ಮಹಾವೀರ್ ಜೈನ್ ನೇತ್ರಾಲಯ ಉಚಿತ ನೇತ್ರ ತಪಾಸಣಾ ಶಿಬಿರ

0
11

ಬೆಂಗಳೂರು : ಫ್ರೀಡಂ ಪಾರ್ಕ್‌ನಲ್ಲಿ ನಡೆದ ಭಗವಾನ್ ಮಹಾವೀರ್ ಜಯಂತಿಯ ಪ್ರಯುಕ್ತ ಭಗವಾನ್ ಮಹಾವೀರ್ ಜೈನ್ ನೇತ್ರಾಲಯ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ದೀಪ ಉದ್ಘಾಟಿಸಿದರು.

ಮಹಾವೀರ್ ಜೈನ್ ನೇತ್ರಾಲಯದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಮತ್ತು ಉಪಾಧ್ಯಕ್ಷ ಪ್ರಕಾಶ್ ಖಾಂಟೆಡ್ . ಕಾರ್ಯದರ್ಶಿ ಮಹೇಂದ್ರ ಸೋಲಂಕಿ ಈ ಶಿಬಿರವನ್ನು ಆಯೋಜಿಸಿದ್ದರು

ಭಗವಾನ್ ಮಹಾವೀರ್ ಜಯಂತಿಗೆ ಆಗಮಿಸಿದ್ದ ಸಾವಿರಾರು ಜನರಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಸಮಾಲೋಚನೆಗಳನ್ನು ನೀಡಲಾಯಿತು ಮತ್ತು ಅಗತ್ಯವಿರುವವರಿಗೆ ಕನ್ನಡಕಗಳನ್ನು ವಿತರಿಸಲಾಯಿತು.

ಭಗವಾನ್ ಮಹಾವೀರ್ ಜೈನ್ ನೇತ್ರಾಲಯವು ಸಾಮಾಜಿಕ ಸೇವೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಈ ವಿಶೇಷ ಶಿಬಿರವನ್ನು ಆಯೋಜಿಸಿತ್ತು, ಇದರಿಂದಾಗಿ ಹೆಚ್ಚಿನ ಜನರು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಕಾಲಿಕವಾಗಿ ಗುರುತಿಸುವುದು ಮತ್ತು ಚಿಕಿತ್ಸೆ ಪಡೆಯಬಹುದು.

ಈ ಶಿಬಿರದಲ್ಲಿ ಸಂಘವಿ ಇಂದರಚಂದ್‌ಜಿ, ರಮೇಶ್ ಕುಮಾರ್‌.ಜಿ ಮತ್ತು ಮಂಗಲ್ ಚಂದ್‌ಜಿ ಬೋಹ್ರಾ, ಸಮಿತಿಯ ಸದಸ್ಯರಾದ ಭನ್ವರ್‌ಲಾಲ್ ಭಂಡಾರಿ, ದೀಪಕ್ ಧೋಕಾ, ಹಸ್ಮುಖ್ ಜೈನ್, ಅನಿಲ್ ಬಂಬ್, ಕಿರಣ್ ಗಡಿಯಾ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here