ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಜಿಲ್ಲೆ ಮತ್ತು ಮೂಡುಬಿದಿರೆಯ ಶ್ರೀ ಮಹಾವೀರ ಪದವಿಪೂರ್ವಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಬಾಲಕರ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟವು ಕಾಲೇಜಿನ ಜಿ.ವಿ.ಪೈ ಕ್ರೀಡಾಂಗಣದಲ್ಲಿ ನೆರವೇರಿತು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಪುನಿತ್ ಪೂಜಾರಿಯವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, “ಸೋಲು-ಗೆಲುವು ಎನ್ನುವುದು ಪ್ರತಿಯೊಂದು ಕ್ರೀಡೆಯಲ್ಲಿಯೂಇದೆ. ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯ”ಎಂದು ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೆ. ಅಭಯಚಂದ್ರಜೈನ್ ಮಾತನಾಡಿ, ಒಳ್ಳೆಯ ಕ್ರೀಡಾ ಪಟುಗಳಾಗಿ, ಮಾದರಿ ಕ್ರೀಡಾಪಟುಗಳಾಗಿ ಮೂಡಿಬರಬೇಕು ಎಂದು ಹಾರೈಸಿದರು. ವೇದಿಕೆಯಲ್ಲಿ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ, ಮೂಡುಬಿದಿರೆ ತಾಲೂಕು ಕ್ರೀಡಾ ಸಂಯೋಜಕರಾದ ನವೀನ್ ಎಂ. ಹೆಗ್ಡೆ ಉಪಸ್ಥಿತರಿದ್ದರು.
ಮಹಾವೀರ ಪದವಿಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷಿ÷್ಮ ಸ್ವಾಗತಿಸಿದರು.ಮೂಡಬಿದಿರೆ ಪುರಸಭಾ ಸದಸ್ಯ ಸುರೇಶ್‌ಕೋಟ್ಯಾನ್ ಹಾಗೂ ಹಳೆವಿದ್ಯಾರ್ಥಿ ಗೌರವ್ ಶೆಟ್ಟಿ ಬಹುಮಾನ ವಿತರಿಸಿದರು.ಅತಿಥೇಯಕಾಲೇಜಿನದೈಹಿಕ ಶಿಕ್ಷಣ ನಿರ್ದೇಶಕಅಕ್ಷಿತ್‌ರೈ ಬಹುಮಾನಿತರ ವಿವರ ನೀಡಿದರು.ಸಮಾಜಶಾಸ್ತçದಉಪನ್ಯಾಸಕಿ ಸುಜಾತಾಕಾರ್ಯಕ್ರಮ ನಿರೂಪಿಸಿದರು.
ಬಹುಮಾನಿತರ ವಿವರ:
ಬಾಲಕರ ವಿಭಾಗ: ಆಳ್ವಾಸ್ ಪ.ಪೂ. ಕಾಲೇಜು (ಪ್ರಥಮ ಸ್ಥಾನ); ಶ್ರೀ ಮಹಾವೀರ ಪ.ಪೂ. ಕಾಲೇಜು (ದ್ವಿತೀಯಸ್ಥಾನ), ಬಾಲಕಿಯರ ವಿಭಾಗ: ಆಳ್ವಾಸ್ ಪ.ಪೂ. ಕಾಲೇಜು (ಪ್ರಥಮ ಸ್ಥಾನ); ಶ್ರೀ ಮಹಾವೀರ ಪ.ಪೂ. ಕಾಲೇಜು (ದ್ವಿತೀಯಸ್ಥಾನ).