ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಂದಿನಿಂದ ಮಂಡಲೋತ್ಸವ ಶುರು

0
31

ಉಡುಪಿ: ಇಲ್ಲಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಸೂರ್ಯೋದಯ ಕಾಲದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಜಪ ಯಜ್ಞದ ಅಂಗವಾಗಿ ವಿಶ್ವಾದ್ಯಂತ ಇರುವ ಶ್ರೀಕೃಷ್ಣ ಭಕ್ತರಿಗೆ ಸಾಮೂಹಿಕ ಶ್ರೀ ಕೃಷ್ಣ ಮಂತ್ರೋಪದೇಶ ನೀಡಿದರು.

ಶ್ರೀಪಾದರ ಉಪದೇಶದ ನಂತರ ನೆರೆದಿದ್ದ ಭಕ್ತರು 108 ಬಾರಿ ಶ್ರೀ ಕೃಷ್ಣ ಮಂತ್ರ ಪಠಣ ಮಾಡಿದರು. ಇದಕ್ಕೂ ಮುನ್ನ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇವರು ದೀಪ ಬೆಳಗುವುದರ ಮೂಲಕ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಡಲೋತ್ಸವದ ಅಂಗವಾಗಿ ವಿವಿಧ ಯೋಗ ಸಂಸ್ಥೆಗಳ ಯೋಗಾರ್ಥಿಗಳು 48 ಸೂರ್ಯ ನಮಸ್ಕಾರ ಮಾಡಿದರು. ಶ್ರೀ ರಾಘವೇಂದ್ರ ಭಟ್ ಪಣಿಯಾಡಿ ಯವರು ಸ್ವಾಗತಿಸಿದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ರಮೇಶ್ ಭಟ್ ಧನ್ಯವಾದ ವಿತ್ತರು.

LEAVE A REPLY

Please enter your comment!
Please enter your name here