ಮಲೆನಾಡು ಹ್ಯುಮ್ಯಾನಿಟೆರಿಯನ್ ಟ್ರಸ್ಟ್ ಬೆಳ್ವೆ ಇದರ ವತಿಯಿಂದ ಮದರಸ ವಿದ್ಯಾರ್ಥಿಗಳಿಗೆ ಪವಿತ್ರ ಕುರಾನ್ ವಿತರಣಾ ಕಾರ್ಯಕ್ರಮ

0
38

ಮದ್ರಸ ವಿದ್ಯಾರ್ಥಿಗಳಿಗೆ ಪವಿತ್ರ ಗ್ರಂಥ ಕುರಾನ್ ವಿತರಣೆ ಟೀಮ್ ಮಲೆನಾಡು ಹ್ಯುಮ್ಯಾನಿಟೆರಿಯನ್ ಟ್ರಸ್ಟ್ ಬೆಳ್ವೆ ಇದರ ವತಿಯಿಂದ ಅಜೆಕಾರು ಮೂಹಿದ್ದೀನ್ ಜುಮ್ಮ ಮಸೀದಿ ಹಾಗೂ ಶಿರ್ಲಾಲ್ ಊರಿನ ಮಸೀದಿಯಲ್ಲಿನ ಮದರಸ ವಿದ್ಯಾರ್ಥಿಗಳಿಗೆ ಪವಿತ್ರ ಕುರಾನ್ ವಿತರಣಾ ಕಾರ್ಯಕ್ರಮ ಇತ್ತಿಚೆಗೆ ಅಜೆಕಾರು ಮುಹಿಯುದ್ದೀನ್ ಮಸೀದಿಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಟೀಮ್ ಮಲೆನಾಡು ಹ್ಯುಮ್ಯಾನಿಟೆರಿಯನ್ ಟ್ರಸ್ಟ್ ಬೆಳ್ವೆ ಮುಸ್ತಾಕ್ ಅಹಮದ್ ಬೆಳ್ವೆ ವಹಿಸಿದ್ದರು.

ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಅಜೆಕಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಟ್ರಸ್ಟಿಗಳಾದ ನಜೀರ್ ಶಾ , ಮುಹಿಯುದ್ದೀನ್ ಜುಮ್ಮ ಮಸೀದಿಯ ಅಧ್ಯಕ್ಷರಾದ ಉಮರ್ ಪಾರೂಕ್,ಕಾರ್ಯದರ್ಶಿ ಅಬೂಸಾಲಿ,ಹಿರಿಯರಾದ ಜುಬೇರ್ ಸಾಹೇಬ್,ಮಸೀದಿಯ ಖತೀಬ್ ಅಬ್ದುಲ್ ಕರೀಂ ಫೈಜಿ,ಜನಪ್ರಿಯ ಸಂಸ್ಥೆಯ ಮುನವಾರ್ ಅಜೆಕಾರು,ಅಬ್ದುಲ್ ಅಜೀಜ್ ,ಸಿರಾಜ್ ಅಜೆಕಾರು, ಶಿರ್ಲಾಲ್ ಮಸೀದಿಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ಮೊಹಮ್ಮದ್ ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.ಟ್ರಸ್ಟಿ ಮೊಹಮ್ಮದ್ ಅರಾಫತ್ ವಂದಿಸಿದರು

LEAVE A REPLY

Please enter your comment!
Please enter your name here