ಮಲಬಾರ್ ಗ್ರೂಪ್ ಅಧ್ಯಕ್ಷರಿಗೆ ಬಿಸಿನೆಸ್ ಭೂಷಣ್ ಪ್ರಶಸ್ತಿ

0
15

ಮಂಗಳೂರು : ಮಲಬಾರ್ ಸಮೂಹದ ಅಧ್ಯಕ್ಷ ಎಂ. ಪಿ. ಅಹಮ್ಮದ್ ಅವರಿಗೆ ಪ್ರತಿಷ್ಠಿತ ‘ಲೋಕಮತ್ ಮಹಾರಾಷ್ಟ್ರಿಯನ್ ಆಫ್ ದಿ ಇಯರ್ 2026’ ಸಮಾರಂಭದಲ್ಲಿ ‘ಬಿಸಿನೆಸ್ ಭೂಷಣ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಪ್ರಶಸ್ತಿ ಪ್ರದಾನ ಮಾಡಿದರು.

ಜಾಗತಿಕ ಜ್ಯುವೆಲ್ಲರಿ ರಿಟೇಲ್ ಕ್ಷೇತ್ರವನ್ನು ರೂಪಿಸುವಲ್ಲಿ ಎಂ. ಪಿ. ಅಹಮ್ಮದ್ ತೋರಿರುವ ನಾಯಕತ್ವ ಮತ್ತು ಸಮಾಜದ ಏಳಿಗೆಗಾಗಿ ಅವರು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಮುಂಬೈನ ಐತಿಹಾಸಿಕ ಗೇಟ್ ವೇ ಆಫ್ ಇಂಡಿಯಾದಲ್ಲಿ ಸಮಾರಂಭ ನಡೆಯಿತು.

ಲೋಕಮತ್ ಮೀಡಿಯಾ ಗ್ರೂಪ್ ಪ್ರಸ್ತುತಪಡಿಸಿದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಹಮ್ಮದ್ ಅವರ ಅದ್ಭುತ ಉದ್ಯಮಶೀಲತಾ ಪಯಣವನ್ನು ಗುರುತಿಸಿ ಗೌರವಿಸಲಾಯಿತು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯನ್ನು ವಿಶ್ವದ 5ನೇ ಅತಿದೊಡ್ಡ ಜ್ಯುವೆಲ್ಲರಿ ರಿಟೇಲರ್ ಆಗಿ ಮತ್ತು ಭಾರತೀಯ ಮೂಲದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲರ್ ಆಗಿ ಬೆಳೆಸುವಲ್ಲಿ ಅವರು ವಹಿಸಿದ ಪಾತ್ರವನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅವರನ್ನು ಶ್ಲಾಘಿಸಲಾಯಿತು.

ಈ ಗೌರವವು ಇಡೀ ಮಲಬಾರ್ ಕುಟುಂಬದ ಪರಿಶ್ರಮಕ್ಕೆ ಸಂದ ಗೌರವವಾಗಿದೆ ಮತ್ತು ಈ ಗೌರವವು ಹಲವು ವರ್ಷಗಳಿಂದ ನಮ್ಮ ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಹೊಣೆಗಾರಿಕೆ, ಪ್ರಾಮಾಣಿಕತೆ ಮತ್ತು ಸಮಾಜಕ್ಕೆ ಶಾಶ್ವತ ಮೌಲ್ಯವನ್ನು ಸೃಷ್ಟಿಸುವ ಬದ್ಧತೆಯ ಜೊತೆ ನಮ್ಮ ಎಲ್ಲಾ ಪಾಲುದಾರರ ಬೆಳವಣಿಗೆ ಕಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ನಾವು ಈ ಪಯಣದಲ್ಲಿ ಸಾಗುತ್ತಾ ಬಂದಿದ್ದೇವೆ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಪ್ರಶಸ್ತಿ ಸ್ವೀಕರಿಸಿದ ಅಹ್ಮದ್ ಹೇಳಿದರು.

LEAVE A REPLY

Please enter your comment!
Please enter your name here