ನ.1 ರಂದು ಮಳೆಹನಿ’ ಹೊಸ ಆಲ್ಬಂ ಸಾಂಗ್ ಬಿಡುಗಡೆ

0
120

ಮೂಡುಬಿದಿರೆ: ಪ್ರೇಕ್ಷಕರ ಮನ ಗೆಲ್ಲಲಿರುವ ಹೊಸ ಆಲ್ಬಮ್ ಸಾಂಗ್ ‘ಮಳೆಹನಿ’ ನವೆಂಬರ್ 1ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಈ ಹಾಡು ಪರ್ಪಲ್ ಹಿಟ್ಜ್ ಪ್ರೆಸೆಂಟ್ಸ್ ವತಿಯಿಂದ, ಬಯಲು ಸಿನಿಮ್ಯಾಟೀಕ್‌ ಯೂಟ್ಯೂಬ್‌ ಚಾನಲ್‌ ನಲ್ಲಿ ಸಂಜೆ 4 ಗಂಟೆಗೆ ಬಿಡುಗಡೆಗೊಳ್ಳಲಿದೆ.

ಈ ಆಲ್ಬಮ್‌ನಲ್ಲಿ ಪ್ರಮುಖ ಪಾತ್ರಗಳಲ್ಲಿ ಅನಿಷಾ ಶೆಟ್ಟಿ ಮತ್ತು ಪ್ರಸನ್ನ ಅಭಿನಯಿಸಿದ್ದು, ಪ್ರೇಮ ಮತ್ತು ಭಾವನೆಗಳ ಸೌಂದರ್ಯವನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ.

ಚಿತ್ರದ ನಿರ್ಮಾಪಕರು ಸೀತಾರಾಮ್ ಸುವರ್ಣ, ಸಹ-ನಿರ್ಮಾಪಕರಾಗಿ ಗುರುಪ್ರಸಾದ್ ಬಹ್ರೇನ್ ಕಾರ್ಯನಿರ್ವಹಿಸಿದ್ದಾರೆ. ಬರಹ ಮತ್ತು ನಿರ್ದೇಶನವನ್ನು ಪ್ರತಿಭಾವಂತ ನಿರ್ದೇಶಕಿ ಸ್ಪರ್ಶ ಗುರುಮೂರ್ತಿ ಅವರು ನಿರ್ವಹಿಸಿದ್ದಾರೆ.

ಗೀತೆಗಳು ಮತ್ತು ಚಿತ್ರಕಥೆ – ಕಾರ್ತಿಕ್ ಕೋಟ್ಯಾನ್ ಅವರ ಕಾವ್ಯಮಯ ಸ್ಪರ್ಶದಿಂದ ಹಾಡು ಅಧ್ಭುತವಾಗಿ ಮೂಡಿಬಂದಿದೆ. ಛಾಯಾಗ್ರಹಣ – ಸೌಜನ್ ಎಸ್.ಎಸ್. ಗ್ಯಾಲರಿ ಅವರ ಕಲಾತ್ಮಕ ದೃಶ್ಯ ಸಂಯೋಜನೆ, ಗಾನ – ದರ್ಶನ್ ಅವರ ಮನಸೂರೆಗೊಳ್ಳುವ ಧ್ವನಿ, ಮತ್ತು ಸಂಕಲನ ಹಾಗೂ ಪೋಸ್ಟರ್ ವಿನ್ಯಾಸ – ಅಭಿಷೇಕ್ ಎಲ್.ಎಸ್. ಆಚಾರ್ಯ ಅವರ ಶ್ರೇಷ್ಠ ತಂತ್ರಜ್ಞಾನದಿಂದ ಹಾಡು ಅದ್ಭುತವಾಗಿ ಮೂಡಿಬಂದಿದೆ.

ಪ್ರೀತಿ, ಭಾವನೆ, ಮತ್ತು ಮಳೆಗಿನ ನವೀನ ಸ್ಪರ್ಶವನ್ನು ಒಳಗೊಂಡ ‘ಮಳೆಹನಿ’ ಪ್ರೇಕ್ಷಕರಲ್ಲಿ ಹೊಸ ಅನುಭವ ಮೂಡಿಸಲಿದೆ ಎಂದು ತಂಡ ವಿಶ್ವಾಸ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here