ನಗರದ ವಿಮಾನ ನಿಲ್ದಾಣದಿಂದ ಬುಧವಾರ ಬೆಂಗಳೂರು ಹಾಗೂ ಮುಂಬೈಗೆ ತೆರಳಬೇಕಿದ್ದ ಮತ್ತು ಆಗಮಿಸಬೇಕಾಗಿದ್ದ 8 ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಂಡಿರುವುದಾಗಿ ವರದಿಯಾಗಿದೆ.
ಡಿ.11 ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ 3, ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ 3, ಮುಂಬೈಯಿಂದ ಮಂಗಳೂರಿಗೆ 1 ಹಾಗೂ ಮಂಗಳೂರಿನಿಂದ ಮುಂಬೈಗೆ ತೆರಳಬೇಕಿದ್ದ 1 ವಿಮಾನಗಳು ರದ್ದುಗೊಂಡಿದೆ ಎಂದು ತಿಳಿದು ಬಂದಿದೆ. ಡಿ. 12 ಮತ್ತು 13 ರಂದು ಬೆಂಗಳೂರಿನಿಂದ ಮಂಗಳೂರಿಗೆ 2, ಮಂಗಳೂರಿನಿಂದ ಬೆಂಗಳೂರಿಗೆ 2, ಮುಂಬೈಯಿಂದ ಮಂಗಳೂರಿಗೆ 1 ಹಾಗೂ ಮಂಗಳೂರಿನಿಂದ ಮುಂಬೈಗೆ 1 ವಿಮಾನ ಹಾರಾಟ ರದ್ದುಗೊಂಡಿದೆ.
ಇಂಡಿಗೋ ಸಂಸ್ಥೆ ಡಿ. 13ರ ತನಕ ವಿಮಾನ ರದ್ದು ಮಾಡಿರುವುದರಿಂದ ಟಿಕೆಟ್ ಕಾಯ್ದಿರಿಸಿದವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ ,ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

