದಾಗಿ ತಿಳಿಸಿದರು. ಹಾಗೆಯೇ ಅನಾಥಾಶ್ರಮವನ್ನು ನಡೆಸುತ್ತಿರುವ ಹೊನ್ನಯ್ಯ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಅಲ್ಲಿರುವ ವ್ಯಕ್ತಿಗಳ ಮಾಹಿತಿ ನೀಡಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶಾರದ ಎಲ್ಲರನ್ನು ವಂದಿಸಿದರು. ಹಾಗೆ ಎನ್.ಎಸ್ . ಎಸ್ ವಿದ್ಯಾರ್ಥಿ ನಾಯಕರಾದ ವನಿತಾ, ಕೀರ್ತನ್ , ಸಂಜು ಹಾಗೂ ಎನ್. ಎಸ್ ಎಸ್. ವಿದ್ಯಾರ್ಥಿಗಳು ಭಾಗವಹಿಸಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here