ಮಂಚಿ ಕುಕ್ಕಾಜೆ ಪ್ರೌಢಶಾಲೆ; ಸ್ವಾತಂತ್ರೋತ್ಸವ ಸಂಭ್ರಮಾಚರಣೆ

0
181

ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ.) ಬಾಳ್ತಿಲ ಮತ್ತು ಜವಾಹರ್ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ, ಮಂಚಿ ಕುಕ್ಕಾಜೆ ಪ್ರೌಢಶಾಲೆ ಇಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ 10 ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ರಂಝೀನ ಬಾನು, ಫಾತಿಮತ್ ಆಜ್ಮಿಯ, ಆಯಿಷತ್ ಫಝೀಲ, ಸ್ವಾಲಿಯ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ, ಪಂಚಾಯತ್ ಸದಸ್ಯರು, ಶಾಲಾ ಮಂಡಳಿ ಅಧ್ಯಕ್ಷ ಗಣೇಶ್ ಐತಾಳ್, ವಾತ್ಸಲ್ಯಮಯಿ ಸಂಸ್ಥಾಪಕರು ನ್ಯಾಯವಾದಿ ಜವಾಹರ್ ಬಾಲ್ ಮಂಚ್ ನ ಜಿಲ್ಲಾಧ್ಯಕ್ಷರು ಶೈಲಜಾ ರಾಜೇಶ್ ಶಾಲಾ ಮುಖ್ಯ ಶಿಕ್ಷಕ ಅಶೋಕ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ರಾಶಿದ ವಂದಿಸಿ, ಶಿಕ್ಷಕಿ ಕುಸುಮ ಎಸ್. ಬಿ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here