ನಿರ್ವಹಣಾ ನಿರ್ದೇಶಕಿ ಬೀನಾ ವಾಹೀದ್ ಅವರ ಮಂಗಳೂರು ವಲಯದ ಭೇಟಿ – ಉದ್ಯೋಗಿಗಳ ಸಹಕಾರ ಮತ್ತು ಗ್ರಾಹಕಕೇಂದ್ರಿತ ಪ್ರಗತಿಗೆ ಬದ್ಧತೆ

0
7

ಬ್ಯಾಂಕ್ ಆಫ್ ಬಡೋದಾದ ಮಂಗಳೂರು ವಲಯಕ್ಕೆ ನಿರ್ವಹಣಾ ನಿರ್ದೇಶಕಿ ಶ್ರೀಮತಿ ಬೀನಾ ವಾಹೀದ್ ಅವರ ಎರಡನೇ ದಿನದ ಭೇಟಿಯು ಎರಡು ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿತ್ತು, ಒಂದು ಸಹಭಾಗಿತ್ವದ ವಲಯ ಕಚೇರಿ ಸಿಬ್ಬಂದಿ ಸಭೆ ಮತ್ತು ಮತ್ತೊಂದು ಉತ್ಸಾಹಭರಿತ ಗ್ರಾಹಕರ ಸಭೆ, ಈ ಎರಡೂ ಕಾರ್ಯಕ್ರಮಗಳೂ ಬ್ಯಾಂಕಿನ ಆಂತರಿಕ ಸಮನ್ವಯ ಮತ್ತು ಬಾಹ್ಯ ಸಂಬಂಧಗಳ ಬಲಪಡಿಕೆಯನ್ನು ಗಮನ ಕೇಂದ್ರವನ್ನಾಗಿ ಮಾಡಿಕೊಂಡಿವೆ.

ವಲಯ ಕಚೇರಿ ಸಿಬ್ಬಂದಿ ಸಭೆ: ಸಹಕಾರ ಮತ್ತು ಕೆಲಸದ ಸ್ಥಳ ಸಂಸ್ಕೃತಿಗೆ ಉತ್ತೇಜನ ಬೀನಾ ವಾಹೀದ್ ಅವರು ವಲಯ ಕಚೇರಿಯ ಎಲ್ಲಾ ಸಿಬ್ಬಂದಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕ ಭಾಷಣ ಮಾಡಿದರು. ಈ ಸಭೆ ಚಿಂತನೆಗೆ ತೊಡಗಿಸುವಂತದ್ದಾಗಿದ್ದು ಉತ್ಸಾಹದಾಯಕ ಮತ್ತು ಭವಿಷ್ಯ ನಿರ್ದೇಶಿತವಾಗಿತ್ತು. ತಂಡಗಳು ಪರಿಹಾರಕೇಂದ್ರಿತ ಮನೋಭಾವವನ್ನು ಅಳವಡಿಸಿಕೊಳ್ಳಬೇಕೆಂದು ಅವರು ಪ್ರೋತ್ಸಾಹಿಸಿದರು ಮತ್ತು ಗುರಿಗಳನ್ನು ಸಾಧಿಸಲು ವಿಭಾಗಾಂತರ ಸಹಕಾರದ ಅಗತ್ಯತೆಯನ್ನು ಒತ್ತಿ ಹೇಳಿದರು.

ಅವರು ತಮ್ಮ ಭಾಷಣದಲ್ಲಿ ಹೇಳಿದರು: ಯಾವುದೇ ಸಂಸ್ಥೆಯಲ್ಲಿ ವಿಶೇಷವಾಗಿ ಬ್ಯಾಂಕ್ ನಂತಹ ಚುರುಕು ಮತ್ತು ಜನಸಂಬಂಧಿತ ಸಂಸ್ಥೆಯಲ್ಲಿ, ವೈಯಕ್ತಿಕ ಸಂಬಂಧಗಳು ಕೆಲಸದ ಸ್ಥಳದ ಸಂಸ್ಕೃತಿಯ ನಿರ್ಮಾಣದಲ್ಲಿ, ಉದ್ಯೋಗಿಗಳ ತೃಪ್ತಿ ಮತ್ತು ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳು ನಿರ್ವಹಣಾತ್ಮಕ ಹರಿವನ್ನು ಖಚಿತಪಡಿಸಬಹುದು, ಆದರೆ ಸಹಕಾರ, ನಾವೀನ್ಯತೆ ಮತ್ತು ನಂಬಿಕೆಯನ್ನು ಉಂಟುಮಾಡುವುದು ಮಾನವ ಸಂಬಂಧಗಳ ಮೂಲಕ ಸಾಧ್ಯ.”

ಗ್ರಾಹಕರ ಸಭೆ: ನಂಬಿಕೆ ಮತ್ತು ಪಾರದರ್ಶಕತೆಯ ಬಲವರ್ಧನೆ ದಿನದ ಪ್ರಮುಖ ಆಕರ್ಷಣೆಯಾದ ಗ್ರಾಹಕರ ಸಭೆಯಲ್ಲಿ ಚಿಲ್ಲರೆ ಎಂಎಸ್ ಎಂಇ ಕೃಷಿ ಮತ್ತು ಎಚ್ ಎನ್ ಐ ವಿಭಾಗಗಳ 90ಕ್ಕೂ ಹೆಚ್ಚು ಪ್ರೀತಿಪಾತ್ರ ಗ್ರಾಹಕರು ಪಾಲ್ಗೊಂಡರು. ವಲಯ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಿರ್ವಹಣಾ ನಿರ್ದೇಶಕಿ ಗ್ರಾಹಕರೊಂದಿಗೆ ನೇರ ಸಂವಾದ ನಡೆಸಿದರು ಅವರ ಪ್ರತಿಕ್ರಿಯೆಗಳನ್ನು ಆಲಿಸಿದರು, ನಿರೀಕ್ಷೆಗಳನ್ನು ತಿಳಿದುಕೊಂಡು ಮುಂಬರುವ ಉಪಕ್ರಮಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬಡೋದಾದ ಇತ್ತೀಚಿನ ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನಕ್ಕೂ ಒಂದು ವಿಶೇಷ ಅಧಿವೇಶನವಿತ್ತು. ಈ ಮೂಲಕ ಗ್ರಾಹಕರು ಬ್ಯಾಂಕಿನ ಬದಲಾವಣಾ ಪ್ರಕ್ರಿಯೆ ಮತ್ತು ಸೇವಾ ಕೌಶಲ್ಯದ ಬಗ್ಗೆ ಹೆಚ್ಚು: ಅರಿವು ಪಡೆದುಕೊಂಡರು.

2 A

ಕಾರ್ಯಕ್ರಮದ ಸಂವಹನಾತ್ಮಕ ಸ್ವಭಾವವು ನಂಬಿಕೆ ಮತ್ತು ತೆರೆಯಲಿಕೆಯನ್ನು ಉತ್ತೇಜಿಸಿತು. ಗ್ರಾಹಕರು ಬ್ಯಾಂಕಿನ ಸುಲಭವಾಗಿ ಸಂಪರ್ಕಿಸಬಹುದಾದ ಸಿಬ್ಬಂದಿ, ನಾವೀನ್ಮತೆಯ ಸೇವೆಗಳು ಮತ್ತು ಬಲಪಡಿಸಿರುವ ಡಿಜಿಟಲ್ ಪ್ಲಾಟ್ ಫಾಮ್ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ನೀಡಿದ ಅಮೂಲ್ಯ ಸಲಹೆಗಳನ್ನು ಬ್ಯಾಂಕ್ ನಾಯಕತ್ವವು ಗೌರವಪೂರ್ವಕವಾಗಿ ಸ್ವೀಕರಿಸಿತು.
ಶ್ರೀಮತಿ ಬೀನಾ ವಾಹೀದ್ ಅವರ ಈ ಎರಡು ದಿನಗಳ ಭೇಟಿಯು ಬ್ಯಾಂಕಿನ ವ್ಯೂಹಾತ್ಮಕ ದೃಷ್ಟಿಕೋಣವನ್ನು ಬಲಪಡಿಸುವುದರೊಂದಿಗೆ, ಬ್ಯಾಂಕ್ ಮತ್ತು ಅದರ ಪ್ರಮುಖ ಹಿತದೋಷಿಗಳಾದ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಮಾನವೀಯ ಬಾಂಧವ್ಯವನ್ನು ಗಾಢಗೊಳಿಸಿದೆ.

ಈ ಭೇಟಿಯಲ್ಲಿ ಹಂಚಿಕೊಳ್ಳಲಾದ ಪ್ರೇರಣೆ, ಉತ್ಸಾಹ ಮತ್ತು ದೃಷ್ಟಿ ಕೋಣಗಳು ಮಂಗಳೂರು ವಲಯದ ಗ್ರಾಹಕ ಸೇವೆ ಮತ್ತು ಸಂಸ್ಕೃಾ ಕಾರ್ಯಕ್ರಮತೆಯ ಪಯಣದಲ್ಲಿ ಪ್ರೇರಣೆಯಾಗಿ ಮುಂದುವರಿಯಲಿವೆ.

LEAVE A REPLY

Please enter your comment!
Please enter your name here