ಮಂಡಾಡಿ : ಫೆ.07ರಂದು 12ನೇ ವರ್ಷದ ಶ್ರೀ ನಂದಿಕೋಣ ವರ್ಧಂತ್ಯುತ್ಸವ

0
46

ಶ್ರೀ ನಂದಿಕೋಣ ದೇವಸ್ಥಾನ, ನಂದಿಕೋಣ ಮಂಡಾಡಿ-ರಟ್ಟಾಡಿ ಎಂಬಲ್ಲಿ 07 ಫೆಬ್ರವರಿ 2026 ಶನಿವಾರ 12ನೇ ವರ್ಷದ ಶ್ರೀ ನಂದಿಕೋಣ ವರ್ಧಂತ್ಯುತ್ಸವವು ನಡೆಯಲಿರುವುದು. ಬೆಳಿಗ್ಗೆ ಗಂಟೆ 9.30 ರಿಂದ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ, ಸಂಜೆ ಗಂಟೆ 6.30 ರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ನಂದಿಕೋಣ ದೇವರಿಗೆ ದೀಪೋತ್ಸವವು ನಡೆಯಲಿದೆ.

ರಾತ್ರಿ ಗಂಟೆ 7-30ರಿಂದ ಕಲಾಧರ ಯಕ್ಷ ಬಳಗ (ರಿ.), ಜಲವಳ್ಳಿ ಹಾಗೂ ತೆಂಕುಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಿಜಾಲಪ್ರತಾಪ – ಕುಶಲವ ಯಕ್ಷಗಾನ ಕಾರ್ಯಕ್ರಮ ನಡೆಯಲಿರುವುದು.






LEAVE A REPLY

Please enter your comment!
Please enter your name here