ಸರಕಾರದ ಯೋಜನೆಯನ್ನು ಯಶಸ್ವಿಗೊಳಿಸಿ:  ವಿಧ್ಯಾ

0
2

ಬ್ರಹ್ಮಾವರ:  ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ   ಪಿಎಂಇಜಿಪಿ ತರಬೇತಿಯ  ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧ್ಯಾ, ಡಿಸ್ಟ್ರಿಕ್ಟ್ ಆಫೀಸರ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಉಡುಪಿ

ಅವರು  ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ರುಡ್ ಸೆಟ್  ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದುಕೊಂಡಿರುವುದರಿಂದ, ತರಬೇತಿಯು ಉತ್ತಮವಾಗಿ ನೆರವೇರಿದೆ  ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಅಬಿಪ್ರಾಯ ಪಟ್ಟರು. ಹಾಗೆಯೇ  ಸರಕಾರದ ಯೋಜನೆ ಹಾಗೂ ಇಲ್ಲಿ ನೀಡಿರುವ ತರಬೇತಿ ಯಶಸ್ವಿಯಾಗಬೇಕಾದರೆ,  ಯಶಸ್ವಿ ಉದ್ಯಮಿಗಳಾದಲ್ಲಿ ಮಾತ್ರವೇ ಯೋಜನೆ ಹಾಗೂ ತರಬೇತಿ ಪರಿಪೂರ್ಣಗೊಳ್ಳುತ್ತದೆ ಎಂದರು. ಹಾಗಾಗಿ ದೇಶದ ಆರ್ಥಿಕತೆ ಅಭಿವೃದ್ಧಿಗೊಳ್ಳಬೇಕಾದರೆ  ಉದ್ಯಮ ಸೃಷ್ಟಿಯಾದಾಗ ಮಾತ್ರವೇ ಸಾಧ್ಯ. ಅಂತಹ ಅಭಿವೃದ್ಧಿಯ ಕೆಲಸ ನಮ್ಮಿಂದಾಗಬೇಕು. ಅದಕ್ಕಾಗಿ ಸರಕಾರ ಇಂತಹ ಸವಲತ್ತುಗಳನ್ನು ಒದಗಿಸುತ್ತಿವೆ. ಅದರ ಸದ್ಬಳಕೆಯಾಗಲಿ,  ವ್ಯವಹಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು, ನಿಷ್ಠೆ  ಹೊರಹೊಮ್ಮಿದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. 

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ  ನಿರ್ದೇಶಕರಾದ  ಡಾ. ಬೊಮ್ಮಯ್ಯ. ಎಂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ,  ಉದ್ಯಮಿ ಹಾಗೂ ಉದ್ಯಮಗಳನ್ನು  ಪ್ರೋತ್ಸಾಹಿಸುವ ಮಹತ್ವದ ಯೋಜನೆ ಇದಾಗಿದೆ. ಈ  ನಿಟ್ಟಿನಲ್ಲಿ ಸರಕಾರದ ಯೋಜನೆಯು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ತರಬೇತಿಯ ಅವಧಿಯಲ್ಲಿ ತಿಳಿಸಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಯಶಸ್ವಿ ಉದ್ಯಮಗಳಾಗಿ  ಎಂದು    ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. 

 ಈ ಸಂದರ್ಭದಲ್ಲಿ   ಕಾರ್ಯಕ್ರಮವನ್ನು ಉಪನ್ಯಾಸಕರಾದ ಚೈತ್ರ. ಕೆ ನಿರೂಪಿಸಿ, ಹಿರಿಯ ಉಪನ್ಯಾಸಕರಾದಸಂತೋಷ್ ಶೆಟ್ಟಿ ಸ್ವಾಗತಿಸಿದರು, ಹಿರಿಯ ಕಚೇರಿ ಸಹಾಯಕರಾದ . ರವಿ ವಂದಿಸಿದರು.

LEAVE A REPLY

Please enter your comment!
Please enter your name here