ಮಂದಾರರ ಬೀರದ ಬೊಲ್ಪು ತುಳು ಕಾವ್ಯ ಯಾನ – 28 ಯಶಸ್ವಿ

0
114

ಮೂಡುಬಿದಿರೆ: ತುಳವ ಮಹಾಸಭೆ ಮೂಡುಬಿದಿರೆ, ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ, ಮಂದಾರ ಪ್ರತಿಷ್ಠಾನ (ರಿ) ಮಂಗಳೂರು ತುಳು ಕೂಟ ಬೆದ್ರ ಇವರ ಸಹಯೋಗದಲ್ಲಿ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ಬೀರದ ಬೊಲ್ಬು ಶ್ರೀ ಕೃಷ್ಣನ ಬಾಲ ಲೀಲೆ ಕಾವ್ಯಯಾನ ಜೈನ ಮಠದ ಅಂಗಣದಲ್ಲಿ ಪ್ರಬುದ್ಧ ಪ್ರೇಕ್ಷಕರ ಉಪಸ್ಥಿತಿಯೊಂದಿಗೆ ಪ್ರೇಕ್ಷಕರಿಗೆ ವಿಶಿಷ್ಟ ಸಾಂಸ್ಕೃತಿಕ ಸವಿಯನ್ನು ನೀಡಿದೆ

ಬೆದ್ರದ ಜೈನ ಮಠ, ಅಂಗಣದಲ್ಲಿ 28ನೇ ತುಳು ಕಾವ್ಯಯಾನದ ಅಂಗವಾಗಿ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರ ಕೃಷ್ಣನ ಕಥೆ ಬೀರದ ಬೊಲ್ಬು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ದೀಪ ಬೆಳಗಿಸಿ ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.

ಸಂಗೀತ ನಿರ್ದೇಶಕ, ತುಳುವ ಮಹಾಸಭೆಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ್ ಸಪ್ರೆ ಸುಶ್ರಾವ್ಯವಾಗಿ ತುಳುನಾಡ ಪ್ರಾರ್ಥನೆ ಗೀತೆಯನ್ನು ಹಾಡಿ ಕಾರ್ಯಕ್ರಮ ಆರಂಭಕ್ಕೆ ಮುನ್ನುಡಿಯಾದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ- ದುನಿಪು ಪ್ರಶಾಂತ ರೈ ಪುತ್ತೂರು ಹಾಗೂ ರಚನಾ ಚಿತ್ಕಲ್ ಸುಗಿಪು ಮತ್ತು ಎಂ. ದೇವಾನಂದ ಭಟ್ ಇವರ ಮದ್ದಳೆ ಯೊಂದಿಗೆ ಸತತ ಮೂರು ಗಂಟೆಗಳ ಕಾಲ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ಪ್ರಬುದ್ಧ ದುನಿಪು ಅತ್ಯಂತ ಶ್ರೀಮಂತ ತುಳು ಭಾಷೆಯಿಂದ ಮನಮುಟ್ಟುವಂತಿತ್ತು, ಪ್ರಾಧ್ಯಾಪಕ ಪ್ರಶಾಂತ ರೈ ಪುತ್ತೂರು ಯಕ್ಷಗಾನ ಶೈಲಿಯ ಸುಗಿಪು ಪ್ರೇಕ್ಷಕರ ಮನಸ್ಸನ್ನು ತಲುಪಿತು, ರಚನಾ ಚಿತ್ಕಲ್ ಇವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅತಿ ಚಿಕ್ಕ ವಯಸ್ಸಿನಲ್ಲಿ ತುಳು ವಾಲ್ಮೀಕಿ ಮಂದಾರರ ಮಂದಾರ ರಾಮಾಯಣ ಮತ್ತು ಬೀರದ ಬೊಲ್ಪು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಹಾಕವಿಯ ಮಹಾಕಾವ್ಯಗಳ ಪ್ರಸ್ತುತಿಯಲ್ಲಿ ಪ್ರೇಕ್ಷಕರ ಮನೆಗೆಲ್ಲುವಲ್ಲಿ ಯಶಸ್ವಿಯಾದರು, ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿ ಶುಭ ಹಾರೈಸಿದರು. ಯಕ್ಷಗಾನ ಸಂಘಟಕ ದೇವಾನಂದ ಭಟ್ಟರ ಮದ್ದಳೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಕಾರ್ಯಕ್ರಮದ ಸಮಾರೋಪದಲ್ಲಿ ಶಾರದಾಮಣಿ, ಡಾ. ಮಂದಾರ ರಾಜೇಶ್ ಭಟ್, ಜಯಂತಿ ಬಂಗೇರ, ಚಂದ್ರಹಾಸ ದೇವಾಡಿಗ, ಡಾ. ರಾಜೇಶ್ ಆಳ್ವ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಸುದೇಶ್ ಕುಮಾರ್ ಪಟ್ಣಶೆಟ್ಟಿ ಉಪಸ್ಥಿತರಿದ್ದರು. ಜೈನ ಮಠದ ವತಿಯಿಂದ ಪೂಜ್ಯ ಸ್ವಾಮೀಜಿಯವರು ಬೀರದ ಬೊಲ್ಪು ಕಲಾವಿದರಿಗೆ ಶಾಲು ಹೊದಿಸಿ ಆಶೀರ್ವದಿಸಿದರು.

ಕಾರ್ಯಕ್ರಮ ಪ್ರಸಾರದಲ್ಲಿ ತುಳು ವರ್ಲ್ಡ್, ತುಳುನಾಡು ವಾರ್ತೆ, ರೇಡಿಯೋ ಸಾರಂಗ್, ಸಹಕಾರ ನೀಡಿ ಕಾರ್ಯಕ್ರಮದ ಯಶಸ್ವಿಗೆ ತನ್ನ ಕೊಡುಗೆಯನ್ನು ನೀಡಿತು, ಒಟ್ಟಾರೆಯಾಗಿ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಯಿತು, ಸಭಾಂಗಣದಲ್ಲಿ ನೆರೆದ ಜನರ ಮನ ಗೆದ್ದಿತು. ತುಳು ವಾಲ್ಮೀಕಿ ಮಂದಾರರ ಕಾರ್ಯಕ್ರಮ ಇನ್ನಷ್ಟು ಬರಲಿ, ತುಳು ಭಾಷೆ ಬೆಳಗಲಿ, ಜಗತ್ತಿನೆಲ್ಲಡೆ ಪಸರಿಸಲಿ ಪತ್ರಿಕೆಯ ಹಾರೈಕೆಯಾಗಿದೆ

ಸರ್ವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ಡಾ. ರಾಜೇಶ್ ಆಳ್ವ ಕಾರ್ಯಾಧ್ಯಕ್ಷರು ತುಳುವ ಮಹಾಸಭೆ ಮತ್ತು ಮಂದಾರ ರಾಜೇಶ್ ಭಟ್ ಅಧ್ಯಕ್ಷರು ಮಂದಾರ ಪ್ರತಿಷ್ಠಾನ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಪೂಜ್ಯ ಸ್ವಾಮೀಜಿಯವರು ಮಾತನಾಡಿ ತುಳು ಭಾಷೆಗೆ ಮಂದಾರರ ಕೊಡುಗೆ ಅನನ್ಯ ತುಳು ಭಾಷೆ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಎಲ್ಲರನ್ನು ಅಭಿನಂದಿಸುವುದರ ಜೊತೆಗೆ ತುಳು ಭಾಷೆಯ ಆಧ್ಯಾತ್ಮಿಕ ಮತ್ತು ಪ್ರಬುದ್ಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಸಭಾಂಗಣದಲ್ಲಿ ಎಲ್ಲರ ಜೊತೆ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷವಾಗಿತ್ತು.

ವರದಿ :-ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here